ಇಳಕಲ್ಲ ನಗರದ ಮುಸ್ಲಿಂ ಸಮಾಜದ ಯುವ ಮುಖಂಡ ರಾಜ ಮಹಮ್ಮದ್ ಮನೆಗೆ ಕೊಪ್ಪಳ ಗವಿಸಿದ್ದೇಶ್ವರ ಶ್ರೀಗಳು ಆಕಸ್ಮಿಕ ಭೇಟಿ ನೀಡಿ ಅಚ್ಚರಿ ಮೂಡಿಸಿದರು.
ಕನ್ನಡಪ್ರಭ ವಾರ್ತೆ ಇಳಕಲ್ಲ
ಇಳಕಲ್ಲ ನಗರದ ಮುಸ್ಲಿಂ ಸಮಾಜದ ಯುವ ಮುಖಂಡ ರಾಜ ಮಹಮ್ಮದ್ ಮನೆಗೆ ಕೊಪ್ಪಳ ಗವಿಸಿದ್ದೇಶ್ವರ ಶ್ರೀಗಳು ಆಕಸ್ಮಿಕ ಭೇಟಿ ನೀಡಿ ಅಚ್ಚರಿ ಮೂಡಿಸಿದರು.ಇಳಕಲ್ಲದ ರಾಜ ಮಹಮ್ಮದ್ ಕೊಪ್ಪಳದ ಗವಿಸಿದ್ದೇಶ್ವರ ಮಠದ ಪರಮ ಭಕ್ತರು. ಕೊಪ್ಪಳ ಶ್ರೀಮಠಕ್ಕೆ ಹೋದಾಗ ಒಂದು ಬಾರಿ ನಮ್ಮ ಮನೆಗೆ ಆಗಮಿಸುವಂತೆ ಆಗಾಗ ಮನವಿ ಮಾಡುತ್ತಿದ್ದರು. ಶ್ರೀಗಳು ಇಳಕಲ್ಲ ನಗರದ ಮೂಲಕ ಕೊಪ್ಪಳಕ್ಕೆ ಪ್ರಯಾಣಿಸುವಾಗ ರಾಜು ಅವರ ನೆನಪಾಗಿ ವಾಹನವನ್ನು ಇಳಕಲ್ಲ ನಗರದ ರಾಜು ಮಹಮ್ಮದ ಮನೆಯತ್ತ ಹೋಗಲು ತಿಳಿಸಿದರು. ಶ್ರೀಗಳು ಮನೆಗೆ ಬರುತ್ತಿರುವುದನ್ನು ಕೇಳಿ ರಾಜು ಮಹಮ್ಮದ್ ಹಾಗೂ ಕುಟುಂಬದವರ ಸಂತಸ ಹೇಳತಿರದು. ಮನೆಗೆ ಬಂದ ಶ್ರೀಗಳನ್ನು ಸ್ವಾಗತಿಸಿಕೊಂಡ ರಾಜು ಕುಟುಂಬದ ಪರವಾಗಿ ಗೌರವ ಸತ್ಕಾರ ಮಾಡಿದರು. ರಾಜು ಮಹಮ್ಮದ್ ಸಮಾಜ ಸೇವೆಗೆ ಶ್ರೀಗಳು ಶ್ರೀಮಠದ ಪರವಾಗಿ ರಾಜು ಮಹಮ್ಮದಗೆ ಗೌರವಿಸಿ ಸತ್ಕರಿಸಿದರು.