ಆದರ್ಶ ಜೇನು ಕೃಷಿ ದಂಪತಿ ಪ್ರಶಸ್ತಿಗೆ ಕುಮಾರ್‌ ಪೆರ್ನಾಜೆ-ಸೌಮ್ಯಾ ಆಯ್ಕೆ

| Published : Aug 02 2025, 12:15 AM IST

ಆದರ್ಶ ಜೇನು ಕೃಷಿ ದಂಪತಿ ಪ್ರಶಸ್ತಿಗೆ ಕುಮಾರ್‌ ಪೆರ್ನಾಜೆ-ಸೌಮ್ಯಾ ಆಯ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಕುಮಾರ್ ಪೆರ್ನಾಜೆ-ಸೌಮ್ಯ ದಂಪತಿ ಹಲವಾರು ವರ್ಷಗಳಿಂದ ಜೇನು ಕೃಷಿಯಲ್ಲಿ ಮಾಡಿರುವ ಅಪಾರ ಸಾಧನೆಗಾಗಿ ‘ಆದರ್ಶ ಜೇನು ಕೃಷಿ ದಂಪತಿಗಳು ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ. ಸಂಗೀತಗಾರ್ತಿ ಸವಿತಾ ಕೋಡಂದೂರು ಅವರು ‘ಚಂದನ ಸ್ವರ ಸಂಗೀತ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಪುತ್ತೂರು

ಬರಹಗಾರ, ಜೇನು ಕೃಷಿಕ ಕುಮಾರ್ ಪೆರ್ನಾಜೆ-ಸೌಮ್ಯ ದಂಪತಿ ಹಲವಾರು ವರ್ಷಗಳಿಂದ ಜೇನು ಕೃಷಿಯಲ್ಲಿ ಮಾಡಿರುವ ಅಪಾರ ಸಾಧನೆಗಾಗಿ ‘ಆದರ್ಶ ಜೇನು ಕೃಷಿ ದಂಪತಿಗಳು ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ. ಸಂಗೀತಗಾರ್ತಿ ಸವಿತಾ ಕೋಡಂದೂರು ಅವರು ‘ಚಂದನ ಸ್ವರ ಸಂಗೀತ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ.ಭಾನುವಾರ ಸುಳ್ಯದ ದೇವಮ್ಮ ಕಾಂಪ್ಲೆಕ್ಸ್ ಸಭಾಂಗಣದಲ್ಲಿ ಜರುಗಲಿರುವ ಚಂದನ ಸಾಹಿತ್ಯ ಸಂಗೀತ ಸಂಭ್ರಮೋತ್ಸವದ ಸಮಾರಂಭದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಸಮಾರಂಭದಲ್ಲಿ ಸಾಹಿತಿ ಪ್ರಭಾಕರ ಶಿಶಿಲ, ನಿವೃತ್ತ ತಾಂತ್ರಿಕ ಕೃಷಿ ಅಧಿಕಾರಿ ಮೋಹನ್ ನಂಗಾರು, ಹಾ. ಮ. ಸತೀಶ್ ಬೆಂಗಳೂರು, ನಾರಾಯಣ ರೈ ಕುಕ್ಕುವಳ್ಳಿ, ಶ್ರೀ ಯೋಗೇಶ್ವರಾನಂದ ಸರಸ್ವತಿ ಸ್ವಾಮೀಜಿ ಮತ್ತಿತರರು ಪಾಲ್ಗೊಳ್ಳುವರು.ಚಂದನ ಸಾಹಿತ್ಯ ವೇದಿಕೆ ತನ್ನ 20ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಆಯೋಜಿಸಿದ ಚಂದನ ಸಾಹಿತ್ಯ ಸಂಗೀತ ಸಂಭ್ರಮೋತ್ಸವ - 2025 ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ವೇದಿಕೆ ಅಧ್ಯಕ್ಷ ಎಚ್. ಭೀಮರಾವ್ ವಾಷ್ಠರ್ ಸುಳ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸವಿತಾ ಕೋಡಂದೂರು ಆಯ್ಕೆ:

ಸಂಗೀತಗಾರ್ತಿ ಸವಿತಾ ಕೋಡಂದೂರು ಅವರು ‘ಚಂದನ ಸ್ವರ ಸಂಗೀತ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ. ಭಾನುವಾರ ಸುಳ್ಯದ ದೇವಮ್ಮ ಕಾಂಪ್ಲೆಕ್ಸ್ ಸಭಾಂಗಣದಲ್ಲಿ ಜರುಗಲಿರುವ ಚಂದನ ಸಾಹಿತ್ಯ ಸಂಗೀತ ಸಂಭ್ರಮೋತ್ಸವದ ಸಮಾರಂಭದಲ್ಲಿ ಈ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.