ಕುಕ್ಕೆ: ಇಂದು ಲಕ್ಷದೀಪೋತ್ಸವ, ಕುಣಿತ ಭಜನೆ

| Published : Dec 12 2023, 12:45 AM IST

ಕುಕ್ಕೆ: ಇಂದು ಲಕ್ಷದೀಪೋತ್ಸವ, ಕುಣಿತ ಭಜನೆ
Share this Article
  • FB
  • TW
  • Linkdin
  • Email

ಸಾರಾಂಶ

ರಥಬೀದಿಯಿಂದ ಕಾಶಿಕಟ್ಟೆ ವರೆಗೆ ಲಕ್ಷ ಹಣತೆಯ ದೀಪಗಳನ್ನು ಬೆಳಗಲಾಗುತ್ತದೆ. ಸವಾರಿ ಮಂಟಪದಲ್ಲಿ ಕ್ಷೇತ್ರ ದೈವ ಹೊಸಳಿಗಮ್ಮ ದೈವದರ್ಶನ ಮತ್ತು ನರ್ತನ ಸೇವೆ ನಡೆಯಲಿದೆ. ಕಾಶಿಕಟ್ಟೆಗೆ ಆಗಮಿಸುವ ಶ್ರೀ ದೇವರಿಗೆ ಮಹಾಗಣಪತಿ ಸನ್ನಿಧಾನದಲ್ಲಿ ಗುರ್ಜಿ ಪೂಜೋತ್ಸವ ಜರುಗಲಿದೆ. ದೇಗುಲದ ರಾಜಗೋಪುರ ಬಳಿಯಿಂದ ರಥಬೀದಿ, ಅಡ್ಡಬೀದಿಯಲ್ಲಿ ಕುಣಿತ ಭಜನ ಸಂಭ್ರಮ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಸುಬ್ರಹ್ಮಣ್ಯ

ಕುಕ್ಕೆ ಸುಬ್ರಹ್ಮಣ್ಯ ಶ್ರೀ ಚಂಪಾಷಷ್ಠಿ ಮಹೋತ್ಸವ ಅಂಗವಾಗಿ ಸೋಮವಾರ ಲಕ್ಷದೀಪೋತ್ಸವ, ಕುಣಿತ ಭಜನಾ ಕಾರ್ಯಕ್ರಮ ಜರುಗಲಿದೆ. ರಾತ್ರಿ ಕಾಚುಕುಜುಂಬ ದೈವದಿಂದ ಶ್ರೀ ದೇವರ ಭೇಟಿಯ ಬಳಿಕ ಪಂಚಶಿಖರವನ್ನೊಳಗೊಂಡ ಚಂದ್ರಮಂಡಲ ರಥದಲ್ಲಿ ಶ್ರೀ ಸುಬ್ರಹ್ಮಣ್ಯ ದೇವರ ಉತ್ಸವ ಕಾಶಿಕಟ್ಟೆವರೆಗೆ ನಡೆಯಲಿದೆ. ರಥಬೀದಿಯಿಂದ ಕಾಶಿಕಟ್ಟೆ ವರೆಗೆ ಲಕ್ಷ ಹಣತೆಯ ದೀಪಗಳನ್ನು ಬೆಳಗಲಾಗುತ್ತದೆ. ಸವಾರಿ ಮಂಟಪದಲ್ಲಿ ಕ್ಷೇತ್ರ ದೈವ ಹೊಸಳಿಗಮ್ಮ ದೈವದರ್ಶನ ಮತ್ತು ನರ್ತನ ಸೇವೆ ನಡೆಯಲಿದೆ. ಕಾಶಿಕಟ್ಟೆಗೆ ಆಗಮಿಸುವ ಶ್ರೀ ದೇವರಿಗೆ ಮಹಾಗಣಪತಿ ಸನ್ನಿಧಾನದಲ್ಲಿ ಗುರ್ಜಿ ಪೂಜೋತ್ಸವ ಜರುಗಲಿದೆ. ದೇಗುಲದ ರಾಜಗೋಪುರ ಬಳಿಯಿಂದ ರಥಬೀದಿ, ಅಡ್ಡಬೀದಿಯಲ್ಲಿ ಕುಣಿತ ಭಜನ ಸಂಭ್ರಮ ನಡೆಯಲಿದೆ. ಮೈಸೂರು ರಾಮಚಂದ್ರ ಆಚಾರ್ ಮತ್ತು ತಂಡ ಭಜನಾ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

ಇಂದಿನಿಂದ ಉರುಳು ಸೇವೆ;

ಮಂಗಳವಾರ ಲಕ್ಷದೀಪೋತ್ಸವ ಚಂದ್ರಮಂಡಲ ರಥೋತ್ಸವ ಬಳಿಕ ಬೀದಿ ಉರುಳು ಸೇವೆಯನ್ನು ಭಕ್ತರು ಆರಂಭಿಸುತ್ತಾರೆ. ಸ್ವಯಂಸ್ಫೂರ್ತಿಯಿಂದ ಈ ಸಾಂಪ್ರದಾಯಿಕ ಸೇವೆಯನ್ನು ಭಕ್ತರು ಚಂಪಾಷಷ್ಠಿ ಮಹಾರಥೋತ್ಸವ ವರೆಗೆ ನೆರೆವೇರಿಸುತ್ತಾರೆ. ಬೀದಿ ಉರುಳು ಸೇವೆ ಸಾಗುವ ಕುಮಾರಧಾರ ಬಳಿಯಿಂದ ರಸ್ತೆಯ ಒಂದು ಬದಿಯನ್ನು ಈಗಾಗಲೇ ಗುಡಿಸಿ, ಸ್ವಚ್ಛಗೊಳಿಸಿ ಪೂರಕ ವ್ಯವಸ್ಥೆ ಕಲ್ಪಿಸಲಾಗಿದೆ. ಉರುಳು ಸೇವೆ ಸಾಗುವ ಬದಿಯಲ್ಲಿ ವಾಹನ ಸಂಚಾರ ತಡೆಹಿಡಿಲಾಗಿದೆ.