ಮಳೆಯ ಅಬ್ಬರಕ್ಕೆ ಕೌಡೇಶ್ವರಿ ನಗರ ಜಲಾವೃತ

| Published : Oct 10 2024, 02:22 AM IST

ಸಾರಾಂಶ

ಪುರಸಭೆ ಅಧ್ಯಕ್ಷರಿಗೆ ಹಾಗೂ ಮುಖ್ಯಾಧಿಕಾರಿಗಳಿಗೆ ದೂರು ಸಲ್ಲಿಸಿದರು ಯಾವುದೇ ಕ್ರಮ ಕೈಗೊಂಡಿಲ್ಲ

ಲಕ್ಷ್ಮೇಶ್ವರ: ಬುಧವಾರ ಬೆಳಗ್ಗೆ ಸುರಿದು ಭಾರಿ ಮಳೆಗೆ ಪಟ್ಟಣದ ವಾರ್ಡ್ ನಂ. 1 ರಲ್ಲಿ ಬರುವ ಕೌಡೇಶ್ವರಿ ನಗರದ ರಸ್ತೆಗಳಲ್ಲಿ ನೀರು ನಿಂತು ಸಾರ್ವಜನಿಕರು ಪರದಾಡಿದ ಘಟನೆ ನಡೆದಿದೆ.

ಬೆಳಗ್ಗೆ ಎರಡು ಗಂಟೆಗಳ ಕಾಲ ಸುರಿದ ಮಳೆಯು ಆವಾಂತರವನ್ನೇ ಸೃಷ್ಟಿಸಿದೆ. ಕೌಡೇಶ್ವರಿ ನಗರದ ರಸ್ತೆಗಳ ಅಕ್ಕಪಕ್ಕದಲ್ಲಿ ಚರಂಡಿಗಳು ಇಲ್ಲದೆ ರಸ್ತೆಯ ಮೇಲೆ ನೀರು ನಿಲ್ಲುವುದರಿಂದ ಸಾರ್ವಜನಿಕರ ಸಂಚಾರಕ್ಕೆ ಸಂಚಕಾರ ತಂದಿದೆ.

ಈ ಕುರಿತು ಹಲವಾರು ಬಾರಿ ಪುರಸಭೆ ಅಧ್ಯಕ್ಷರಿಗೆ ಹಾಗೂ ಮುಖ್ಯಾಧಿಕಾರಿಗಳಿಗೆ ದೂರು ಸಲ್ಲಿಸಿದರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳಕ್ಕೆ ಪುರಸಭೆ ಅಧ್ಯಕ್ಷೆ ಯಲ್ಲಮ್ಮ ದುರಗಣ್ಣವರ, ಮಾಜಿ ಅಧ್ಯಕ್ಷ ವಿ.ಜಿ. ಪಡೆಗೇರಿ, ಮುಖ್ಯಾಧಿಕಾರಿ ಮಹೇಶ ಹಡಪದ, ಆರೋಗ್ಯ ನಿರೀಕ್ಷಕ ಮಂಜುನಾಥ ಮುದಗಲ್, ಕಂದಾಯ ಅಧಿಕಾರಿ ಹನಮಂತಪ್ಪ ನಂದೆಣ್ಣವರ ಮುಂತಾದವರು ಭೇಟಿ ನೀಡಿನ ಅಲ್ಲಿನ ಸಮಸ್ಯೆ ಆಲಿಸಿ ಪರಿಹಾರ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಈ ವೇಳೆ ನೀಲಪ್ಪ ಪೂಜಾರ, ಶೇಖಪ್ಪ ಕೋರಿ, ಚಂದ್ರಗೌಡ ಪಾಟೀಲ, ನಿಂಗಪ್ಪ ಬನ್ನಿ, ಗಂಗಪ್ಪ ದುರಗಣ್ಣವರ, ಹನಮಂತಪ್ಪ ಗೊಜಗೋಜಿ, ನಾಗಪ್ಪ ಪಡೆಗೇರಿ ಸೇರಿದಂತೆ ಮುಂತಾದವರು ಇದ್ದರು.