ವರ್ಷದೊಳಗೆ ಕೂಡ್ಲಿಗಿ ಕ್ಷೇತ್ರ ಮಾದರಿ: ಶಾಸಕ ಶ್ರೀನಿವಾಸ

| Published : Sep 20 2024, 01:31 AM IST

ಸಾರಾಂಶ

ಉಜ್ಜಯನಿ ನಿಂಬಳಗೇರಿ ರಸ್ತೆ ಅಭಿವೃದ್ಧಿಗೆ ₹16 ಕೋಟಿ ಅನುದಾನ ನಿಗದಿಗೊಳಿಸಿ ಯೋಜನೆ ರೂಪಿಸಿದ್ದೇವೆ.

ಕೊಟ್ಟೂರು: ಬರುವ ವರ್ಷದೊಳಗೆ ಕೂಡ್ಲಿಗಿ ಕ್ಷೇತ್ರದ 91 ಗ್ರಾಮ ಮತ್ತು ಒಂದು ಪಪಂನ ಎಲ್ಲ ರಸ್ತೆಗಳು ಸುಸಜ್ಜಿತವಾಗಿ ಅಭಿವೃದ್ಧಿಗೊಳ್ಳುತ್ತೇವೆ. ಕ್ಷೇತ್ರ ಸಂಪೂರ್ಣ ಮಾದರಿಯಾಗಿ ಹೊರಹೊಮ್ಮಲಿದೆ ಎಂದು ಶಾಸಕ ಡಾ.ಎನ್.ಟಿ. ಶ್ರೀನಿವಾಸ ಭರವಸೆ ನೀಡಿದರು.

ತಾಲೂಕಿನ ಉಜ್ಜಯನಿ ಗ್ರಾಮದಲ್ಲಿ ₹1.70 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಇದಕ್ಕೂ ಮೊದಲು ಸುಂಕದಕಲ್ಲು ಗ್ರಾಮದಲ್ಲಿ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.

ಉಜ್ಜಯನಿ ಗ್ರಾಮದಲ್ಲಿ ₹5 ಕೋಟಿ ವೆಚ್ಚದ ಯಾತ್ರಿ ನಿವಾಸ ನಿರ್ಮಾಣ ಕಾಮಗಾರಿ, ಉಜ್ಜಯನಿ ಗ್ರಾಮದಲ್ಲಿನ ಸಮುದಾಯ ಆರೋಗ್ಯ ಕೇಂದ್ರವನ್ನು ನೂತನವಾಗಿ ನಿರ್ಮಿಸಲಾಗುತ್ತಿದೆ. ಉಜ್ಜಯನಿ ನಿಂಬಳಗೇರಿ ರಸ್ತೆ ಅಭಿವೃದ್ಧಿಗೆ ₹16 ಕೋಟಿ ಅನುದಾನ ನಿಗದಿಗೊಳಿಸಿ ಯೋಜನೆ ರೂಪಿಸಿದ್ದೇವೆ. ಕಾಳಾಪುರ, ನಾಗರಕಟ್ಟೆ, ಜೋಳದ ಕೂಡ್ಲಿಗಿ ರಸ್ತೆ ಕಾಮಗಾರಿಗಳಿಗೆ ಶೀಘ್ರದಲ್ಲಿ ಭೂಮಿ ಪೂಜೆ ನೆರವೇರಿಸುವೆ ಎಂದು ಅವರು ಹೇಳಿದರು.

ತೂಲಹಳ್ಳಿ ಬಳಿ ₹1 ಕೋಟಿ ವೆಚ್ಚದ ಸೇತುವೆ ನಿರ್ಮಾಣಕ್ಕೂ ಸಹ ಯೋಜನೆ ಸಿದ್ಧಗೊಂಡಿದೆ. ಸುಂಕದಕಲ್ಲು ಗ್ರಾಮಕ್ಕೆ ಪ್ರೌಢಶಾಲೆ ಮಂಜೂರಾತಿಗೆ ಸರ್ಕಾರದ ಬಳಿ ಪ್ರಸ್ತಾವ ಮಂಡಿಸಿರುವೆ. ಕೂಡ್ಲಿಗಿ ಕ್ಷೇತ್ರದ ಕೆರೆಗಳಗೆ ನೀರು ತುಂಬಿಸುವ ಯೋಜನೆಗೆ ಶೀಘ್ರದಲ್ಲಿ ಮರು ಚಾಲನೆ ದೂರೆಯಲಿದೆ. ಈ ಯೋಜನೆಯ ಹಡಗಲಿ ಬಳಿಯ 39 ರೈತರಿಗೆ ತಮ್ಮ ಭೂಮಿಯ ಹಣವನ್ನು ನೀಡಲು ಸರ್ಕಾರ ಸಿದ್ಧವಿದೆ ಎಂದರು.

ತಿಂಗಳೂಳಗೆ ಕೆರೆ ತುಂಬಿಸುವ ಯೋಜನೆಯ ಕಾಮಗಾರಿ ಮುಕ್ತಾಯಗೊಳ್ಳಲಿದೆ. ಯೋಜನೆ ಜಾರಿ ಬಗ್ಗೆ ಯಾರೊಬ್ಬರು ಅನುಮಾನ ಪಡುವುದು ಬೇಡ. ಕೂಡ್ಲಿಗಿ ತಾಲೂಕಿನಲ್ಲಿ ಕೃಷಿ ಕೇಂದ್ರ ಆರಂಭಿಸಲು ಸರ್ಕಾರವನ್ನು ಒತ್ತಾಯಿಸಿರುವೆ ಎಂದರು.

ಮುಖಂಡ ಸಾವಜ್ಜಿ ರಾಜೇಂದ್ರ ಪ್ರಸಾದ, ಗ್ರಾಪಂ ಸದಸ್ಯ ಚಂದ್ರಪ್ಪ ಮಾತನಾಡಿದರು.

ಗ್ರಾಪಂ ಅಧ್ಯಕ್ಷೆ ನಿಂಗಮ್ಮ, ಲೋಕೋಪಯೋಗಿ ಇಲಾಖೆ ಇಇ ದೇವದಾಸ, ಎಇಇ ಕೆ.ನಾಗನಗೌಡ , ಕೂಡ್ಲಿಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಗುರುಸಿದ್ದನಗೌಡ , ತಾಪಂ ಮಾಜಿ ಸದಸ್ಯ ಶಾಂತನಗೌಡ, ಕೊಡದಪ್ಪ, ರಿಜ್ವಾನ್, ರೇವಣಸಿದ್ದಪ್ಪ ರಾಜೇಂದ್ರಗೌಡ, ರಂಗಪ್ಪ ಕುರುಗೋಡ ಸಿದ್ದೇಶ್ ಮುಪ್ಪನಪ್ಪ, ವೆಂಕಟೇಶ್ ಮತ್ತಿತರರು ವೇದಿಕೆಯಲ್ಲಿದ್ದರು. ಸಿದ್ಧೇಶ್ ಪಾಟೀಲ್ ಕಾರ್ಯಕ್ರಮ ನಿರೂಪಿಸಿದರು.