ಕೊಪ್ಪಳ ಇನ್ನರ್‌ವ್ಹೀಲ್ ಕ್ಲಬ್‌ಗೆ ಅತ್ಯುತ್ತಮ ಕ್ಲಬ್ ಗೌರವ

| Published : Jul 17 2025, 12:30 AM IST

ಕೊಪ್ಪಳ ಇನ್ನರ್‌ವ್ಹೀಲ್ ಕ್ಲಬ್‌ಗೆ ಅತ್ಯುತ್ತಮ ಕ್ಲಬ್ ಗೌರವ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲೆಯಲ್ಲಿ 2024-25ನೇ ಸಾಲಿನಲ್ಲಿ ಸಂಸ್ಥೆಯು ವಿಕಲಚೇತನರ ಪುನಃಶ್ಚೇತನ ಕಾರ್ಯಕ್ರಮದಡಿ ₹ 49 ಲಕ್ಷ ಮೌಲ್ಯದ 47 NeoBolt ಎಲೆಕ್ಟ್ರಿಕ್ ವಾಹನ ವಿತರಣೆ, ಮಹಿಳಾ ಸಬಲೀಕರಣ ಕಾರ್ಯಕ್ರದಡಿ ಹೊಲಿಗೆ ಯಂತ್ರ ವಿತರಣೆ ಸೇರಿದಂತೆ ವಿವಿಧ ಸೇವೆ ಸಲ್ಲಿಸಿದ್ದರಿಂದ ಪ್ರಶಸ್ತಿ ಪ್ರದಾನ.

ಕೊಪ್ಪಳ:

ಕೊಪ್ಪಳ ಇನ್ನರ್‌ವ್ಹೀಲ್ ಕ್ಲಬ್ (ಜಿಲ್ಲೆ 316) ಸಂಸ್ಥೆಯು 2024-25ನೇ ಸಾಲಿಗೆ ಅತ್ಯುತ್ತಮ ಸಾಮಾಜಿಕ ಸೇವೆಗಾಗಿ ‘ಅತ್ಯುತ್ತಮ ಕ್ಲಬ್ ಪ್ರಶಸ್ತಿ''''ಗೆ ಭಾಜನವಾಗಿದೆ.

ಮಂಗಳವಾರ ಕ್ಲಬ್ ವತಿಯಿಂದ ಹೊಸಪೇಟೆಯಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಇನ್ನರ್‌ವ್ಹೀಲ್ ಕ್ಲಬ್ ಸಭಾಧ್ಯಕ್ಷರಾದ ಸುಷ್ಮಾ ಪತಾಂ ಪ್ರಶಸ್ತಿ ಸ್ವೀಕರಿಸಿದರು. ಇನ್ನರ್‌ವ್ಹೀಲ್ ಕ್ಲಬ್ ಜಿಲ್ಲೆ-316 ಅಡಿ ಈ ಭಾಗದ 29 ಇನ್ನರ್‌ವ್ಹೀಲ್ ಕ್ಲಬ್‌ಗಳಿದ್ದು, ಅವುಗಳಲ್ಲಿ ಕೊಪ್ಪಳ ಕ್ಲಬ್ ವಿವಿಧ ಸಾಮಾಜಿಕ ಕ್ಷೇತ್ರಗಳಲ್ಲಿ ಮಹತ್ವದ ಕೊಡುಗೆ ನೀಡಿದ ಹಿನ್ನೆಲೆಯಲ್ಲಿ ಒಟ್ಟು 13 ವಿಭಾಗಗಳಲ್ಲಿ ಪ್ರಶಸ್ತಿ ಪಡೆದು, ಪ್ರಥಮ ಸ್ಥಾನ ಪಡೆದುಕೊಂಡಿದೆ. ಉಮಾ ತಂಬ್ರಳ್ಳಿ-ಸೂಪರ್ ಸ್ಟಾರ್ ಅಧ್ಯಕ್ಷೆ, ನಾಗವೇಣಿ ಗರೂರ-ಅತ್ಯುತ್ತಮ ಸಂಪಾದಕಿ, ಆಶಾ-ಅತ್ಯುತ್ತಮ ಖಜಾಂಚಿ, ಮಧು ಶೆಟ್ಟರ್-ಅತ್ಯುತ್ತಮ ISO ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಜಿಲ್ಲೆಯಲ್ಲಿ 2024-25ನೇ ಸಾಲಿನಲ್ಲಿ ಸಂಸ್ಥೆಯು ವಿಕಲಚೇತನರ ಪುನಃಶ್ಚೇತನ ಕಾರ್ಯಕ್ರಮದಡಿ ₹ 49 ಲಕ್ಷ ಮೌಲ್ಯದ 47 NeoBolt ಎಲೆಕ್ಟ್ರಿಕ್ ವಾಹನ ವಿತರಣೆ, ಮಹಿಳಾ ಸಬಲೀಕರಣ ಕಾರ್ಯಕ್ರದಡಿ ಹೊಲಿಗೆ ಯಂತ್ರ ವಿತರಣೆ, ಹ್ಯಾಪಿ ಶಾಲಾ ಯೋಜನೆಯಡಿ ಸರ್ಕಾರಿ ಶಾಲೆಗಳ ದತ್ತು ಸ್ವೀಕಾರ ಮೂಲಕ ಮೂಲಭೂತ ಸೌಕರ್ಯ ಅಭಿವೃದ್ಧಿ, ವಿದ್ಯಾರ್ಥಿನಿಯರಿಗೆ ಉಚಿತ ಕಂಪ್ಯೂಟರ್ ತರಬೇತಿ, ಇತ್ಯಾದಿ ಸೇವಾ ಕಾರ್ಯವನ್ನು ಕ್ಲಬ್‌ ಹಮ್ಮಿಕೊಂಡಿದ್ದನ್ನು ಆಧರಿಸಿ ಪ್ರಶಸ್ತಿ ನೀಡಲಾಗಿದೆ. ಕಾರ್ಯಕ್ರಮದಲ್ಲಿ ಡಾ. ರಾಧಾ ಕುಲಕರ್ಣಿ, ಶರಣಮ್ಮ ಪಾಟೀಲ್, ಸುಜಾತಾ ಪಟ್ಟಣಶೆಟ್ಟಿ, ಪ್ರತಿಮಾ ಪಟ್ಟಣಶೆಟ್ಟಿ, ಪದ್ಮಾ ಜೈನ್, ಮಮತಾ ಶೆಟ್ಟರ್, ಸುಧಾ ಶೆಟ್ಟರ್, ನೀತಾ ತಂಬ್ರಳ್ಳಿ, ಶಾರದಾ ದಾದಮಿ, ರೇಖಾ ಕಡ್ಲೆ, ಮಧು ಶೆಟ್ಟರ್, ಪರಿಮಳಾ, ಜಯಶ್ರೀ ಲತಾ ಪಟ್ಟಣಶೆಟ್ಟಿ, ಹೇಮಾ ಬೆಳ್ಳಾರಿ, ಮೀನಾಕ್ಷಿ ಸಿ.ಬಿ, ನಾಗವೇಣಿ ಗರೂರ, ಸುವರ್ಣ ಶೆಟ್ಟರ್, ಅನಿತಾ ಬಜಾರಮಠ, ನಾಗರತ್ನಾ ಮತ್ತು ಶಕುಂತಲಾ ಪಟ್ಟಣಶೆಟ್ಟಿ ಹಾಗೂ ವಿವಿಧ ಜಿಲ್ಲೆಯ ಪದಾಧಿಕಾರಿಗಳು ಹಾಗೂ ಜಿಲ್ಲಾಮಟ್ಟದ ಸದಸ್ಯರು ಉಪಸ್ಥಿತರಿದ್ದರು.