ಸಾರಾಂಶ
ಕುಂಬೂರು ಕಾಫಿ ಎಸ್ಟೇಟಿನ ಕಾರ್ಮಿಕರಿಗೆ ಹಾಗೂ ಹೊರ ರಾಜ್ಯದಿಂದ ಅಸ್ಸಾಂ, ಬಿಹಾರ, ಉತ್ತರ ಪ್ರದೇಶದಿಂದ ಬಂದ ವಲಸೆ ಕಾರ್ಮಿಕರ ಹಾಗೂ ಅವರ ಮಕ್ಕಳ ಕಣ್ಣಿನ ತಪಾಸಣೆ ನಡೆಸಿದ ಯುಪಿಕೃತಿ ಎನ್‌ಜಿಓ, ಔಷಧಿ ಹಾಗೂ ಕನ್ನಡಕ ಬೇಕಾದವರಿಗೆ ಪರಿಶೀಲಿಸಿ ಉಚಿತ ಕನ್ನಡಕ ವಿತರಿಸಿದರು.
ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಬಡತನದಲ್ಲಿರುವ ಕಾರ್ಮಿಕರನ್ನು ಗುರುತಿಸಿ ಅವರ ಕಣ್ಣಿನ ತಪಾಸಣೆ ನಡೆಸಿ ಚಿಕಿತ್ಸೆ ನೀಡುತ್ತಿರುವ ಯುಪಿಕೃತಿ ಎನ್‌ಜಿಒದ ಸೇವಾ ಕಾರ್ಯ ಮೆಚ್ಚುವಂಥದ್ದು ಎಂದು ಮಾದಾಪುರ ಗ್ರಾ.ಪಂ. ಸದಸ್ಯ ಕೆ.ಎ.ಲತೀಫ್ ಹೇಳಿದರು.ಮಾದಾಪುರದ ಕುಂಬೂರು ಎಸ್ಟೇಟ್‌ನಲ್ಲಿ ಬೆಂಗಳೂರಿನ ಯುಪಿಕೃತಿ ಸ್ವಯಂ ಸೇವಾ ಸಂಸ್ಥೆ ವತಿಯಿಂದ ಕಾರ್ಮಿಕರಿಗೆ ಉಚಿತವಾಗಿ ಕಣ್ಣಿನ ತಪಾಸಣೆ ಹಾಗೂ ಕನ್ನಡಕ ವಿತರಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಮನುಷ್ಯನ ಜೀವನಕ್ಕೆ ಕಣ್ಣು ಅಮೂಲ್ಯವಾದದು ಎಂದು ಹೇಳಿದರು.ಕುಂಬೂರು ಕಾಫಿ ಎಸ್ಟೇಟಿನ ಕಾರ್ಮಿಕರಿಗೆ ಹಾಗೂ ಹೊರ ರಾಜ್ಯದಿಂದ ಅಸ್ಸಾಂ, ಬಿಹಾರ, ಉತ್ತರ ಪ್ರದೇಶದಿಂದ ಬಂದ ವಲಸೆ ಕಾರ್ಮಿಕರ ಹಾಗೂ ಅವರ ಮಕ್ಕಳ ಕಣ್ಣಿನ ತಪಾಸಣೆ ನಡೆಸಿದ ಯುಪಿಕೃತಿ ಎನ್‌ಜಿಓ, ಔಷಧಿ ಹಾಗೂ ಕನ್ನಡಕ ಬೇಕಾದವರಿಗೆ ಪರಿಶೀಲಿಸಿ ಉಚಿತ ಕನ್ನಡಕ ವಿತರಿಸಿದರು.ಯುಪಿಕೃತಿ ಸಂಸ್ಥೆಯ ಡಾ.ಚಂದನ್, ಸಂತೋಷ್, ಸುಮಂತ್ ಹಾಗೂ ಡಾ.ಕಾವ್ಯಶ್ರೀ, ಕಾರ್ಮಿಕರ ಕಣ್ಣಿನ ತಪಾಸಣೆ ನಡೆಸಿ ಸಲಹೆ ನೀಡಿದರು.