ಸರ್ಕಾರದ ಗ್ಯಾರಂಟಿ ಯೋಜನೆಗಳು, ನಮ್ಮ ತಂದೆಯವರು ಮಾಡಿದ ಸೇವೆಯೇ ನನ್ನನ್ನು ಜನತೆ ಎತ್ತಿಹಿಡಿಯುತ್ತಾರೆಂಬ ಭರವಸೆ ಇದೆ ಎಂದು, ಬಾಗಲಕೋಟೆ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಉಮೇಶ ಮೇಟಿ ಹೇಳಿದರು.
ಕನ್ನಡಪ್ರಭ ವಾರ್ತೆ ಅಮೀನಗಡ
ಸರ್ಕಾರದ ಗ್ಯಾರಂಟಿ ಯೋಜನೆಗಳು, ನಮ್ಮ ತಂದೆಯವರು ಮಾಡಿದ ಸೇವೆಯೇ ನನ್ನನ್ನು ಜನತೆ ಎತ್ತಿಹಿಡಿಯುತ್ತಾರೆಂಬ ಭರವಸೆ ಇದೆ ಎಂದು, ಬಾಗಲಕೋಟೆ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಉಮೇಶ ಮೇಟಿ ಹೇಳಿದರು.ಸಮೀಪದ ಸಿದ್ದನಕೊಳ್ಳದ ತಪಸ್ವಿ ಸಿದ್ದಪ್ಪಜ್ಜನ ಗದ್ದುಗೆಗೆ ಭೇಟಿ ನೀಡಿ, ಗದ್ದುಗೆ ಆಶೀರ್ವಾದದ ತೆಂಗಿನಕಾಯಿ ಸಮರ್ಪಿಸಿ ಮಾತನಾಡಿ, ಶ್ರೀಗಳ ಆಶೀರ್ವಾದ ಪಡೆಯಲು ಶ್ರೀಮಠಕ್ಕೆ ಬಂದಿರುವುದಾಗಿ ತಿಳಿಸಿದರು.
ಕೆಎಂಎಫ್ ಮಾಜಿ ಅಧ್ಯಕ್ಷ, ಹಾಲಿ ನಿರ್ಧೇಶಕ ಸಂಗಣ್ಣ ಹಂಡಿ, ತಾ.ಪಂ.ಮಾಜಿ ಅಧ್ಯಕ್ಷ ಬಿ.ಸಿ.ಅಂಟರತಾನಿ, ಐಹೊಳೆ ಪಿಕೆಪಿಎಸ್ ಅಧ್ಯಕ್ಷ ಸಿದ್ದು ಹೂಗಾರ, ತಾ.ಪಂ.ಮಾಜಿ ಅಧ್ಯಕ್ಷ ಮುತ್ತಣ್ಣ ಮುಳ್ಳೂರ,ಸಿದ್ದಣ್ಣ ಮೇಟಿ ಇತರರಿದ್ದರು.