ಹಳೇಬೀಡು ಹೋಬಳಿ ಸಿದ್ದಾಪುರ ಗ್ರಾಮದ ಸರ್ವೆ ನಂ. 73ಕ್ಕೆ ಸಂಬಂಧಿಸಿದ ನಾಲ್ಕು ಎಕರೆ ಜಮೀನಿನಲ್ಲಿ ಮಾಜಿ ಶಾಸಕರ ಪತ್ನಿ ಚಂಚಲ ಕುಮಾರಸ್ವಾಮಿ ಎಂಬವರು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಗ್ರಾನೈಟ್ ಕಲ್ಲು ತೆಗೆಯಲು 30 ವರ್ಷಗಳಿಗೆ ಸೀಮಿತವಾಗಿ ಗುತ್ತಿಗೆ ಪಡೆದು ಗಣಿಗಾರಿಕೆ ನಡೆಸುತ್ತಿದ್ದಾರೆ. ಗಣಿಗಾರಿಕೆ ನಡೆಸುವ ವೇಳೆ ಬೃಹತ್ ಸ್ಫೋಟಕ ಮಾಡುವುದರಿಂದ ಸುತ್ತಮುತ್ತ ಇರುವ ಸಿದ್ದಾಪುರ, ಹರ್ಬಿಹಳ್ಳಿ, ಪಂಡಿತನಹಳ್ಳಿ ಗ್ರಾಮದಲ್ಲಿ ವಾಸದ ಮನೆಗಳು ಬಿರುಕು ಬಿಟ್ಟಿದ್ದು ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ ಎಂದರು. ಅಕ್ರಮ ಒತ್ತುವರಿ ಮಾಡಿ ಸರ್ಕಾರಕ್ಕೆ ಕೋಟ್ಯತರ ಹಣ ವಂಚನೆ ಮಾಡಿದ್ದು, ಈ ಬಗ್ಗೆ ಲೋಕಾಯುಕ್ತರು ಸುಮೊಟೋ ಪ್ರಕರಣ ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಎಂದು ಕೆಡಿಪಿ ಸದಸ್ಯ ಚೇತನ್ ಸಿ ಗೌಡ ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ ಬೇಲೂರುಗಣಿಗಾರಿಕೆ ನೆಪದಲ್ಲಿ ಅಕ್ರಮ ಒತ್ತುವರಿ ಮಾಡಿ ಸರ್ಕಾರಕ್ಕೆ ಕೋಟ್ಯತರ ಹಣ ವಂಚನೆ ಮಾಡಿದ್ದು, ಈ ಬಗ್ಗೆ ಲೋಕಾಯುಕ್ತರು ಸುಮೊಟೋ ಪ್ರಕರಣ ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಎಂದು ಕೆಡಿಪಿ ಸದಸ್ಯ ಚೇತನ್ ಸಿ ಗೌಡ ಒತ್ತಾಯಿಸಿದರು.ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಾಲೂಕಿನ ಹಳೇಬೀಡು ಹೋಬಳಿ ಸಿದ್ದಾಪುರ ಗ್ರಾಮದ ಸರ್ವೆ ನಂ. 73ಕ್ಕೆ ಸಂಬಂಧಿಸಿದ ನಾಲ್ಕು ಎಕರೆ ಜಮೀನಿನಲ್ಲಿ ಮಾಜಿ ಶಾಸಕರ ಪತ್ನಿ ಚಂಚಲ ಕುಮಾರಸ್ವಾಮಿ ಎಂಬವರು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಗ್ರಾನೈಟ್ ಕಲ್ಲು ತೆಗೆಯಲು 30 ವರ್ಷಗಳಿಗೆ ಸೀಮಿತವಾಗಿ ಗುತ್ತಿಗೆ ಪಡೆದು ಗಣಿಗಾರಿಕೆ ನಡೆಸುತ್ತಿದ್ದಾರೆ. ಗಣಿಗಾರಿಕೆ ನಡೆಸುವ ವೇಳೆ ಬೃಹತ್ ಸ್ಫೋಟಕ ಮಾಡುವುದರಿಂದ ಸುತ್ತಮುತ್ತ ಇರುವ ಸಿದ್ದಾಪುರ, ಹರ್ಬಿಹಳ್ಳಿ, ಪಂಡಿತನಹಳ್ಳಿ ಗ್ರಾಮದಲ್ಲಿ ವಾಸದ ಮನೆಗಳು ಬಿರುಕು ಬಿಟ್ಟಿದ್ದು ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ ಎಂದರು.ಈ ಬಗ್ಗೆ ಹಾಸನ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಜುಲೈನಲ್ಲಿ ಕೆಡಿಪಿ ಸದಸ್ಯರು ಮತ್ತು ಸುತ್ತಮುತ್ತಲ ಗ್ರಾಮಸ್ಥರು ತೆರಳಿ ದೂರು ನೀಡಲಾಗಿತ್ತು. ಸಂಬಂಧಪಟ್ಟ ಇಲಾಖೆ ಅಧಿಕಾರಿ, ತಾಲೂಕು ತಹಸೀಲ್ದಾರ್‌, ಜಿಲ್ಲಾಧಿಕಾರಿಗಳು ಇದುವರೆಗೆ ಸ್ಥಳ ಪರಿಶೀಲನೆಗೆ ಬಂದಿಲ್ಲ. ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೇ ಹಾರಿಕೆ ಉತ್ತರ ನೀಡುತ್ತಿದ್ದಾರೆ. ಸಿದ್ದಾಪುರ ಗ್ರಾಮದ ಸರ್ವೆ ನಂಬರ್‌ 73ರ ಜಮೀನಿನಲ್ಲಿ ಕಲ್ಲು ಗಣಿಗಾರಿಕೆಗೆ ಅನುಮತಿ ಪಡೆದು ಅನುಮತಿ ಇಲ್ಲದ ಸರ್ವೆ ನಂಬರ್‌ 72ರ ಸಂಬಂಧಿಸಿದಂತ ಸುಮಾರು 10 ಎಕರೆ ಜಮೀನಿನಲ್ಲಿ ಅಕ್ರಮವಾಗಿ 100 ಅಡಿ ಆಳ ತೆಗೆದು ಗಣಿಗಾರಿಕೆ ನಡೆಸುತ್ತಿದ್ದಾರೆ. ಇದರಿಂದ ಸುಮಾರು ಸರ್ಕಾರಕ್ಕೆ 10 ಕೋಟಿ ಹಣ ವಂಚನೆ ಮಾಡಿರುವುದು ಮೇಲ್ನೋಟಕ್ಕೆ ಬಹಿರಂಗವಾಗಿದ್ದರೂ ಮಾಜಿ ಸಚಿವ ಎಚ್ ಕೆ ಕುಮಾರಸ್ವಾಮಿ ಅವರ ಪ್ರಭಾವದಿಂದ ಅಧಿಕರಿಗಳು ಕಣ್ಣುಮುಚ್ಚಿ ಕುಳಿತಿದ್ದಾರೆ ಎಂದು ದೂರಿದರು.ಸ್ಥಳೀಯ ತಹಸೀಲ್ದಾರ್‌, ಜಿಲ್ಲಾಧಿಕಾರಿ ಮತ್ತು ಸಂಬಂಧಪಟ್ಟ ಗಣಿಗಾರಿಕೆ ಇಲಾಖೆಯ ಅಧಿಕಾರಿಗಳು ಗಮನಹರಿಸಿ ಸೂಕ್ತ ಕ್ರಮಕ್ಕೆ ಮುಂದಾಗದಿದ್ದರೆ ಸಿದ್ದಾಪುರ ಸೇರಿದಂತೆ ಮತ್ತು ಸುತ್ತಮುತ್ತಲ ಗ್ರಾಮಸ್ಥರು ಇಲ್ಲಿನ ತಾಲೂಕು ಕಚೇರಿ ಮುಂಭಾಗ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ. ಈ ಬಗ್ಗೆ ಲೋಕಾಯುಕ್ತರು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಸುಮೋಟೋ ಕೇಸ್ ದಾಖಲಿಸುವ ಮೂಲಕ ಅಕ್ರಮ ಗಣಿಗಾರಿಕೆ ನಡೆಸುವವರ ವಿರುದ್ಧ ಕ್ರಮಕ್ಕೆ ಮುಂದಾಗಬೇಕು ಹಾಗೂ ಕೋಟ್ಯಂತರ ಹಣವನ್ನು ವಸೂಲಿಮಾಡಬೇಕು ಎಂದು ಆಗ್ರಹಿಸಿದರು.ಸಿದ್ದಾಪುರ ಗ್ರಾಮಸ್ಥ ನಂಜೇಶ್ ಭಂಡಾರಿ ಮಾತನಾಡಿ ಅಕ್ರಮ ಗಣಿಗಾರಿಕೆ ಒತ್ತುವರಿಯಿಂದ ಬೃಹತ್ ಮಟ್ಟದ ಕಲ್ಲು ಸ್ಫೋಟ ಹಾಗೂ 150 ಅಡಿ ಆಳಕ್ಕೆ ಭೂಮಿ ಕೊರೆದಿರುವುದರಿಂದ ಜಮೀನಿನಲ್ಲಿರುವ ಕೊಳವೆ ಬಾವಿಗಳಲ್ಲಿ ನೀರು ಬರುತ್ತಿಲ್ಲ. ಕಲ್ಲು ಮಣ್ಣಿನಿಂದ ಕೆಲವು ಕೊಳವೆಬಾವಿ ಮುಚ್ಚಿ ಹೋಗಿದ್ದು ನೀರಿಗೆ ಆಹಾಕಾರವಾಗಿದೆ. ಅಲ್ಲದೆ ಜಮೀನಿನ ಬಳಿ ಕಲ್ಲು ಗಣಿಗಾರಿಕೆಯಿಂದ ಬರುವ ಅನುಪಯುಕ್ತ ಕಲ್ಲುಗಳನ್ನು ತಂದು ಸುರಿಯುತ್ತಿದ್ದು ಸಮೀಪದಲ್ಲಿದ್ದ ಹಳ್ಳ ಕಟ್ಟಳೆಗಳ ಮುಚ್ಚಿ ಹೋಗಿದ್ದು ದನ ಕರುಗಳಿಗೆ ಕುಡಿಯಲು ನೀರಿಲ್ಲದಂತಾಗಿದೆ. ಕ್ವಾರೆಯ ಅಕ್ರಮ ಒತ್ತುವರಿಯಿಂದ ಸುತ್ತಮುತ್ತಲಿನ ಮನೆಗಳ ಗೋಡೆಗಳು ಬಿರುಕು ಬಿಟ್ಟಿವೆ. ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೆ ಕ್ರಮಕ್ಕೆ ಮುಂದಾಗಬೇಕು ಇಲ್ಲದಿದ್ದರೆ ಹೋರಾಟ ನಡೆಸಬೇಕಾಗುತ್ತದೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಕೆಡಿಪಿ ಸದಸ್ಯ ನವೀನ್ , ಜಗದೀಶ್ ಹಾಜರಿದ್ದರು.