ಸಾರಾಂಶ
ಕನ್ನಡಪ್ರಭ ವಾರ್ತೆ ಕುಂದಾಪುರ
ಮೂಲ ವಿಜ್ಞಾನ ಮತ್ತು ಮಾನವಿಕ ವಿಭಾಗದ ವತಿಯಿಂದ ಇಲ್ಲಿನ ಮೂಡ್ಲಕಟ್ಟೆ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ)ಯಲ್ಲಿ ಆಯೋಜಿಸಿದ್ದ ವಿಜ್ಞಾನ ಮಾದರಿ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭವು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಪರಿಕಲ್ಪನೆಗಳ ತಿಳುವಳಿಕೆಯನ್ನು ಹೆಚ್ಚಿಸುವ ಜೊತೆಗೆ ಆವಿಷ್ಕಾರ ಮತ್ತು ಸೃಜನಶೀಲತೆಯನ್ನು ಬೆಳೆಸುವ ಉದ್ದೇಶದಿಂದ ಈ ಸ್ಪರ್ಧೆಯನ್ನು ನಡೆಸಲಾಯಿತು.ಕಾರ್ಯಕ್ರಮದಲ್ಲಿ ಕೋಟ ವಿವೇಕ ಪಿಯು ಕಾಲೇಜಿನ ರಸಾಯನಶಾಸ್ತ್ರ ವಿಭಾಗ ಮುಖ್ಯಸ್ಥೆ ಪ್ರೊ. ಸುಜಾತಾ, ಕೋಟ ವಿವೇಕ ಕಾಲೇಜಿನ ಎಲೆಕ್ಟ್ರಾನಿಕ್ಸ್ ವಿಭಾಗದ ಪ್ರಾಧ್ಯಾಪಕಿ ಯಶವಂತಿ ಸ್ಪರ್ಧೆಯ ತೀರ್ಪುಗಾರಾಗಿ ಉಪಸ್ಥಿತರಿದ್ದರು.ಸ್ಪರ್ಧೆಯಲ್ಲಿ 80ಕ್ಕೂ ಹೆಚ್ಚು ನವೀನ ಮಾದರಿಗಳು ಇದ್ದು, ಅದರಲ್ಲಿ 12 ಮಾದರಿಗಳನ್ನು ಅಂತಿಮ ಹಂತಕ್ಕೆ ಆಯ್ಕೆ ಮಾಡಲಾಯಿತು. ರಕ್ಷಿತಾ, ಧನ್ಯ ಡಿ., ನಾಗರತ್ನ ಎಂ. ನಾಯ್ಕ್, ಪ್ರೇಕ್ಷಾ ಎಸ್., ಉದ್ದವ್ವ ತಂಡ ಪ್ರಥಮ ಬಹುಮಾನದೊಂದಿಗೆ 5000 ರು. ನಗದು ಪಡೆದರು.ದ್ವಿತೀಯ ಸ್ಥಾನ ಮತ್ತು 3000 ರು. ನಗದು ಮಾನ್ಯ ಎಂ.ಎಸ್., ಸೌಂದರ್ಯ ದಾಸ್ ಬಿ.ಎ., ಪ್ರಮೋಧಿನಿ ಪಿ.ಕೆ., ಶೇನಾ ಜೆ. ಎಸ್., ದೀಪಾ ಪಿ. ಅವರನ್ನೊಳಗೊಂಡ ತಂಡ ಗೆದ್ದುಕೊಂಡಿತು.ತೃತೀಯ ಸ್ಥಾನವನ್ನು ಭಾಗ್ಯಶ್ರೀ ಶೆಟ್ಟಿ, ಹರ್ಷಿತಾ, ದಿಶಾ ಶೆಟ್ಟಿ, ಪೂಜಾರಿ ವಿ. ಶ್ರಿಧರ್, ಅಖಿಲೇಶ್ ತಂಡವು 2000 ರು. ನಗದು ಬಹುಮಾನದೊಂದಿಗೆ ಪಡೆದುಕೊಂಡಿತು.ವಿಭಾಗದ ಮುಖ್ಯಸ್ಥ ಪ್ರೊ.ದೀಪಕ್ ಶೆಟ್ಟಿ, ಪ್ರಾಯೋಗಿಕ ಕಲಿಕೆಯ ಮಹತ್ವವನ್ನು ಒತ್ತಿ ಹೇಳಿ ವಿದ್ಯಾರ್ಥಿಗಳ ಪ್ರಯತ್ನ ಮತ್ತು ಅಧ್ಯಾಪಕರ ಪ್ರೇರಣೆಯನ್ನು ಶ್ಲಾಘಿಸಿದರು. ಕಾರ್ಯಕ್ರಮವನ್ನು ತ್ರಿಶಾ ಶೆಟ್ಟಿ ಮತ್ತು ಲಿಖಿತ ನಿರೂಪಿಸಿ, ವಂದಿಸಿದರು.