ಗೌರಿಬಿದನೂರು:

ತಾಲೂಕಿನ ಡಿ.ಪಾಳ್ಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ‌‌‌ ಬೀಳ್ಕೊಡುಗೆ ಹಾಗೂ ಕಾಲೇಜು ವಾರ್ಷಿಕೋತ್ಸವ ನಡೆಯಿತು. ಈ ವೇಳೆ ಪ್ರಾಂಶುಪಾಲರಾದ ಕೆ. ಸತ್ಯೇಂದ್ರ ಮಾತನಾಡಿ, ಶತಮಾನಗಳನ್ನು ಪೂರೈಸಿದ ಸರ್ಕಾರಿ ಶಾಲೆಯು ಇಂದು ಕೆಪಿಎಸ್ ಶಾಲೆಯಾಗಿ ಸುಮಾರು 900 ವಿದ್ಯಾರ್ಥಿಗಳಿಗೆ ಆಸರೆಯಾಗಿದೆ. ಗ್ರಾಮೀಣ ಭಾಗದಲ್ಲಿನ ವಿದ್ಯಾರ್ಥಿಗಳಿಗೆ ಗುಣಮಟ್ಟದ ಮತ್ತು ಮೌಲ್ಯಾಧಾರಿತ ಶಿಕ್ಷಣವನ್ನು ನೀಡುವ ಉದ್ದೇಶದಿಂದ ದಾನಿಗಳಾದ ಆದಿರಾಮಯ್ಯ ಶೆಟ್ಟಿ ರವರು ದಶಕಗಳ ಹಿಂದೆಯೇ ಸ್ಥಳವನ್ನು ನೀಡಿ ಆಸರೆಯಾಗಿದ್ದಾರೆ ಎಂದರು.ಕಾಲೇಜಿನ ಹಳೆ ವಿದ್ಯಾರ್ಥಿ ಹಾಗೂ ಇಸ್ರೋ ವಿಜ್ಞಾನಿ ಶ್ರೀನಾಥ್ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಶಿಕ್ಷಣದ ಜೊತೆಗೆ ಉಜ್ವಲವಾದ ಬದುಕನ್ನು ರೂಪಿಸಿಕೊಳ್ಳಬೇಕಾಗಿದೆ. ಗ್ರಾಮೀಣ ‌ಭಾಗದ ಪ್ರತೀ ವಿದ್ಯಾರ್ಥಿಯಲ್ಲಿ ಅಗಾಧವಾದ ಶಕ್ತಿ ಅಡಗಿದ್ದು,‌ ಅದಕ್ಕೆ ಪೂರಕವಾದ ಪ್ರೋತ್ಸಾಹ ‌ಮತ್ತು ಪ್ರೇರಣೆ ನೀಡಿದಲ್ಲಿ ಸತ್ಪ್ರಜೆಗಳಾಗಿ ರೂಪುಗೊಳ್ಳಲು ಸಾಧ್ಯವಾಗಿದೆ ಎಂದು ಹೇಳಿದರು. ಮೈಸ್ ಕಂಪ್ಯೂಟರ್ ನ ವ್ಯವಸ್ಥಾಪಕರಾದ ಸಂಕೇತ್ ಶ್ರೀರಾಮ್, ಪತ್ರಕರ್ತ ಹಾಗೂ ಪರಿಸರ ಪ್ರೇಮಿ ಜಗನ್ನಾಥ್ ಆರ್ಕುಂದ, ನಿವೃತ್ತ ಶಿಕ್ಷಕರಾದ ಕೃಷ್ಣಮೂರ್ತಿ, ಉಪನ್ಯಾಸಕರಾದ ನಾಗರಾಜ್, ಎಂ.ಎಸ್.ಛಾಯಾಮಣಿ, ಮಾತನಾಡಿದರು.ವೇದಿಕೆಯಲ್ಲಿ ಶೈಕ್ಷಣಿಕ ‌ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗಣ್ಯರು‌ ಅಭಿನಂಧಿಸಿದರು. ಇದೇ ವೇಳೆ ಉಪನ್ಯಾಸಕರಾದ ಕೆ.ಎಸ್.ಮಂಜುನಾಥ್, ಆನಂದ್, ಜಲಜ, ಸುಪ್ರಿತಾ, ಅಶ್ವತ್ಥನಾರಾಯಣ, ನರೇಂದ್ರ, ವೆಂಕಟೇಶಮೂರ್ತಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.