ಕೋಟೇಶ್ವರ: ಜಾನಪದ ಶಿವರಾತ್ರಿ ಸಂಭ್ರಮ, ಭಕ್ತಿ ಸಂಗೀತ ಕಾರ್ಯಕ್ರಮ

| Published : Feb 28 2025, 12:49 AM IST

ಕೋಟೇಶ್ವರ: ಜಾನಪದ ಶಿವರಾತ್ರಿ ಸಂಭ್ರಮ, ಭಕ್ತಿ ಸಂಗೀತ ಕಾರ್ಯಕ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯ ಕನ್ನಡ ಜಾನಪದ ಪರಿಷತ್‌ನ ಉಡುಪಿ ಜಿಲ್ಲಾ ಘಟಕ ಮತ್ತು ಕುಂದಾಪುರ ತಾಲೂಕು ಘಟಕಗಳ ವತಿಯಿಂದ ಆಸ್ತಿಕ ಸಮಾಜ ಸಹಯೋಗದಲ್ಲಿ ಕೋಟೇಶ್ವರದ ಧ್ವಜಪುರ ಶ್ರೀ ಮಹತೋಭಾರ ಕೋಟಿಲಿಂಗೇಶ್ವರ ದೇವಾಲಯದಲ್ಲಿ ಜಾನಪದ ಶಿವರಾತ್ರಿ ಸಂಭ್ರಮ, ಭಕ್ತಿ ಸಂಗೀತ ಕಾರ್ಯಕ್ರಮ ಬುಧವಾರ ನಡೆಯಿತು.

ಕನ್ನಡಪ್ರಭ ವಾರ್ತೆ ಕುಂದಾಪುರ

ರಾಜ್ಯ ಕನ್ನಡ ಜಾನಪದ ಪರಿಷತ್‌ನ ಉಡುಪಿ ಜಿಲ್ಲಾ ಘಟಕ ಮತ್ತು ಕುಂದಾಪುರ ತಾಲೂಕು ಘಟಕಗಳ ವತಿಯಿಂದ ಆಸ್ತಿಕ ಸಮಾಜ ಸಹಯೋಗದಲ್ಲಿ ಕೋಟೇಶ್ವರದ ಧ್ವಜಪುರ ಶ್ರೀ ಮಹತೋಭಾರ ಕೋಟಿಲಿಂಗೇಶ್ವರ ದೇವಾಲಯದಲ್ಲಿ ಜಾನಪದ ಶಿವರಾತ್ರಿ ಸಂಭ್ರಮ, ಭಕ್ತಿ ಸಂಗೀತ ಕಾರ್ಯಕ್ರಮ ಬುಧವಾರ ನಡೆಯಿತು.ಕಾರ್ಯಕ್ರಮವನ್ನು ಕೋಟೇಶ್ವರ ಗ್ರಾ.ಪಂ. ಅಧ್ಯಕ್ಷೆ ರಾಗಿಣಿ ದೇವಾಡಿಗ, ತಾಳ ಹಾಕುವ ಮೂಲಕ ಚಾಲನೆ ನೀಡಿ ಶಿವರಾತ್ರಿಯ ವೈಭವದ ಕುರಿತು ಹೇಳಿದರು.ದೇವಳದ ಮಾಜಿ ಧರ್ಮದರ್ಶಿ ಗೋಪಾಲ ಶೆಟ್ಟಿ ಮಾರ್ಕೋಡ್ ಮಾತನಾಡಿ, ಜಾನಪದ ಮತ್ತು ಶಿವನಿಗೆ ಅವಿನಾಭಾವ ಸಂಬಂಧವಿದೆ. ಶಿವನನ್ನು ಜಾನಪದರು ತಮ್ಮ ಮುಖ್ಯ ಗುರುವಿನಂತೆ ಆರಾಧನೆ ಮಾಡುತ್ತಾರೆ. ಜಾನಪದದ ಸಂಪತ್ತನ್ನು ಉಳಿಸಿ ಬೆಳೆಸಲು ಈ ರೀತಿಯ ಕಾರ್ಯಕ್ರಮ ಪೂರಕ ಎಂದರು.ಕನ್ನಡ ಜಾನಪದ ಪರಿಷತ್ ಉಡುಪಿ ಜಿಲ್ಲಾಧ್ಯಕ್ಷ ಗಣೇಶ್ ಗಂಗೊಳ್ಳಿ, ಪರಿಷತ್‌ನ ವಿವಿಧ ಕಾರ್ಯಕ್ರಮಗಳು ಮತ್ತು ಜಾನಪದ ಶಿವರಾತ್ರಿ ಕುರಿತು ಸಮಗ್ರ ಮಾಹಿತಿ ನೀಡಿದರು.ಈ ಸಂದರ್ಭ ಕುಂದಾಪುರದ ಜಾನಪದ ಆಚರಣೆ ಹಣಬು ಕಲಾವಿದ ಬಸವರಾಜ್ ಪೂಜಾರಿ ಕುಂಭಾಶಿ ಅವರನ್ನು ಮತ್ತು ಆಸ್ತಿಕ ಸಮಾಜದ ಪ್ರಮುಖರಾದ ರವೀಂದ್ರ ಐತಾಳ ಅವರನ್ನು ಸನ್ಮಾನಿಸಲಾಯಿತು.ವೇದಿಕೆಯಲ್ಲಿ ಕುಂದಾಪುರ ತಾಲೂಕು ಕಜಾಪ ಅಧ್ಯಕ್ಷೆ ಸುಪ್ರೀತಾ ಪುರಾಣಿಕ್, ಜಿಲ್ಲಾ ಕಾರ್ಯದರ್ಶಿ ರಾಘವೇಂದ್ರ ಕರ್ವಾಲು ಉಪಸ್ಥಿತರಿದ್ದರು. ನಂತರಕ ಕನ್ನಡ ಜಾನಪದ ಪರಿಷತ್ ಉಡುಪಿ ಜಿಲ್ಲಾಧ್ಯಕ್ಷ ಗಣೇಶ್ ಗಂಗೊಳ್ಳಿ ಮತ್ತು ಬಳಗದ ವತಿಯಿಂದ ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಿತು.