ಕುರುಗೋಡು: ಉತ್ಸವದ ಮೂಲಕ ಮೊದಲ ಬಾರಿ ಕುರುಗೋಡು ಇತಿಹಾಸ ತಿಳಿಸುವ ಜತೆಗೆ ಸ್ಥಳೀಯ ಕಲಾವಿದರನ್ನು ಪ್ರೋತ್ಸಾಹಿಸಲಾಗಿದೆ. ಮುಂದಿನ ದಿನಗಳಲ್ಲಿ ಹಂಪಿ, ಕಿತ್ತೂರು, ಮೈಸೂರು ಉತ್ಸವಗಳಂತೆ ಕುರುಗೋಡು ಉತ್ಸವ ಮಾದರಿಯಾಗಲಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಪಟ್ಟಣದ ಯಲ್ಲಾಪುರ ಕ್ರಾಸ್ ಬಳಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಸೋಮವಾರ ಆಯೋಜಿಸಿದ್ದ ಉತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.ಪ್ರಾಚೀನ ಇತಿಹಾಸ ಹೊಂದಿರುವ ಕುರುಗೋಡು ಮುಂದಿನ ದಿನಗಳಲ್ಲಿ ಉತ್ಸವದ ಮೂಲಕ ಕಲೆ, ಸಾಹಿತ್ಯ, ಸಂಸ್ಕೃತಿಗೆ ವೇದಿಕೆಯಾಗಲಿದೆ ಎಂದರು.ಬಳ್ಳಾರಿ ನಗರ ಶಾಸಕ ಭರತ್ ರೆಡ್ಡಿ ಮಾತನಾಡಿ, ರಾಜಕೀಯವಾಗಿ ಜನ್ಮಕೊಟ್ಟ ಕುರುಗೋಡನ್ನು ನಮ್ಮ ಕುಟುಂಬ ಮರೆಯುವುದಿಲ್ಲ. ಕಾಂಗ್ರೆಸ್ ಸರ್ಕಾರ ಕಂಪ್ಲಿ ಕ್ಷೇತ್ರಕ್ಕೆ ಸಾಕಷ್ಟು ಅನುದಾನ ನೀಡಿ ಅಭಿವೃದ್ಧಿಗಾಗಿ ಶ್ರಮಿಸಿದೆ ಎಂದರು.
ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್ ಮಾತನಾಡಿ, ಸರ್ಕಾರ ಶ್ರೀಘ್ರ ಸಾರ್ವಜನಿಕರ ಅನುಕೂಲಕ್ಕೆ೧೦೦ ಕೋಟಿ ವೆಚ್ಚದಲ್ಲಿ ಕಂಪ್ಲಿ ಸೇತುವೆ ನಿರ್ಮಾಣ ಮಾಡಲಿದೆ ಎಂದು ಮಾಹಿತಿ ನೀಡಿದರು.ಶಾಸಕ ಜೆ.ಎನ್. ಗಣೇಶ್ ಮಾತನಾಡಿ, ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಮಾಡುವ ಜತೆಗೆ ಕುರುಗೋಡು ಪಟ್ಟಣದ ಇತಿಹಾಸ ಪರಿಚಯಿಸುವ ಕೆಲಸ ಉತ್ಸವ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಮಾದರಿ ಉತ್ಸವ ಮಾಡುವ ಬಯಕೆ ಇದೆ ಎಂದರು.
ಕುರುಗೋಡು ಉತ್ಸವದ ಉದ್ಘಾಟನೆ ವೇಳೆ ವೇದಿಕೆ ಹಿಂದಿನ ಬೆಟ್ಟದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಕೆಲಹೊತ್ತು ಆತಂಕ ಮೂಡಿಸಿತ್ತು. ಪಟಾಕಿ ಸಿಡಿಸಲಾಯಿತು. ಈ ವೇಳೆ ಪಟಾಕಿಯಿಂದ ಹಿಡಿದ ಕಿಡಿಯಿಂದ ಬೆಟ್ಟದಲ್ಲಿ ಬೆಂಕಿ ಹೊತ್ತಿಕೊಂಡಿತು ಇಲ್ಲಿನ ಅಗ್ನಿಶಾಮಕ ಸಿಬ್ಬಂದಿ ಸಕಾಲಕ್ಕೆ ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ
ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್, ಬಾಬಾ ಸಾಹೇಬ್ ಪಾಟೀಲ್, ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ್, ಸಹಾಯಕ ಆಯುಕ್ತ ಎಚ್.ಡಿ. ರಾಜೇಶ್, ಕುರುಗೋಡು ತಹಸೀಲ್ದಾರ್ ನರಸಪ್ಪ, ಗ್ರೇಡ್-೨ ತಹಸೀಲ್ದಾರ್ ಮಲ್ಲೇಶಪ್ಪ ,ಪುರಸಭೆ ಅಧ್ಯಕ್ಷ ಶೇಖಣ್ಣ, ಇದ್ದರು.
ಕುರುಗೋಡು ಉತ್ಸವದಲ್ಲಿ ಕವಿಗೋಷ್ಠಿಕುರುಗೋಡು: ಪಟ್ಟಣದ ಯಲ್ಲಾಪುರ ಕ್ರಾಸ್ ಹತ್ತಿರ ಉತ್ಸವದ ಕವಿಗೋಷ್ಠಿ ಹಮ್ಮಿಕೊಳ್ಳಲಾಗಿತ್ತು. ಕವಿಗೋಷ್ಠಿಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಸಹಾಯಕ ಪ್ರಾಧ್ಯಾಪಕರು ಹಾಗೂ ಲೇಖಕರಾದ ಡಾ. ತಿಪ್ಪೇರುದ್ರ ಸಂಡೂರ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಅಧ್ಯಕ್ಷತೆಯನ್ನು ಕವಿಗಳು ಕಥೆಗಾರರು, ವೀರೇಂದ್ರ ರಾವಿಹಾಳ್ ಬಳ್ಳಾರಿ ವಹಿಸಿದ್ದರು. ಕೇಂದ್ರ ಸಾಹಿತ್ಯ ಅಕಾಡೆಮಿ ಬಾಲ ಪುರಸ್ಕಾರ ಪುರಸ್ಕೃತರಾದ ಮತ್ತು ಮಕ್ಕಳ ಸಾಹಿತಿ ಡಾ. ಶಿವಲಿಂಗಪ್ಪ ಹಂದಿಹಾಳ್ ಬಳ್ಳಾರಿ. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಗುಂಡಪ್ಪನವರ ನಾಗರಾಜ, ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಗರಾಜ ಮಸೂತಿ ಉಪಸ್ಥಿತರಿದ್ದರು.ಕವಿಗಳಾದ ವೀರೇಶ್ ಕೆ.ಬಿ. ಎಚ್. ವೀರಾಪುರ, ಅರುಣ್ ಕುಮಾರ್ ಬಿ. ಕಲ್ಕಂಬ, ಕೆ.ವಿ. ವೀರಭದ್ರಗೌಡ ಕುರುಗೋಡು, ಗವಿಸಿದ್ದಪ್ಪ ಅಲ್ಲಾನಗರ, ಎ.ಎಂ. ಮಂಜುನಾಥ ಎ. ಹೊನ್ನೂರ ಸ್ವಾಮಿ, ಚಂದ್ರಶೇಖರ್, ಮುಮ್ಮಡಿ ರಾಮಪ್ಪ, ಸಿರಿಗೇರಿ ಬಕಾಟೆ ಪಂಪಾಪತಿ, ಗಿರಿಯಪ್ಪ ಕೆ., ಮಂಜಣ್ಣ ಡಿ.ಓ., ಭಾಗ್ಯಶ್ರೀ ಹುರಕಡ್ಲಿ, ಬಿ. ಶರಣಪ್ಪ ಚಾರಿ, ಚೈತ್ರ ಹಂದಿಹಾಳ, ಬಾಬು ಸಾಬ್ ಮೇಲ್ಗಡೆ, ಸುರೇಶ, ಪುರುಷೋತ್ತಮ ಈ., ಗಿರಿಜಾ ಎಂ.ಪಿ., ಕೆ ನಾಗವೇಣಿ, ಮಹಮದ್ ಖಾಸೀಂ ಅತ್ಯುತ್ತಮ ಕವಿತೆಗಳನ್ನು ವಾಚಿಸಿದರು.