ಕನ್ನಡಪ್ರಭ ವಾರ್ತೆ ಮುಂಡಗೋಡ

ಸದಾ ಒಂದಿಲ್ಲೊಂದು ವಿನೂತನ ಶೈಕ್ಷಣಿಕ ಚಟುವಟಿಕೆಗಳ ಮೂಲಕ ಸಾರ್ವಜನಿಕರ ಗಮನ ಸೆಳೆಯುತ್ತಿರುವ ತಾಲೂಕಿನ ಕುರ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಾಲಾ ವಾರ್ಷಿಕೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಅತ್ಯಂತ ಸಂಭ್ರಮದಿಂದ ನೆರವೇರಿತು.ಗ್ರಾಪಂ ಅಧ್ಯಕ್ಷ ಮುಕುಂದ ನಾಯ್ಕ ಉದ್ಘಾಟಿಸಿದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ನಾಗರಾಜ್ ಕೊರ್ಸಿ ಅಧ್ಯಕ್ಷತೆ ವಹಿಸಿದರು. ಪಾರಿ ಬಸವರಾಜ್ ರಾಜ್ ಬೆಳಗಾವಿ ಸಿಟಿಇ ಪ್ರವಾಚಕ ಪಾರಿ ಬಸವರಾಜ್, ಮುಂಡಗೋಡ ತಾಪಂ ಕಾರ್ಯನಿರ್ವಹಣಾಧಿಕಾರಿ ಟಿ.ವೈ. ದಾಸನಕೊಪ್ಪ ಕ್ಷೇತ್ರ ಶಿಕ್ಷಣಾಧಿಕಾರಿ ಜಿ. ಸುಮಾ, ಶಿರಸಿ ಜಿಲ್ಲಾ ನ್ಯಾಯಾಲಯದ ಪಬ್ಲಿಕ್ ಪ್ರಾಸಿಕ್ಯೂಟರ್ ರಾಜೇಶ್ ಮಳಗಿಕರ್ ನಿವೃತ್ತ ಪ್ರಾಂಶುಪಾಲ ನರೇಂದ್ರ ನಾಯ್ಕ್, ಪ್ರೊಪೇಸರ ಕಲ್ಮೇಶ ಬಾಗೇವಾಡಿ, ನಾಗರಾಜ್ ಕಾಮ್ನಳ್ಳಿ ಮುಂತಾದವರಿದ್ದರು. ಈ ಸಂದರ್ಭ ಶಾಲಾ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಗಣ್ಯರಿಗೆ ಸನ್ಮಾನ ಕಾರ್ಯಕ್ರಮ ನೆರವೇರಿತು. ಕುರ್ಲಿ ಶಾಲೆಯಲ್ಲಿ ಸುಮಾರು ೧೫ ವರ್ಷಗಳ ಸೇವೆ ಸಲ್ಲಿಸಿ ನಿವೃತ್ತರಾದ ಹಿರಿಯ ಶಿಕ್ಷಕ ರಾಮದಾಸ್ ಕಾಮತ್ ಅವರಿಗೆ ಸನ್ಮಾನಿಸಿ ಬೀಳ್ಕೊಡಲಾಯಿತು.ವಿಶೇಷವಾಗಿ ಯಕ್ಷಗಾನ ಪ್ರದರ್ಶನ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಪೂರ್ವ ವಿದ್ಯಾರ್ಥಿಯಾದ ಪ್ರದೀಪ್ ಮೇಲಿನಕೇರಿ, ಅರುಣ್ ಹೆಗಡೆ ಶಾನವಳ್ಳಿ, ಸಂತೋಷ ಹೆಗಡೆ ಹಾಗೂ ನರೇಶ್ ಶೆಟ್ಟಿ ಪ್ರವೀಣ್ ತಟ್ಟಿಸರ, ರಮಾನಂದ ಹೆಗಡೆ ಸೇರಿದಂತೆ ಹಲವರು ಶಾಲೆಗೆ ನೀಡಿದ ಕೊಡುಗೆಗಾಗಿ ಗೌರವಿಸಲ್ಪಟ್ಟರು. ಕಾರ್ಯಕ್ರಮದ ಪ್ರಾರ್ಥನೆಗೆ ಕುರ್ಲಿ ಶಾಲೆಯ ೪ನೇ ತರಗತಿ ವಿದ್ಯಾರ್ಥಿ ಅಥರ್ವ ಬಿ. ಆರ್.ನಿಂದ ತಬಲಾ ಸಾಥ್ ನೀಡಿದ್ದು ಎಲ್ಲರ ಗಮನ ಸೆಳೆಯಿತು. ರಾಮದಾಸ್ ಕಾಮತ್ ಸ್ವಾಗತಿಸಿದರು, ಶಿಕ್ಷಕಿ ಮಮತಾ ರಾಘವೇಂದ್ರ ಪ್ರಾಸ್ತವಿಕ ನುಡಿಗಳನ್ನಾಡಿದರು. ವಾಣಿ ಭಟ್ ನಿರೂಪಿಸಿದರು. ಸಂಧ್ಯಾ ಭಂಡಾರಿ ವಂದಿಸಿದರು.