ಕೋಟೆಶ್ವರ-ಹೆಜಮಾಡಿ ಹೆದ್ದಾರಿ: ಮೂರು ಫೂಟ್‌ ಓವರ್ ಬ್ರಿಡ್ಜ್ ಅನುಮೋದನೆ

| Published : Jul 18 2025, 12:46 AM IST / Updated: Jul 18 2025, 12:47 AM IST

ಕೋಟೆಶ್ವರ-ಹೆಜಮಾಡಿ ಹೆದ್ದಾರಿ: ಮೂರು ಫೂಟ್‌ ಓವರ್ ಬ್ರಿಡ್ಜ್ ಅನುಮೋದನೆ
Share this Article
  • FB
  • TW
  • Linkdin
  • Email

ಸಾರಾಂಶ

ಕೋಟೇಶ್ವರ ಬೈಪಾಸ್‌ನಿಂದ ಹೆಜಮಾಡಿವರೆಗೆ ಸರ್ವಿಸ್‌ ರಸ್ತೆ ಮತ್ತು 3 ಕಡೆ ಪೂಟ್‌ ಒವರ್‌ ಬ್ರಿಡ್ಜ್‌ ನಿರ್ಮಾಣಕ್ಕೆ ಅನುಮೋದನೆ ಸಿಕ್ಕಿದೆ ಎಂದು ಸಂಸದ ಕೋಟ ತಿಳಿಸಿದರು.

ಕನ್ನಡಪ್ರಭ ವಾರ್ತೆ ಉಡುಪಿ

ರಾಷ್ಟ್ರೀಯ ಹೆದ್ದಾರಿ 66 ರ ಕೋಟೇಶ್ವರ ಬೈಪಾಸ್‌ನಿಂದ ಹೆಜಮಾಡಿವರೆಗೆ ೨೬ ಕಿಮೀ ಸರ್ವೀಸ್ ರಸ್ತೆ ಮತ್ತು 3 ಕಡೆ ಪೂಟ್ ಓವರ್ ಬ್ರಿಡ್ಜ್ ನಿರ್ಮಾಣಕ್ಕೆ ಅನುಮೋದನೆ ಸಿಕ್ಕಿದೆ ಎಂದು ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.ಕೋಟೇಶ್ವರದಿಂದ ಬೀಜಾಡಿ ಕ್ರಾಸ್ ವರೆಗೆ ೮೩೦ ಮೀ., ಅನ್ನಪೂರ್ಣ ಹೊಟೇಲ್‌ನಿಂದ ಸಾನ್ವಿ ಏಜೆನ್ಸಿ ತೆಕ್ಕಟ್ಟೆವರೆಗೆ ೩೫೦೦ ಮೀ ಎರಡು ಕಡೆ, ತೆಕ್ಕಟ್ಟೆ ಸೇವಾ ಸಂಗಮ ಶಿಶು ಮಂದಿರದಿಂದ ೧೦೨೦ ಮೀ ಎರಡು ಕಡೆ, ಬ್ರಹ್ಮಾವರದ ಮಹೇಶ್ ಆಸ್ಪತ್ರೆಯಿಂದ ಎಸ್.ಎಮ್.ಎಸ್ ಕಾಲೇಜು ಬ್ರಹ್ಮಾವರದ ವರೆಗೆ ೪೦೦ ಮೀ ಎರಡು ಕಡೆ, ಸಂತೆಕಟ್ಟೆ ಇಂದ್ರ ಸರ್ವೀಸ್ ಸ್ಟೇಷನ್‌ನಿಂದ ಮಂದಾರ ವುಡ್ ಇಂಡಸ್ಟ್ರೀಜ್‌ವರೆಗೆ ೧೦೦೦ ಮೀ ಎರಡು ಕಡೆ, ಉದ್ಯಾವರ ಜಂಕ್ಷನ್‌ನಿಂದ ದೇಶ್ನ ಬ್ಯಾಂಕಿನವರೆಗೆ ಬಲಬದಿ ಮಾತ್ರ ೩೨೫ ಮೀ., ಉದ್ಯಾವರ ಕಿಯಾ ಶೋರೂಂ ವರೆಗೆ ೧೬೪ ಮೀ ಎರಡು ಕಡೆ, ಎರ್ಮಾಳ್ ಮಸೀದಿ ಹತ್ತಿರ ೨ ಕಿ.ಮೀ, ಎರಡುಕಡೆ, ಪಡುಬಿದ್ರಿ ಬೋಸ್ಕೋ ಕಂಪೆನಿಯಿಂದ ಕಣ್ಣಾಂಗರ್ ಬೇಕರಿ ಸಮೀಪ ಬಲಬದಿ ಮಾತ್ರ ೭೫೦ ಮೀ ಸರ್ವೀಸ್ ರಸ್ತೆ ನಿರ್ಮಾಣಕ್ಕೆ ಅನುಮೋದನೆ ದೊರಕಿದೆ.ಮಹೇಶ್ ಹಾಸ್ಪಿಟಲ್ ಬ್ರಹ್ಮಾವರ, ಉಡುಪಿಯ ನಿಟ್ಟೂರು, ತೆಂಕ ಎರ್ಮಾಳ್ ನಲ್ಲಿ ಪೂಟ್ ಓವರ್ ಬ್ರಿಡ್ಜ್ ನಿರ್ಮಾಣ ಮಾಡಲು ಸಹ ಅನುಮೋದನೆ ಸಿಕ್ಕಿದೆ ಎಂದು ಸಂಸದರ ಕಚೇರಿ ಪ್ರಕಟಣೆ ತಿಳಿಸಿದೆ.