ಕುಂಡ್ಯೋಳಂಡ ಕಪ್ ಹಾಕಿ ಪಂದ್ಯಾವಳಿ: ಅಂಜಪರವಂಡ ಭರ್ಜರಿ ಜಯ

| Published : Apr 15 2024, 01:22 AM IST

ಕುಂಡ್ಯೋಳಂಡ ಕಪ್ ಹಾಕಿ ಪಂದ್ಯಾವಳಿ: ಅಂಜಪರವಂಡ ಭರ್ಜರಿ ಜಯ
Share this Article
  • FB
  • TW
  • Linkdin
  • Email

ಸಾರಾಂಶ

ಚೆರಿಯ ಪರಂಬು ಜನರಲ್ ಕೆ.ಎಸ್ ತಿಮ್ಮಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕುಟುಂಬಗಳ ನಡುವಿನ ಕುಂಡ್ಯೋಳಂಡ ಕಪ್ ಹಾಕಿ ಪಂದ್ಯಾವಳಿಯ ಭಾನುವಾರ ಅಂಜಪರವಂಡ ತಿರುತೆರ ವಿರುದ್ಧ ಭರ್ಜರಿ ಜಯಗಳಿಸಿತು. ಅಂಜಪರವಂಡ ತಂಡ 5 ಗೋಲು ದಾಖಲಿಸಿದರೆ ತಿರುತೆರ ಕೇವಲ ಒಂದು ಗೋಲು ಗಳಿಸಿತು.

ದುಗ್ಗಳ ಸದಾನಂದಕನ್ನಡಪ್ರಭ ವಾರ್ತೆ ನಾಪೋಕ್ಲುಇಲ್ಲಿನ ಚೆರಿಯ ಪರಂಬುವಿನ ಜನರಲ್ ಕೆ.ಎಸ್ ತಿಮ್ಮಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕುಟುಂಬಗಳ ನಡುವಿನ ಕುಂಡ್ಯೋಳಂಡ ಕಪ್ ಹಾಕಿ ಪಂದ್ಯಾವಳಿಯ ಭಾನುವಾರದ ಪಂದ್ಯಗಳಲ್ಲಿ ದಿನದ ಮೊದಲ ಪಂದ್ಯದಲ್ಲಿ ಅಂಜಪರವಂಡ ತಿರುತೆರ ವಿರುದ್ಧ ಭರ್ಜರಿ ಜಯಗಳಿಸಿತು. ಅಂಜಪರವಂಡ ತಂಡ 5 ಗೋಲು ದಾಖಲಿಸಿದರೆ ತಿರುತೆರ ಕೇವಲ ಒಂದು ಗೋಲು ಗಳಿಸಿತು.ಮಲ್ಚಿರ ಮತ್ತು ಚೌರೀರ (ಹೊದ್ದೂರು) ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಚೌರೀರ ತಂಡ 3.0 ರಿಂದ ಜಯ ದಾಖಲಿಸಿತು. ಕೂತಂಡ ತಂಡ ಬೇಪಡಿಯಂಡ ವಿರುದ್ಧ 4-0 ರಿಂದ ಗೆಲುವು ಸಾಧಿಸಿದರೆ ಪಾಂಡಂಡ ಮತ್ತು ಚಂಗುಲಂಡ ತಂಡಗಳ ನಡುವೆ ಸಮಬಲದ ಹೋರಾಟ ನಡೆಯಿತು. ಬಳಿಕ ಟೈ ಬ್ರೇಕರ್ ನಲ್ಲಿ 4-3 ಅಂತರದಿಂದ ಪಾಂಡಂಡ ಚಂಗುಲಂಡ ವಿರುದ್ಧ ಜಯ ಸಾಧಿಸಿತು.ಬಾಳೆಯಡ ತಂಡ ಕಾಂಡಂಡ ವಿರುದ್ಧ 2-0 ಅಂತರದ ಗೆಲುವು ಸಾಧಿಸಿದರೆ ಚಂದುಮಾಡ ಮಾಪಣಮಾಡ ತಂಡದ ವಿರುದ್ಧ 1-0 ಅಂತರದ ಗೆಲುವು ಸಾಧಿಸಿದರೆ ಮಣವಟ್ಟಿರ ಮತ್ತು ಮಾಲೆಟಿರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮಣವಟ್ಟಿರ 2-0 ಅಂತರದಿಂದ ಜಯ ದಾಖಲಿಸಿತು. ವಲ್ಲಂಡ ಮತ್ತು ನೆರವಂಡ ತಂಡಗಳ ನಡುವೆ ರೋಚಕ ಪಂದ್ಯ ನಡೆಯಿತು. ನೆರವಂಡ 3- 0 ಅಂತರದಿಂದ ವಲ್ಲಂಡ ವಿರುದ್ಧ ಜಯಗಳಿಸಿತು.ಸ್ಥಳೀಯರ ಜೈಕಾರಗಳ ನಡುವೆ ಕಣಕ್ಕಿಳಿದ ಕುಲ್ಲೇಟಿರ ತಂಡ ಉದಿಯಂಡ ವಿರುದ್ಧ 4-0 ಭರ್ಜರಿ ಗೆಲುವು ದಾಖಲಿಸಿತು. ಮೂಕಂಡ ತಂಡ ಕುಮ್ಮಂಡ ವಿರುದ್ಧ 4-2 ಅಂತರದಿಂದ ಜಯಸಾಧಿಸಿದರೆ ಚೆಪ್ಪುಡಿರ ಚೊಟ್ಟೆಯಂಡಮಾಡ ವಿರುದ್ಧ 6-0 ಅಂತರದಲ್ಲಿ ಜಯ ದಾಖಲಿಸಿತು. ಬೊಳ್ಳಂಡ ಕಾಣತಂಡ ವಿರುದ್ಧ 1-0 ಅಂತರದಿಂದ ಗೆಲುವು ಸಾಧಿಸಿದರೆ ಚಿರಿಯಪಂಡ ಮಾಚಿಮಾಡ ವಿರುದ್ಧ 3-1 ಅಂತರದ ಗೆಲುವು ದಾಖಲಿಸಿತು. ಮುಂದಿನ ಪಂದ್ಯದಲ್ಲಿ ಪುಲ್ಲಂಗಡ ಇಟ್ಟಿರ ವಿರುದ್ಧ 3-1 ಅಂತರದ ಗೆಲುವು ಸಾಧಿಸಿತು. ಚೇನಂಡ ಕೇಲಪಂಡ ವಿರುದ್ಧ 3-0 ಅಂತರದಿಂದ ಮುನ್ನಡೆ ಸಾಧಿಸಿ ಮುಂದಿನ ಸುತ್ತು ಪ್ರವೇಶಿಸಿತು. ಐಚೆಟ್ಟೀರ ಚಂಗೇಟಿರ ವಿರುದ್ಧ 2-0 ರಲ್ಲಿ ಜಯ ಗಳಿಸಿತು.ಈ ಸಂದರ್ಭ ಹಾಕಿ ಫೆಸ್ಟ್ ನೊಂದಿಗೆ ಭಾನುವಾರ ಫುಡ್ ಫೆಸ್ಟ್ ಜನಮನ ಸೆಳೆಯಿತು...................ಇಂದಿನ ಪಂದ್ಯಗಳುಮೈದಾನ ಒಂದು9 ಗಂಟೆಗೆ ಕುಂಡ್ಯೋಳಂಡ-ತಿರುತೆರ10 ಗಂಟೆಗೆ ಚೆಕ್ಕೆರ-ಪೊಂಜಂಡ11 ಗಂಟೆಗೆ ಕಂಬೀರಂಡ-ಮಲ್ಲಜ್ಜಿರ1 ಗಂಟೆಗೆ ಅಲ್ಲಾರಂಡ-ಕೊಗೇಟಿರ2 ಗಂಟೆಗೆ ಚೇಂದಂಡ-ಕಂಗಂಡ3 ಗಂಟೆಗೆ ಪಾಲಂದಿರ-ಕೇಲೇಟಿರಮೈದಾನ 29 ಗಂಟೆಗೆ ಮೇವಡ-ಮಂಡೇಟಿರ10 ಗಂಟೆಗೆ ಚಂದುರ-ಕಾಳಿಮಾಡ11 ಗಂಟೆಗೆ ಪುದಿಯೊಕ್ಕಡ-ಬೊಟ್ಟಂಗಡ1ಗಂಟೆಗೆ ಅಮ್ಮಣಿಚಂಡ-ಚೋಕಿರ2 ಗಂಟೆಗೆ ಕಾಂಡೇರ-ಕೋಡಿಮಣಿಯಂಡ3 ಗಂಟೆಗೆ ಮುಕ್ಕಾಟಿರ (ಬೋಂದ)-ಅಳಮೇಂಗಡ