ಕುಂದಾಪುರ ಎಂಐಟಿಕೆ-ಕಾಕುಂಜೆ ಸಾಫ್ಟ್‌ವೇರ್‌ ಒಪ್ಪಂದ

| Published : Oct 29 2025, 11:00 PM IST

ಸಾರಾಂಶ

ಮೂಡಲಕಟ್ಟೆ ಎಂ.ಐ.ಟಿ.ಕೆ.ಯ ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಶನ್ ಇಂಜಿನಿಯರಿಂಗ್ ವಿಭಾಗವು ವಿದ್ಯಾರ್ಥಿಗಳನ್ನು ಕೈಗಾರಿಕಾ ಕ್ಷೇತ್ರಕ್ಕೆ ಸಿದ್ಧಗೊಳಿಸಲು, ಮಂಗಳೂರಿನ ಕಾಕುಂಜೆ ಸಾಫ್ಟವೇರ್ ಪ್ರೈವೇಟ್ ಲಿಮಿಟೆಡ್ ಕಂಪನಿಯೊಂದಿಗೆ ಒಪ್ಪಂದಕ್ಕೆ ಸಹಿ ಮಾಡಿದೆ.

ಕುಂದಾಪುರ: ಇಲ್ಲಿನ ಮೂಡಲಕಟ್ಟೆ ಎಂ.ಐ.ಟಿ.ಕೆ.ಯ ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಶನ್ ಇಂಜಿನಿಯರಿಂಗ್ ವಿಭಾಗವು ವಿದ್ಯಾರ್ಥಿಗಳನ್ನು ಕೈಗಾರಿಕಾ ಕ್ಷೇತ್ರಕ್ಕೆ ಸಿದ್ಧಗೊಳಿಸಲು, ಮಂಗಳೂರಿನ ಕಾಕುಂಜೆ ಸಾಫ್ಟವೇರ್ ಪ್ರೈವೇಟ್ ಲಿಮಿಟೆಡ್ ಕಂಪನಿಯೊಂದಿಗೆ ಒಪ್ಪಂದಕ್ಕೆ ಸಹಿ ಮಾಡಿದೆ.

ಈ ಸಂದರ್ಭ ಸಂಸ್ಥೆಯ ಅಧ್ಯಕ್ಷ ಸಿದ್ಧಾರ್ಥ ಜೆ. ಶೆಟ್ಟಿ, ಕಾಕುಂಜೆ ಸಾಫ್ಟವೇರ್ ಕಂಪೆನಿಯ ಸಿಇಒ ಡಾ. ಜಿ. ಕೆ. ಭಟ್, ಐ. ಎಂ. ಜೆ. ಸಂಸ್ಥೆಗಳ ಶೈಕ್ಷಣಿಕ ನಿರ್ದೇಶಕ ಡಾ. ಎಸ್. ಎನ್. ಭಟ್, ಪ್ರಾಂಶುಪಾಲ ಡಾ. ರಾಮಕೃಷ್ಣ ಹೆಗ್ಗಡೆ, ಇ. ಸಿ. ಇ. ವಿಭಾಗದ ಮುಖ್ಯಸ್ಥ ಡಾ. ವರುಣ್ ಕುಮಾರ್ ಹಾಗೂ ವಿಭಾಗದ ಪ್ರಾಧ್ಯಾಪಕರು ಹಾಜರಿದ್ದರು.

ಕಾಕುಂಜೆ ಸಾಫ್ಟವೇರ್ ಕಂಪನಿ ಕರ್ನಾಟಕದ ಪ್ರಮುಖ ಐಟಿ ಸಂಸ್ಥೆಯಾಗಿದ್ದು, ಐಟಿ ಕನ್ಸಲ್ಟಿಂಗ್, ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್ ಉತ್ಪನ್ನಗಳ ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದೆ. ಸಂಸ್ಥೆಯು ಎಂಟರ್‌ಪ್ರೈಸ್ ಸಾಫ್ಟ್‌ವೇರ್, ಸ್ಥಿರ ಮತ್ತು ಚರ ವೆಬ್‌ಸೈಟ್‌ಗಳು, ಮೊಬೈಲ್ ಅಪ್ಲಿಕೇಶನ್‌ಗಳು, ಇ-ಕಾಮರ್ಸ್ ಪರಿಹಾರಗಳು, ಮತ್ತು ಈಆರ್ಪಿ ವ್ಯವಸ್ಥೆಗಳನ್ನು ವಿನ್ಯಾಸಗೊಳಿಸುತ್ತದೆ. ಇದು ಎಂ.ಐ.ಟಿ.ಕೆ.ಯ ವಿದ್ಯಾರ್ಥಿಗಳಿಗೆ ಅಗತ್ಯ ತರಬೇತಿ ನೀಡಲಿದೆ.