ಕುಂಜಿಲ ಪೈನೆರಿ ಯುಎಇ ಸಮಿತಿಯಿಂದ ದುಬೈಯಲ್ಲಿ ಮೀಲಾದುನ್ನಭಿ

| Published : Sep 10 2025, 01:04 AM IST

ಕುಂಜಿಲ ಪೈನೆರಿ ಯುಎಇ ಸಮಿತಿಯಿಂದ ದುಬೈಯಲ್ಲಿ ಮೀಲಾದುನ್ನಭಿ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರವಾದಿ ಫೈಗಂಬರ್‌ ಅವರ 1500ನೇ ಜನ್ಮ ದಿನಾಚರಣೆ ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಅಬುಧಾಬಿ ಸಂಯುಕ್ತ ಅರಬ್ ಸಂಸ್ಥಾನದಲ್ಲಿರುವ ಕೊಡಗಿನ ಕುಂಜಿಲ ಜಮಾತ್ ಅನಿವಾಸಿ ಗ್ರಾಮಸ್ಥರ ಸಂಘಟನೆಯಾದ ಕುಂಜಿಲ ಪೈನೆರಿ ಯುಎಇ ಸಮಿತಿ ವತಿಯಿಂದ ಪ್ರವಾದಿ ಪೈಗಂಬರ್ ಅವರ 1500ನೇ ಜನ್ಮದಿನಾಚರಣೆ ಆಚರಿಸಲಾಯಿತು.

ದೇರಾ ದುಬೈಯಲ್ಲಿರುವ ಟ್ರಿಪಲ್ ಹೈಟ್ ಹೋಟೆಲ್ ಸಭಾಂಗಣದಲ್ಲಿ ಸಮಿತಿಯ ಅಧ್ಯಕ್ಷರಾದ ಇಬ್ರಾಹಿಂ ಉಸ್ತಾದ್ ಕುಂಜಿಲ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಸಯ್ಯದ್ ಮೊಹಮ್ಮದ್ ಹೈದ್ರೋಸಿ ಹುದವಿ ತಂಗಳ್ ಅವರ ದುಆ ದೊಂದಿಗೆ ಮೀಲಾದ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಹಮೀದ್ ಸಖಾಫಿ ಉಸ್ತಾದ್ ಪುದರೇಕಾರಂಡ, ಮುನೀರ್ ಮಿಸ್ಬಾಯ್ ಉಸ್ತಾದ್ ಬಾರಿಕೇರ, ಮತ್ತು ಷರೀಫ್ ಲತೀಫ್ ಉಸ್ತಾದ್ ಅವರು ಮೌಲೂದ್ ಮಜಿಲಿಸ್ಸಿ ನೇತೃತ್ವ ವಹಿಸಿದ್ದು ಕೆಸಿಎಫ್ ನೇತಾರರಾದ ಜಲೀಲ್ ನಿಜಾಮಿ ಉಸ್ತಾದರು ಮುಖ್ಯ ಪ್ರಭಾಷಣ ಮಾಡಿದರು, ಫಾರೂಕ್ ಪುದರೇಕಾರಂಡ ಹಾಗೂ ಹಾಫಿಜ್ ಹಾಶಿರ್ ಅಲ್ ಅಝರಿ ಉಸ್ತಾದರ ನೇತೃತ್ವದಲ್ಲಿ ಬುರ್ದಾ ಮಜಲಿಸ್ ನಡೆಯಿತು.ಸಮಿತಿ ಸದಸ್ಯರಾದ ನಾಸಿರ್ ಪಯಡತಂಡ ಸ್ವಾಗತಿಸಿ ಯುಎಇ ಪೈನೆರಿ ಸಮಿತಿ ಕಾರ್ಯದರ್ಶಿಗಳಾದ ನಿಜ್ಹಾರ್ ಕುಂಡಂಡ ವಂದಿಸಿದರು.