ಸಾರಾಂಶ
ಕನ್ನಡಪ್ರಭ ವಾರ್ತೆ ಕುಂದಾಪುರಇಲ್ಲಿನ ಪಾಂಡೇಶ್ವರ ಸಮೀಪದ ಮೂಡಹಡು ಶ್ರೀ ಕ್ಷೇತ್ರ ಕಳಿಬೈಲ್ ಶ್ರೀ ತುಳಸಿ ಅಮ್ಮ, ಶಿರಸಿ ಮಾರಿಕಾಂಬೆ, ಪಂಜುರ್ಲಿ ಮತ್ತು ಸ್ವಾಮಿ ಕೊರಗಜ್ಜ ಸಪರಿವಾರ ದೈವಸ್ಥಾನ ಇದರ ಜೀರ್ಣೋದ್ದಾರ, ಸಲುವಾಗಿ ಪಾಕಶಾಲೆ, ಭೋಜನ ಶಾಲೆಯ ಸಂಕಲ್ಪ ನಿಧಿ ಪೋಸ್ಟರನ್ನು ಕೋಟದ ಮಣೂರು ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್ ಬಿಡುಗಡೆ ಮಾಡಿದರು.ನಂತರ ಮಾತನಾಡಿದ ಈ ದೇಶ ಧಾರ್ಮಿಕವಾಗಿ ನಾನಾ ರೀತಿಯ ಪರಂಪರೆಗಳಿಂದ ಸಂರಕ್ಷಿತವಾಗಿದೆ ಒಂದೊಂದು ರೀತಿಯಲ್ಲಿ ಶ್ರದ್ಧಾ ಭಕ್ತಿಯ ಕ್ಷೇತ್ರ ತಾಣಗಳು ಕಾಲಕ್ಕೆ ಅನುಗುಣವಾಗಿ ಅವತಾರ ತಾಳಿ ಪ್ರಸಿದ್ಧಿ ಪಡೆಯುತ್ತಿವೆ. ಕಳಿಬೈಲ್ ನಂತಹ ಕೊರಗಜ್ಜನ ತಾಣಗಳು ಈ ಕಲಿಯುಗದಲ್ಲಿ ಭಕ್ತರ ಎಲ್ಲಾ ಬೇಡಿಕೆಗಳನ್ನು ಈಡೇರಿಸುತ್ತಿವೆ. ಇಂಥಹ ಕ್ಷೇತ್ರಗಳು ಮತ್ತಷ್ಟು ಅಭಿವೃದ್ಧಿ ಹೊಂದಲಿ, ಆ ಮೂಲಕ ಊರು, ನಾಡಿ ಅಭಿವೃದ್ಧಿಯಾಗಲಿ ಎಂದು ಹಾರೈಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೈವಸ್ಥಾನದ ಮೊಕ್ತೇಸರ ಎಮ್ ಸಿ ಚಂದ್ರಶೇಖರ್ ಪಾಂಡೇಶ್ವರ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ರಾಜ್ಯ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಉಪಾಧ್ಯಕ್ಷ ಐರೋಡಿ ವಿಠಲ್ ಪೂಜಾರಿ, ಯಕ್ಷಕಲಾವಿದ ಪ್ರವೀಣ್ ಗಡಿಯಾರ ಬಾರ್ಕೂರು, ಮಲ್ಪೆ ಪೊಲೀಸ್ ಠಾಣಾಧಿಕಾರಿ ಗುರುನಾಥ್ ಹಾದಿಮನೆ, ಉಡುಪಿ ಟೌನ್ ಪೋಲಿಸ್ ಠಾಣೆಯ ಎ ಎಸ್‌ಐ ಜಯಕರ ಐರೊಡಿ, ಶ್ರೀ ಕ್ಷೇತ್ರದ ಪಾತ್ರಿಗಳಾದ ನವೀನ್ ಪಾತ್ರಿ ಕುಂಜಿಬೆಟ್ಟು, ನಿವೃತ್ತ ಬ್ಯಾಂಕ್ ಅಧಿಕಾರಿ ಪಂಜು ಪೂಜಾರಿ ಯಡಬೆಟ್ಟು,ದೈವಸ್ಥಾನದ ಗೌರವ ಸಲಹೆಗಾರ ಶಶಿಧರ್ ರಾವ್ ಮತ್ತಿತರರು ಇದ್ದರು. ಕಾರ್ಯಕ್ರಮವನ್ನು ರಾಘವೇಂದ್ರರಾಜ್ ಸ್ವಾಗತಿಸಿ ನಿರೂಪಿದರು.ದೈವಸ್ಥಾನದ ಪ್ರದಾನ ಅರ್ಚಕ ಅಭಿಜಿತ್ ಪಾಂಡೇಶ್ವರ ವಂದಿಸಿದರು.