ಸಾರಾಂಶ
ರಕ್ತದಾನವು ಜೀವಗಳನ್ನು ಉಳಿಸುವ ಒಂದು ಉದಾತ್ತ ಕಾರ್ಯವಾಗಿದೆ ಮತ್ತು ಸಮುದಾಯದ ಜವಾಬ್ದಾರಿಯ ಪ್ರಜ್ಞೆಯನ್ನು ಹೆಚ್ಚಿಸುತ್ತದೆ. ಈ ಉದ್ದೇಶವನ್ನು ಉತ್ತೇಜಿಸಲು ಇಲ್ಲಿನ ಎಂಐಟಿ ಕಾಲೇಜಿನ ಎನ್‌ಎಸ್‌ಎಸ್ ಘಟಕವು ಭಾರತೀಯ ರೆಡ್ ಕ್ರಾಸ್ ಸೊಸೈಟಿ ಮತ್ತು ಲಯನ್ಸ್ ಕ್ಲಬ್ ಹಂಗ್ಳೂರ್ ಸಹಯೋಗದೊಂದಿಗೆ ಇತ್ತೀಚೆಗೆ ರಕ್ತದಾನ ಶಿಬಿರವನ್ನು ಆಯೋಜಿಸಿತು.
ಕನ್ನಡಪ್ರಭ ವಾರ್ತೆ ಕುಂದಾಪುರ
ರಕ್ತದಾನವು ಜೀವಗಳನ್ನು ಉಳಿಸುವ ಒಂದು ಉದಾತ್ತ ಕಾರ್ಯವಾಗಿದೆ ಮತ್ತು ಸಮುದಾಯದ ಜವಾಬ್ದಾರಿಯ ಪ್ರಜ್ಞೆಯನ್ನು ಹೆಚ್ಚಿಸುತ್ತದೆ. ಈ ಉದ್ದೇಶವನ್ನು ಉತ್ತೇಜಿಸಲು ಇಲ್ಲಿನ ಎಂಐಟಿ ಕಾಲೇಜಿನ ಎನ್‌ಎಸ್‌ಎಸ್ ಘಟಕವು ಭಾರತೀಯ ರೆಡ್ ಕ್ರಾಸ್ ಸೊಸೈಟಿ ಮತ್ತು ಲಯನ್ಸ್ ಕ್ಲಬ್ ಹಂಗ್ಳೂರ್ ಸಹಯೋಗದೊಂದಿಗೆ ಇತ್ತೀಚೆಗೆ ರಕ್ತದಾನ ಶಿಬಿರವನ್ನು ಆಯೋಜಿಸಿತು.ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ ಲಯನ್ಸ್ ಕ್ಲಬ್ ವಲಯ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಸ್ವಯಂಪ್ರೇರಿತ ರಕ್ತದಾನದ ಪರಿಣಾಮದ ಕುರಿತು ಒಳನೋಟವನ್ನು ತಿಳಿಸಿದರು.ಇನ್ನೋರ್ವ ಮುಖ್ಯ ಅತಿಥಿಯಾಗಿ ಭಾರತೀಯ ರೆಡ್ ಕ್ರಾಸ್ ಸೊಸೈಟಿ ಅಧ್ಯಕ್ಷ ಜಯಂಕರ್ ಶೆಟ್ಟಿ, ನಿಯಮಿತ ರಕ್ತದಾನದ ಅಗತ್ಯತೆ ಮತ್ತು ಜೀವಗಳನ್ನು ಉಳಿಸುವಲ್ಲಿ ಅದರ ಪಾತ್ರದ ಬಗ್ಗೆ ಮಾತನಾಡಿದರು. ಕಾಲೇಜಿನ ಉಪ ಪ್ರಾಂಶುಪಾಲ ಡಾ. ಮೆಲ್ವಿನ್ ಡಿಸೋಜ ಅಧ್ಯಕ್ಷತೆ ವಹಿಸಿ, ಸಾಮಾಜಿಕ ಜವಾಬ್ದಾರಿ ಮತ್ತು ಸಮುದಾಯ ಸೇವೆಯ ಮಹತ್ವವನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು.ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಕಾರ್ಯದರ್ಶಿ ರೋಹನ್ ಡಿಕೋಸ್ಟಾ, ಕಾರ್ಯದರ್ಶಿ ಮ್ಯಾಥ್ಯೂ ಡಿಸೋಜ, ಕಾರ್ಯದರ್ಶಿ ಶಿವರಾಮ್ ಶೆಟ್ಟಿ ಮತ್ತು ಖಜಾಂಚಿ ಶ್ರೀ ಪುರಾಣಿಕ್, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಎನ್‌ಎಸ್‌ಎಸ್ ಸಂಯೋಜಕ ಡಾ. ಸರವಣನ್ ಸ್ವಾಗತಿಸಿ, ವಂದಿಸಿದರು. ವಿದ್ಯಾರ್ಥಿನಿ ಎಂ.ಸಿ. ವರ್ಷ ನಿರೂಪಿಸಿದರು. ಸಭಾ ಕಾರ್ಯಕ್ರಮದ ನಂತರ ಎನ್‌ಎಸ್ಎಸ್ ಸ್ವಯಂಸೇವಕರ ಸಹಾಯದಿಂದ ರೆಡ್‌ಕ್ರಾಸ್‌ನ ವೈದ್ಯಕೀಯ ತಂಡವು ವ್ಯವಸ್ಥಿತವಾಗಿ ರಕ್ತದಾನ ಪ್ರಕ್ರಿಯೆ ನಡೆಸಿಕೊಟ್ಟರು. ನೂರಕ್ಕೂ ಅಧಿಕ ದಾನಿಗಳು ರಕ್ತದಾನ ಮಾಡಿದರು.
;Resize=(128,128))
;Resize=(128,128))
;Resize=(128,128))
;Resize=(128,128))