ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಅಕ್ಟೋಬರ್ 13 ರಂದು ಸಂಜೆ 4 ಗಂಟೆಗೆ ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದಿಂದ ನವದುರ್ಗೆಯರು, ಶಾರದೆ, ಗಣೇಶ ವಿಗ್ರಹ, ವಿವಿಧ ಟ್ಯಾಬ್‍ಗಳ ಶೋಭಾಯಾತ್ರೆ ಹಿನ್ನೆಲೆಯಲ್ಲಿ ಮಧ್ಯಾಹ್ನ 2 ಗಂಟೆಯಿಂದ ಅಕ್ಟೋಬರ್ 14 ರಂದು ಬೆಳಗ್ಗೆ 6 ಗಂಟೆಯವರೆಗೆ ಸಾರ್ವಜನಿಕರ ಸುರಕ್ಷತೆ ಹಾಗೂ ವಾಹನಗಳ ಸುಗಮ ಸಂಚಾರದ ಹಿತದೃಷ್ಟಿಯಿಂದ ರಸ್ತೆಯಲ್ಲಿ ವಾಹನ ಪಾರ್ಕಿಂಗ್ ಹಾಗೂ ಸಂಚಾರದಲ್ಲಿ ತಾತ್ಕಾಲಿಕವಾಗಿ ಮಾರ್ಪಾಡು ಮಾಡುವಂತೆ ಪೊಲೀಸ್ ಆಯುಕ್ತ ಅನುಪಮ್ ಅಗರ್‌ವಾಲ್ ಆದೇಶ ಹೊರಡಿಸಿದ್ದಾರೆ.ಮಣ್ಣಗುಡ್ಡೆ ಬ್ರಹ್ಮಶ್ರೀ ನಾರಾಯಣ ಗುರು ವೃತ್ತ - ಲಾಲ್ ಬಾಗ್ ಪಿವಿಎಸ್-ನವಭಾರತ್ ವೃತ್ತ - ಕೆಎಸ್‍ಆರ್ ರಸ್ತೆ - ಕೆ.ಬಿ. ಕಟ್ಟೆ ವೃತ್ತ - ಓಂ ಮಹಲ್ ಜಂಕ್ಷನ್ ಗಣಪತಿ ಹೈಸ್ಕೂಲ್ ರಸ್ತೆ - ಮೋಹಿನಿ ವಿಲಾಸ, ರಥಬೀದಿ-ಲೋವರ್ ಕಾರ್ ಸ್ಟ್ರೀಟ್ - ನ್ಯೂಚಿತ್ರಾ - ಅಳಕೆಯ ಮೂಲಕ ಕುದ್ರೋಳಿ ದೇವಸ್ಥಾನಕ್ಕೆ ಬಂದು ದೇವಳದ ಕೆರೆಯಲ್ಲಿ ಜಲಸ್ತಂಭನಗೊಳ್ಳಲಿದೆ.
ವಾಹನ ಸಂಚಾರ ನಿಷೇಧಿತ ಮಾರ್ಗಗಳ ವಿವರ: ಮೆರವಣಿಗೆ ಸಾಗುವ ಕುದ್ರೋಳಿ ದೇವಸ್ಥಾನ - ಮಣ್ಣಗುಡ್ಡೆ- ಬ್ರಹ್ಮಶ್ರೀ ನಾರಾಯಣ ಗುರು ವೃತ್ತ -ಲಾಲ್‍ಭಾಗ್ - ಪಿವಿಎಸ್ ಎಂ.ಗೋವಿಂದ ಪೈ ವೃತ್ತ - ಕೆಎಸ್‍ಆರ್ ರಸ್ತೆ - ಹಂಪನಕಟ್ಟ ಜಂಕ್ಷನ್ - ಕೆ. ಬಿ. ವೃತ್ತ - ಗಣಪತಿ ಹೈಸ್ಕೂಲ್ ರಸ್ತೆ - ಮೋಹಿನಿ, ವಿಲಾಸ ಜಂಕ್ಷನ್ ಓಂ ಮಹಲ್ ಜಂಕ್ಷನ್ - ರಥಬೀದಿ - ಲೋವರ್ ಕಾರ್‌ಸ್ಟ್ರೀಟ್ - ನ್ಯೂಚಿತ್ರಾ-ಅಳಕೆ - ಕುದ್ರೋಳಿ ದೇವಸ್ಥಾನದ ವರೆಗೆ ವಾಹನ ಸಂಚಾರವನ್ನು ಹಾಗೂ ರಸ್ತೆಯ ಎರಡೂ ಕಡೆಗಳಲ್ಲಿ ವಾಹನ ನಿಲುಗಡೆ ನಿಷೇಧಿಸಲಾಗಿದೆ.ಕೊಟ್ಟಾರ ಚೌಕಿ ಮುಖಾಂತರ ನಗರಕ್ಕೆ ಬರುವ ಎಲ್ಲಾ ತರಹದ ವಾಹನಗಳ ನಗರ ಪ್ರವೇಶ ನಿಷೇಧಿಸಲಾಗಿದೆ. ಉರ್ವ ಸ್ಟೋರ್ ಕಡೆಯಿಂದ ಹಾಗೂ ಉರ್ವ ಮಾರ್ಕೆಟ್ ಕಡೆಯಿಂದ ಬ್ರಹ್ಮಶ್ರೀ ನಾರಾಯಣ ಗುರು ವೃತ್ತದ ಕಡೆಗೆ ಬರುವ/ಹೋಗುವ ಎಲ್ಲ ತರಹದ ವಾಹನಗಳನ್ನು ನಿಷೇಧಿಸಲಾಗಿದೆ. ಕೆ.ಎಸ್.ಆರ್.ಟಿ.ಸಿ. ಜಂಕ್ಷನ್ ಕಡೆಯಿಂದ ಎಂ. ಜಿ. ರಸ್ತೆ (ಲಾಲ್‍ಬಾಗ್ ಜಂಕ್ಷನ್ ಮೂಲಕ) ಕಡೆಗೆ ಬರುವ/ಹೋಗುವ ಎಲ್ಲ ತರಹದ ವಾಹನಗಳನ್ನು ನಿಷೇಧಿಸಲಾಗಿದೆ. ಪಿಂಟೋ ಬೇಕರಿ ಜಂಕ್ಷನ್‍ನಿಂದ ಕೊಡಿಯಾಲ್‍ಗುತ್ತು ಜಂಕ್ಷನ್ ಮುಖಾಂತರ ಎಂ. ಜಿ. ರಸ್ತೆಗೆ ಕಡೆಗೆ ಬರುವ/ಹೋಗುವ ಎಲ್ಲ ತರಹದ ವಾಹನಗಳನ್ನು ನಿಷೇಧಿಸಲಾಗಿದೆ. ಪಶು ಆಸ್ಪತ್ರೆ ಜಂಕ್ಷನ್ (ಕಪುಚಿನ್ ಚರ್ಚ್)ನಿಂದ ಕೋರಿರೊಟ್ಟಿ ಜಂಕ್ಷನ್ (ಎಂ ಜಿ ರಸ್ತೆ) ಕಡೆಗೆ ಸಾಗುವ ಎಲ್ಲ ತರಹದ ವಾಹನ ಸಂಚಾರ ನಿಷೇಧಿಸಲಾಗಿದೆ. ಕರಂಗಲ್‍ಪಾಡಿ ಜಂಕ್ಷನ್‍ನಿಂದ ಪಿ.ವಿ.ಎಸ್ ಜಂಕ್ಷನ್‍ಗೆ ಹೋಗುವ ಎಲ್ಲ ತರಹದ ವಾಹನಗಳನ್ನು ನಿಷೇಧಿಸಲಾಗಿದೆ. ಕೋರ್ಟ್ ರೋಡ್‍ನಿಂದ ಕೆ.ಎಸ್.ರಾವ್ ರಸ್ತೆಗೆ ಬರುವ ಎಲ್ಲ ತರಹದ ವಾಹನಗಳನ್ನು ನಿಷೇಧಿಸಲಾಗಿದೆ. ಬಾವುಟಗುಡ್ಡೆ ಕಡೆಯಿಂದ ಸಿಟಿ ಸೆಂಟರ್ ಮೂಲಕ ಕೆ.ಎಸ್.ರಾವ್ ರಸ್ತೆಗೆ ಬರುವ ಎಲ್ಲ ತರಹದ ವಾಹನಗಳನ್ನು ನಿಷೇಧಿಸಲಾಗಿದೆ. ಹಂಪನಕಟ್ಟೆ ಜಂಕ್ಷನ್‍ನಿಂದ ಕೆ.ಎಸ್.ರಾವ್ ರಸ್ತೆಗೆ ಹೋಗುವ ಎಲ್ಲ ತರಹದ ವಾಹನಗಳನ್ನು ನಿಷೇಧಿಸಲಾಗಿದೆ. ಕುದ್ರೋಳಿ ನಾರಾಯಣಗುರು ಕಾಲೇಜು ಬಳಿಯಿಂದ ನವದುರ್ಗೆಯರ ಟ್ಯಾಬ್‍ಗಳು ತಯಾರಿಗೊಂಡು ದೇವಸ್ಥಾನಕ್ಕೆ ಬರಲಿರುವುದರಿಂದ ಕುದ್ರೋಳಿ ನಾರಾಯಣಗುರು ಕಾಲೇಜು ಜಂಕ್ಷನ್ ರಸ್ತೆಯಿಂದ ಬರ್ಕೆ ಜಂಕ್ಷನ್ ತನಕ ಮತ್ತು ಬರ್ಕೆ ಜಂಕ್ಷನ್‍ನಿಂದ ದುರ್ಗಾಮಹಲ್ ಜಂಕ್ಷನ್‍ವರೆಗೆ ಹಾಗೂ ದುರ್ಗಾಮಹಲ್ ಜಂಕ್ಷನ್‍ನಿಂದ ಅಳಕೆ ಬ್ರಿಡ್ಜ್ ತನಕ ರಸ್ತೆಯ ಇಕ್ಕೆಲಗಳಲ್ಲಿ ಎಲ್ಲ ತರಹದ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ.
ಮಣ್ಣಗುಡ್ಡೆಯಲ್ಲಿ ವಾಹನ ನಿಲುಗಡೆ ನಿಷೇಧ: ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳುವ ಎಲ್ಲ ಟ್ಯಾಬ್ಲೊಗಳು ಉರ್ವ ಮಾರ್ಕೆಟ್ ಜಂಕ್ಷನ್‍ನಿಂದ ಗಾಂಧಿನಗರ ಮುಖಾಂತರ ಮಣ್ಣಗುಡ್ಡ ಗುರ್ಜಿ ಜಂಕ್ಷನ್‍ನಲ್ಲಿ ಸರದಿ ಸಾಲಿನಲ್ಲಿ ಬಂದು ನಿಂತು ಇಲ್ಲಿಂದ ಟ್ಯಾಬ್‍ಗಳು ಮೆರವಣಿಗೆಯಲ್ಲಿ ಮುಂದುವರಿಯಲಿದೆ. ಮಣ್ಣಗುಡ್ಡ ಗುರ್ಜಿ ಜಂಕ್ಷನ್‍ನಿಂದ ಉರ್ವ ಮಾರ್ಕೆಟ್ ಜಂಕ್ಷನ್‍ವರೆಗಿನ ರಸ್ತೆಯ ಇಕ್ಕೆಲಗಳಲ್ಲಿ ಹಾಗೂ ಮಣ್ಣಗುಡ್ಡ ಗಾಂಧಿನಗರ ಪಾರ್ಕ್ ಮುಂಭಾಗದ ರಸ್ತೆ ಮತ್ತು ಗಾಂಧಿನಗರ ಒಂದರಿಂದ ಎಂಟರವರೆಗಿನ ಅಡ್ಡ ರಸ್ತೆಗಳ ಇಕ್ಕೆಲಗಳಲ್ಲಿ ಎಲ್ಲ ತರಹದ ವಾಹನಗಳ ನಿಲುಗಡೆ ನಿಷೇಧಿಸಲಾಗಿದೆ. ನಗರ ಪ್ರವೇಶದಲ್ಲೂ ಬದಲಾವಣೆ: ಉಡುಪಿ ಕಡೆಯಿಂದ ಕೊಟ್ಟಾರ ಚೌಕಿ ಮುಖಾಂತರ ನಗರಕ್ಕೆ ಬರುವ ಎಲ್ಲ ತರಹದ ವಾಹನಗಳು ಕುಂಟಿಕಾನ- ಕೆ.ಪಿ.ಟಿ-ನಂತೂರು ಮುಖೇನ ನಗರ ಪ್ರವೇಶಿಸುವುದು. ಉರ್ವಾ ಸ್ಟೋರ್ ಕಡೆಯಿಂದ ಬ್ರಹ್ಮಶ್ರೀ ನಾರಾಯಣ ಗುರು ವೃತ್ತದ ಮೂಲಕ ನಗರ ಪ್ರವೇಶಿಸುವ ಎಲ್ಲ ತರಹದ ವಾಹನಗಳು ಕೋಟೆಕಣಿ ರಸ್ತೆಯಾಗಿ-ಕೊಟ್ಟಾರ ಕ್ರಾಸ್- ಕಾಪಿಕಾಡು-ಕೆ.ಎಸ್.ಆರ್.ಟಿ.ಸಿ-ಬಿಜೈ ಮಾರ್ಕೆಟ್ ಜಂಕ್ಷನ್ ಮುಖಾಂತರ ಸಂಚರಿಸುವುದು. ನಗರದಿಂದ ನ್ಯೂ ಚಿತ್ರಾ ಜಂಕ್ಷನ್ ಮೂಲಕ ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದ ಮುಖೇನ ಬ್ರಹ್ಮಶ್ರೀ ನಾರಾಯಣ ಗುರು ವೃತ್ತದ ಕಡೆಗೆ ಸಂಚರಿಸುವ ಎಲ್ಲ ತರಹದ ವಾಹನಗಳು ನ್ಯೂಚಿತ್ರಾ ಜಂಕ್ಷನ್‍ನಿಂದ ಕಂಡತ್‍ಪಳ್ಳಿ - ಮಂಡಿ - ಕುದ್ರೋಳಿ - ಬೊಕ್ಕಪಟ್ಲ - ಸುಲ್ತಾನ್‍ಬತ್ತೇರಿ ಮೂಲಕ ಸಂಚರಿಸಬೇಕು.ನಗರದಿಂದ ಕೆ.ಎಸ್ ರಾವ್ ರಸ್ತೆ ಮೂಲಕ ಸಂಚರಿಸುವ ಎಲ್ಲ ತರಹದ ವಾಹನಗಳು ಹಂಪನಕಟ್ಟ ಜಂಕ್ಷನ್ - ಡಾ. ಅಂಬೇಡ್ಕರ್ ಸರ್ಕಲ್ ಮುಖಾಂತರ ಸಂಚರಿಸುವುದು. ಕೆ.ಎಸ್.ಆರ್.ಟಿ.ಸಿ. ಬಸ್ಸು ನಿಲ್ದಾಣದಿಂದ ಉಡುಪಿ ಹಾಗೂ ಪಂಪುವೆಲ್ ಕಡೆಗೆ ಹೋಗುವ/ಬರುವ ಎಲ್ಲ ಕೆ.ಎಸ್.ಆರ್.ಟಿ.ಸಿ ಬಸ್ಸುಗಳು ಕುಂಟಿಕಾನ / ಕೆ.ಪಿ.ಟಿ ಜಂಕ್ಷನ್ ಮುಖೇನ ಸಂಚರಿಸುವಂತೆ ಪೊಲೀಸ್ ಆಯುಕ್ತ ಪ್ರಕಟಣೆ ತಿಳಿಸಿದೆ.