ಸಾರಾಂಶ
ಸಾಧಕರಾದ ರತ್ನಾಕರ ಶೆಟ್ಟಿ ಅಂಪಾರು, ದಿನಕರ ಆರ್ ಶೆಟ್ಟಿ ಬಸ್ರೂರು, ಸುಭಾಶ್ಚಂದ್ರ ಶೆಟ್ಟಿ ಅಂಪಾರು, ಶಶಿಧರ ಶೆಟ್ಟಿ ನೂಜೆಟ್ಟು, ಪ್ರಶಾಂತ ಹೆಗ್ಡೆ ಜಾಂಬೂರು ಅವರನ್ನು ಸನ್ಮಾನಿಸಲಾಯಿತು.
ಕನ್ನಡಪ್ರಭ ವಾರ್ತೆ ಕುಂದಾಪುರ
ಇಲ್ಲಿನ ಭಾಮಾ ಅಸೋಸಿಯೇಟ್ಸ್ ಸಂಸ್ಥೆಯ ವೆಬ್‌ಸೈಟ್ ಅನಾವರಣ ಕಾರ್ಯಕ್ರಮ ಸಾಯಿ ಸೆಂಟರ್ ಬಿಲ್ಡಿಂಗ್‌ನಲ್ಲಿ ನಡೆಯಿತು.ವೆಬ್‌ಸೈಟ್ ಅನಾವರಣಗೊಳಿಸಿ, ಸಭೆಯ ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ, ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಬಿ. ಅಪ್ಪಣ್ಣ ಹೆಗ್ಡೆ ಮಾತನಾಡಿ, ಈಗಿನ ಕಾಲಕ್ಕೆ ತಕ್ಕಂತೆ ಹೊಸ ಆಲೋಚನೆಗಳ ಮೂಲಕ ಭಾಮಾ ಅಸೋಸಿಯೇಟ್ಸ್ ತನ್ನ ವೆಬ್‌ಸೈಟ್ ಆರಂಭಿಸಿದೆ ಎಂದರು.ಉಡುಪಿ ನಗರಸಭೆಯ ಸದಸ್ಯ ವಿಜಯ ಕೊಡವೂರು ಮಾತನಾಡಿ, ಈ ಸಂಸ್ಥೆಯ ಕನಸು ಹೊತ್ತ ಮಿತ್ರ ಆಕಾಶ್ ಶೆಟ್ಟಿ ಅಂಪಾರು ಅವರ ಆಲೋಚನೆ ಹೊಸ ಭರವಸೆ ಮೂಡಿಸಿದೆ. ಇದರ ಜೊತೆಗೆ ಅವರು ಉಡುಪಿ ಜಿಲ್ಲೆಯ ಮೂಲೆಮೂಲೆಗಳಲ್ಲಿರುವ ದಿವ್ಯಾಂಗರ ಸೇವೆ ಮಾಡುತ್ತಿದ್ದಾರೆ. ಅವರ ಸೇವೆ ಇನ್ನಷ್ಟು ಹೆಚ್ಚಾಗಲಿ ಎಂದರು.
ನಿವೃತ್ತ ಶಿಕ್ಷಕ, ಲಯ್ಸನ್ ಕ್ಲಬ್ ಕುಂದಾಪುರ ಕಾರ್ಯದರ್ಶಿ ದಿನಕರ ಆರ್. ಶೆಟ್ಟಿ ಶುಭ ಹಾರೈಸಿದರು. ಸಾಧಕರಾದ ರತ್ನಾಕರ ಶೆಟ್ಟಿ ಅಂಪಾರು, ದಿನಕರ ಆರ್ ಶೆಟ್ಟಿ ಬಸ್ರೂರು, ಸುಭಾಶ್ಚಂದ್ರ ಶೆಟ್ಟಿ ಅಂಪಾರು, ಶಶಿಧರ ಶೆಟ್ಟಿ ನೂಜೆಟ್ಟು, ಪ್ರಶಾಂತ ಹೆಗ್ಡೆ ಜಾಂಬೂರು ಅವರನ್ನು ಸನ್ಮಾನಿಸಲಾಯಿತು.ಭಾಮಾ ಅಸೋಸಿಯೇಟ್ಸ್ ಸಂಸ್ಥೆಯ ಆಡಳಿತ ವ್ಯವಸ್ಥಾಪಕ ಆಕಾಶ್ ಶೆಟ್ಟಿ ಅಂಪಾರು, ವೆಬ್‌ಸೈಟ್ ವಿನ್ಯಾಸಕಾರ ಸಂದೀಪ್ ಕೊಠಾರಿ ಉಪಸ್ಥಿತರಿದ್ದರು. ಅಕ್ಷಯ ಹೆಗ್ಡೆ ಮೊಳಹಳ್ಳಿ ಸ್ವಾಗತಿಸಿ, ನಿರೂಪಿಸಿದರು, ಸಂಸ್ಥೆಯ ಆಡಳಿತ ವ್ಯವಸ್ಥಾಪಕ ಆಕಾಶ್ ಶೆಟ್ಟಿ ಅಂಪಾರು ವಂದಿಸಿದರು.