ಕುಂದಾಪುರ: ವಿದ್ಯಾರಣ್ಯ ಶಾಲೆಯ ಪ್ರಾವ್ಯ ಶೆಟ್ಟಿಗೆ 3ನೇ ರ‍್ಯಾಂಕ್‌

| Published : May 03 2025, 12:16 AM IST

ಸಾರಾಂಶ

ವಿದ್ಯಾರ್ಥಿನಿ ಪ್ರಾವ್ಯ ಪಿ. ಶೆಟ್ಟಿ 625ಕ್ಕೆ 623 ಅಂಕಗಳಿಸಿ 3ನೇ ರ್‍ಯಾಂಕ್ ಪಡೆದಿದ್ದಾಳೆ. ಅಲ್ಲದೇ ಆಯುಷ್ ಯು. ಶೆಟ್ಟಿ 622 ಅಂಕಗಳೊಂದಿಗೆ 4ನೇ, ಅನುಶ್ರೀ 620 ಅಂಕಗಳೊಂದಿಗೆ 6ನೇ, ಅಪೇಕ್ಷಾ ಶೆಟ್ಟಿ 619 ಅಂಕಗಳೊಂದಿಗೆ 7ನೇ, ಸುಖಿ ಎಸ್. ಶೆಟ್ಟಿ 618 ಅಂಕಗಳೊಂದಿಗೆ 8ನೇ, ದರ್ಶನ್ ಕೆ.ಯು. 616 ಅಂಕಗಳೊಂದಿಗೆ 10ನೇ ರ್‍ಯಾಂಕ್ ಪಡೆದಿದ್ದಾರೆ.

ಸುಜ್ಞಾನ್ ಎಜುಕೇಶನಲ್ ಟ್ರಸ್ಟ್‌ನ ಈ ಶಾಲೆ ಟಾಪ್ 10ರೊಳಗೆ 6 ರ‍್ಯಾಂಕ್‌ ಸಾಧನೆ

ಕನ್ನಡಪ್ರಭ ವಾರ್ತೆ ಕುಂದಾಪುರ

ಇಲ್ಲಿನ ಯಡಾಡಿ-ಮತ್ಯಾಡಿಯ ಸುಜ್ಞಾನ್ ಎಜುಕೇಶನಲ್ ಟ್ರಸ್ಟ್‌ನ ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶದಲ್ಲಿ ರಾಜ್ಯಮಟ್ಟದಲ್ಲಿ 10ರೊಳಗಿನ 6 ರ್‍ಯಾಂಕ್‌ಗಳನ್ನು ಪಡೆದು ಅಮೋಘ ಸಾಧನೆಗೈದಿದ್ದಾರೆ. ಇಲ್ಲಿನ ವಿದ್ಯಾರ್ಥಿನಿ ಪ್ರಾವ್ಯ ಪಿ. ಶೆಟ್ಟಿ 625ಕ್ಕೆ 623 ಅಂಕಗಳಿಸಿ 3ನೇ ರ್‍ಯಾಂಕ್ ಪಡೆದಿದ್ದಾಳೆ. ಅಲ್ಲದೇ ಆಯುಷ್ ಯು. ಶೆಟ್ಟಿ 622 ಅಂಕಗಳೊಂದಿಗೆ 4ನೇ, ಅನುಶ್ರೀ 620 ಅಂಕಗಳೊಂದಿಗೆ 6ನೇ, ಅಪೇಕ್ಷಾ ಶೆಟ್ಟಿ 619 ಅಂಕಗಳೊಂದಿಗೆ 7ನೇ, ಸುಖಿ ಎಸ್. ಶೆಟ್ಟಿ 618 ಅಂಕಗಳೊಂದಿಗೆ 8ನೇ, ದರ್ಶನ್ ಕೆ.ಯು. 616 ಅಂಕಗಳೊಂದಿಗೆ 10ನೇ ರ್‍ಯಾಂಕ್ ಪಡೆದಿದ್ದಾರೆ.

ರೀಮಾ ಪ್ರಕಾಶ್ ಶೆಟ್ಟಿ (615), ಎಸ್.ಆರ್. ರಿತೇಶ್ (615), ಅಭಿಲಾಷ್ (613), ಆದಿತ್ಯ ಬಸವರಾಜ್ (613), ಕನ್ನಿಕ (613), ವೈಷ್ಣವಿ (606), ನಯನ ಕೆ. (604), ರಜತಕುಮಾರ್ ಶೆಟ್ಟಿ (604), ಮೇದಿತ್ ಶೆಟ್ಟಿ (602) ಅಂಕಗಳನ್ನು ಪಡೆದಿದ್ದಾರೆ.ಪರೀಕ್ಷೆ ಬರೆದ 107 ವಿದ್ಯಾರ್ಥಿಗಳಲ್ಲಿ 15 ವಿದ್ಯಾರ್ಥಿಗಳು 600ಕ್ಕಿಂತ ಅಧಿಕ ಅಂಕ, 21 ವಿದ್ಯಾರ್ಥಿಗಳು ಶೇ.95ಕ್ಕಿಂತ ಅಧಿಕ ಅಂಕ ಪಡೆದರೆ, 62 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಅಂಕ ಪಡೆದಿದ್ದಾರೆ.ವಿದ್ಯಾರ್ಥಿಗಳ ಈ ಸಾಧನೆಗೆ ಶಾಲೆಯ ಆಡಳಿತ ಮಂಡಳಿ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗ ಮತ್ತು ಸುಜ್ಞಾನ್ ಎಜುಕೇಶನಲ್ ಟ್ರಸ್ಟ್ ಅಧ್ಯಕ್ಷ ಡಾ. ರಮೇಶ್ ಶೆಟ್ಟಿ, ಕಾರ್ಯದರ್ಶಿ ಪ್ರತಾಪಚಂದ್ರ ಶೆಟ್ಟಿ ಹಾಗೂ ಖಜಾಂಚಿ ಭರತ್ ಶೆಟ್ಟಿ ಸಂತಸ ವ್ಯಕ್ತಪಡಿಸಿದ್ದಾರೆ.