ನವರಾತ್ರಿಯ ಸಂದರ್ಭದಲ್ಲಿ ದೇವಿಯ ಆರಾಧನೆಯ ವರ್ಣಂ ನೃತ್ಯಪ್ರದರ್ಶನ ವಿಶೇಷ ಆಕರ್ಷಣೆ
ಹುಬ್ಬಳ್ಳಿ: ಕಲಾ ಸುಜಯ ನೃತ್ಯ ಸಂಸ್ಥೆಯ ವತಿಯಿಂದ ಭಾನುವಾರ ನಗರದ ಸವಾಯಿ ಗಂಧರ್ವ ಕಲಾಮಂದಿರದಲ್ಲಿ ಕೃಷ್ಣಪ್ರಿಯಾ ಬಂಕಾಪುರ ಅವರ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮ ನಡೆಯಿತು.
ನೃತ್ಯಗುರು ವಿದ್ವಾನ್ ಸುಜಯ್ ಶಾನಭಾಗ ಅವರ ಶಿಷ್ಯೆ ಕೃಷ್ಣಪ್ರಿಯಾ, ಭರತನಾಟ್ಯದ ಮಾರ್ಗಂ ಪದ್ಧತಿಯಲ್ಲಿ ಶಾಸ್ತ್ರೋಕ್ತವಾಗಿ ನೃತ್ಯ ಪ್ರದರ್ಶಿಸಿ ಕಲಾರಸಿಕರ ಮೆಚ್ಚುಗೆಗೆ ಪಾತ್ರರಾದರು. ನವರಾತ್ರಿಯ ಸಂದರ್ಭದಲ್ಲಿ ದೇವಿಯ ಆರಾಧನೆಯ ವರ್ಣಂ ನೃತ್ಯಪ್ರದರ್ಶನ ವಿಶೇಷ ಆಕರ್ಷಣೆಯಾಗಿತ್ತು.ಕಾರ್ಯಕ್ರಮದಲ್ಲಿ ಪತಂಜಲಿ ಯೋಗಪೀಠದ ಕರ್ನಾಟಕ ಪ್ರಾಂತದ ಅಧ್ಯಕ್ಷ ಭವರಲಾಲ್ ಆರ್ಯ, ಕೇರಳ ರಾಜ್ಯ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತೆ ಚಿತ್ರಾ ಸುಕುಮಾರನ್, ಬೆಂಗಳೂರಿನ ಲಾಸ್ಯ ಅಕಾಡೆಮಿಯ ನೃತ್ಯಾಂಗನೆ ಡಾ. ಲಕ್ಷ್ಮೀ ರೇಖಾ ಅರುಣ್, ಮಹೇಶ್ ಪಿಯು ಕಾಲೇಜಿನ ವಿಜಯಕುಮಾರ್ ಪಾಟೀಲ ಕುಲಕರ್ಣಿ ಹಾಗೂ ಜಗದೀಶ್ ಮರಳಿ ಸೇರಿದಂತೆ ಹಲವರಿದ್ದರು.