ಸಾರಾಂಶ
ಭಗವದ್ಗೀತೆಯಲ್ಲಿ ನೀಡಿರುವ ಕೃಷ್ಣನ ಸಂದೇಶವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ನೆಮ್ಮದಿಯಾದ ಜೀವನವನ್ನು ನಡೆಸಲು ಸಾಧ್ಯವಾಗುತ್ತದೆ ಎಂದು ತಹಸೀಲ್ದಾರ್ ಶರತ್ ಕುಮಾರ್ ಹೇಳಿದರು.
ಮಾಗಡಿ: ಭಗವದ್ಗೀತೆಯಲ್ಲಿ ನೀಡಿರುವ ಕೃಷ್ಣನ ಸಂದೇಶವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ನೆಮ್ಮದಿಯಾದ ಜೀವನವನ್ನು ನಡೆಸಲು ಸಾಧ್ಯವಾಗುತ್ತದೆ ಎಂದು ತಹಸೀಲ್ದಾರ್ ಶರತ್ ಕುಮಾರ್ ಹೇಳಿದರು.
ಪಟ್ಟಣದ ತಾಲೂಕು ಕಚೇರಿಯಲ್ಲಿ ಸೋಮವಾರ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೃಷ್ಣ ಸತ್ಯಪಾಲನೆಯೊಂದಿಗೆ ಆದರ್ಶ ಕಾರ್ಯ ಮತ್ತು ಕೃತಿಗಳನ್ನು ಫಲಾಪೇಕ್ಷೆಯಿಲ್ಲದೆ ಮಾಡುವುದರಿಂದ ಯಶಸ್ವಿ ಕಾಣಬಹುದಾಗಿದೆ ಎಂದರು. ಕೃಷ್ಣ ಯಾದವ ಗೊಲ್ಲ ಸಂಘದ ತಾಲೂಕು ಅಧ್ಯಕ್ಷ ಪುಟ್ಟರಾಜ್ ಯಾದವ್ ಮಾತನಾಡಿದರು.ಕಾರ್ಯಕ್ರಮದಲ್ಲಿ ಸಂಘದ ಕಾರ್ಯಾಧ್ಯಕ್ಷ ಮಾರುತಿ ಯಾದವ್, ಪ್ರಧಾನ ಕಾರ್ಯದರ್ಶಿ ಧನಂಜಯ ತೋಟದಮನೆ ಗಿರೀಶ್, ಪದಾಧಿಕಾರಿಗಳಾದ ಕರಲಮಂಗಲ ನಾರಾಯಣ್, ಪ್ರಸಾದ್, ರಾಮಕೃಷ್ಣ, ಅಶೋಕ್, ಕೃಷ್ಣಮೂರ್ತಿ, ಹನುಮಂತಯ್ಯ, ಕುಮಾರ್, ಮುನೇಗೌಡ, ನಾಗರಾಜ್, ಶ್ರೀನಿವಾಸ್, ಪ್ರಸನ್ನ, ಮಲ್ಲಯ್ಯ, ಕೃಷ್ಣ, ಹನುಮಂತ, ಕೆಂಚಪ್ಪ ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದ್ದರು.