ಕುಂಡ್ಯೋಳಂಡ ಕಪ್‌ ಕೊಡವ ಕೌಟುಂಬಿಕ ಹಾಕಿ: ನಾಳಿಯಂಡ, ಬಾದುಮಂಡ ತಂಡ ನಿರಾಯಾಸ ಗೆಲವು

| Published : Apr 02 2024, 01:05 AM IST

ಕುಂಡ್ಯೋಳಂಡ ಕಪ್‌ ಕೊಡವ ಕೌಟುಂಬಿಕ ಹಾಕಿ: ನಾಳಿಯಂಡ, ಬಾದುಮಂಡ ತಂಡ ನಿರಾಯಾಸ ಗೆಲವು
Share this Article
  • FB
  • TW
  • Linkdin
  • Email

ಸಾರಾಂಶ

ಕೊಡಗಿನಲ್ಲಿ ಈಗ ಕೌಟುಂಬಿಕ ಹಾಕಿ ಹಬ್ಬದ ಸಂಭ್ರಮ. ಚೆರಿಯ ಪರಂಬುವಿನ ಜನರಲ್ ಕೆ.ಎಸ್ ತಿಮ್ಮಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕುಟುಂಬಗಳ ನಡುವಿನ ಕುಂಡ್ಯೋಳಂಡ ಕಪ್ ಹಾಕಿ ಪಂದ್ಯಾವಳಿಯ ಸೋಮವಾರದ ಪಂದ್ಯಗಳಲ್ಲಿ ನಾಳಿಯಂಡ, ಬಾದುಮಂಡ , ಕೋಣಿಯಂಡ, ಕೋಲು ಮಾದಂಡ, ಐಚುಡ, ಪಾಲಂಗಡ ಸೇರಿದಂತೆ ವಿವಿಧ ತಂಡಗಳು ಮುನ್ನಡೆ ಸಾಧಿಸಿದವು.

ದುಗ್ಗಳ ಸದಾನಂದಕನ್ನಡಪ್ರಭ ವಾರ್ತೆ ನಾಪೋಕ್ಲುಇಲ್ಲಿನ ಚೆರಿಯ ಪರಂಬುವಿನ ಜನರಲ್ ಕೆ.ಎಸ್ ತಿಮ್ಮಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕುಟುಂಬಗಳ ನಡುವಿನ ಕುಂಡ್ಯೋಳಂಡ ಕಪ್ ಹಾಕಿ ಪಂದ್ಯಾವಳಿಯ ಸೋಮವಾರದ ಪಂದ್ಯಗಳಲ್ಲಿ ನಾಳಿಯಂಡ, ಬಾದುಮಂಡ , ಕೋಣಿಯಂಡ, ಕೋಲು ಮಾದಂಡ, ಐಚುಡ, ಪಾಲಂಗಡ ಸೇರಿದಂತೆ ವಿವಿಧ ತಂಡಗಳು ಮುನ್ನಡೆ ಸಾಧಿಸಿದವು.ಮೈದಾನ ಒಂದರಲ್ಲಿ ಪೂಲಂಡ ತಂಡದ ವಿರುದ್ಧ ನಾಳಿಯಂಡ ತಂಡ ಭರ್ಜರಿ ಗೆಲವು ಸಾಧಿಸಿತು. ನಾಳಿಯಂಡ ತಂಡ 5- 0 ಅಂತರದಿಂದ ಗೆಲವು ಸಾಧಿಸಿದರೆ ಬಾದುಮಂಡ ತಂಡವು ಚನ್ನಪಂಡ ತಂಡದ ವಿರುದ್ಧ 4-0 ಅಂತರದ ಜಯ ಗಳಿಸಿತು.ಕೋಣಿಯಂಡ ತಂಡವು ಮಂಡಿರ ತಂಡದ ವಿರುದ್ಧ 1-0 ಅಂತರದ ಗೆಲವು ಸಾಧಿಸಿದರೆ ಕೋಲು ಮಾಡಂಡ ತಂಡವು ಅಕ್ಕಪಂಡ ತಂಡದ ವಿರುದ್ಧ 1-0 ಅಂತರದ ಗೆಲವು ಸಾಧಿಸಿತು. ಕೋಲು ಮಾದಂಡ ತಂಡದ ಆಟಗಾರ ನಾಚಪ್ಪ ಒಂದು ಗೋಲು ಗಳಿಸಿದರು.ಮೈದಾನ ಎರಡರಲ್ಲಿ ನಡೆದ ಮೊದಲ ಪಂದ್ಯದಲ್ಲಿ ಐಚುಡ ತಂಡ ಮುಕ್ಕಾಟಿರ (ಬೇತ್ರಿ) ತಂಡದ ವಿರುದ್ಧ 4-1 ಅಂತರದ ಗೆಲವು ಸಾಧಿಸಿತು. ಗಂಡಂಗಡ ಮತ್ತು ಮಚ್ಚುರ ತಂಡಗಳ ನಡುವಿನ ಪಂದ್ಯದಲ್ಲಿ ಎರಡು ತಂಡಗಳು ಸಮಬಲ ಸಾಧಿಸಿದವು.ಪೆನಾಲ್ಟಿ ಶೂಟ್ ಔಟ್ ನಲ್ಲಿ ಮಚ್ಚುರ ತಂಡ 3 ಗೋಲು ಗಳಿಸಿದರೆ ಗಂಡಂಗಡ ತಂಡ 4 ಗೋಲು ಗಳಿಸಿ ಮುಂದಿನ ಸುತ್ತಿಗೆ ಪ್ರವೇಶಿಸಿತು ಪಾಲೇಕಡ ತಂಡ ಮೇದುರ ತಂಡದ ವಿರುದ್ಧ1-0 ಅಂತರದ ಜಯ ಸಾಧಿಸಿದರೆ ಮೂಕಚಂಡ ತೆನ್ನಿರ ವಿರುದ್ಧ 3- 0 ಅಂತರದಿಂದ ಜಯ ಗಳಿಸಿತು.ಮೈದಾನ ಮೂರರಲ್ಲಿ ತಾಪಂಡ ಮತ್ತು ಚೋಕಿರ ತಂಡಗಳು ಸಮಬಲ ಸಾಧಿಸಿದವು. ಪೆನಾಲ್ಟಿ ಸ್ಟ್ರೋಕ್ ನಲ್ಲಿ ಚೋಕಿರ 3 ಗೋಲು ಗಳಿಸಿದರೆ, ತಾಪಂಡ ಎರಡು ಗೋಲು ಗಳಿಸಿತು. ಚೋಕಿರ ಮುಂದಿನ ಸುತ್ತು ಪ್ರವೇಶಿಸಿತು. ಮಾದೆಯಂಡ ವಿರುದ್ಧ ಕಾಳಿ ಮಾಡಬೊಟ್ಟಂಗಡತಂಡವು ಎರಡು ಗೋಲುಗಳಿಂದ ಗೆಲವು ಸಾಧಿಸಿತು. 3- 0 ಅಂತರದಿಂದ ಅಣ್ಣೀರ ತಂಡವನ್ನು ಮಣಿಸಿ ಮುಂದಿನ ಸುತ್ತು ಪ್ರವೇಶಿಸಿತು. ಮಾಣಿರ ಕುಯಿಮಂಡ ವಿರುದ್ಧ ಒಂದು ಗೋಲು ಗಳಿಸಿ ಮುಂದಿನ ಸುತ್ತು ಪ್ರವೇಶಿಸಿತು.---------------ಇಂದಿನ ಪಂದ್ಯಗಳುಮೈದಾನ ಒಂದು9 ಗಂಟೆಗೆಬಲ್ಲಟಿಕಾಳಂಡ-ನೆರ್ಪಂಡ10 ಗಂಟೆಗೆ ಅಯ್ಯನೆರವಂಡ-ಕೀತಿಯಂಡ11 ಗಂಟೆಗೆ ಪೋರಂಗಡ-ಅಡ್ಡೇಂಗಡ12 ಗಂಟೆಗೆ ಪೆರಿಯಂಡ- ಮಲ್ಲಚ್ಚಿರ1 ಗಂಟೆಗೆ ಕಾಚೆಪನೇರ -ಐಯಲಪಂಡ2 ಗಂಟೆಗೆ ಕೈಪಟ್ಟಿರ -ಚೆಟ್ಟಿಯಾರಂಡ3 ಗಂಟೆಗೆ ಮಂಡೇಡ-ಪೊನ್ನಚೆಟ್ಟಿರ----------ಮೈದಾನ ಎರಡು9 ಗಂಟೆಗೆ ಅಪ್ಪಾರಂಡ- ಮುಂಡಚಾಡಿರ10 ಗಂಟೆಗೆ ಐಚೆಟ್ಟಿರ-ಮುಂಡ್ಯೋಳಂಡ11 ಗಂಟೆಗೆ ಅಪ್ಪುಮಣಿಯಂಡ- ಅಟ್ರಂಗಡ1 ಗಂಟೆಗೆ ಪಾಲಂದಿರ- ಚಪ್ಪಂಡ2 ಗಂಟೆಗೆ ಕಡೇಮಾಡ-ಪೊನ್ನಿಮಾಡ3 ಗಂಟೆಗೆ ಮೈಂದಪಂಡ -ಐಯಮಾಡ---------------ಮೈದಾನ 39 ಗಂಟೆಗೆ ಮಚ್ಚಂಡ-ಚೋಲಂಡ10 ಗಂಟೆಗೆ ನಂದೇಟಿರ-ತೀತರಮಾಡ11 ಬಿದ್ದಾಟಂಡ-ಅಲ್ಲುಮಾಡ1 ಗಂಟೆಗೆ ಚಿಕ್ಕಂಡ -ಬಟ್ಟಿಯಂಡ2 ಗಂಟೆಗೆ ಕಾಂಗೀರ -ಕುಂಡ್ರಂಡ3 ಗಂಟೆಗೆ ನಾಪನೆರವಂಡ-ತಾತಂಡ