ಸಾರಾಂಶ
ಮೂಡಲಗಿ ಪಟ್ಟಣದ ಪ್ರತಿಷ್ಠಿತ ಸಹಕಾರಿ ಸಂಘವಾದ ಕರುಹಿನಶೆಟ್ಟಿ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸೈಟಿಯ ಮುಂದಿನ 5 ವರ್ಷದ ಅವಧಿಗೆ ಶನಿವಾರ ಜರುಗಿದ ಚುನಾವಣೆಯಲ್ಲಿ ಸೊಸೈಟಿಯ ಆಡಳಿತರೂಢದ ಅಭ್ಯರ್ಥಿಗಳು ಆಯ್ಕೆಗೊಂಡರು.
ಕನ್ನಡಪ್ರಭ ವಾರ್ತೆ ಮೂಡಲಗಿ
ಪಟ್ಟಣದ ಪ್ರತಿಷ್ಠಿತ ಸಹಕಾರಿ ಸಂಘವಾದ ಕರುಹಿನಶೆಟ್ಟಿ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸೈಟಿಯ ಮುಂದಿನ 5 ವರ್ಷದ ಅವಧಿಗೆ ಶನಿವಾರ ಜರುಗಿದ ಚುನಾವಣೆಯಲ್ಲಿ ಸೊಸೈಟಿಯ ಆಡಳಿತರೂಢದ ಅಭ್ಯರ್ಥಿಗಳು ಆಯ್ಕೆಗೊಂಡರು.ಸೊಸೈಟಿ 13 ನಿರ್ದೇಶಕರ ಆಯ್ಕೆಯಲ್ಲಿ 6 ನಿರ್ದೇಶಕರು ಅವಿರೋಧ ಆಯ್ಕೆಯಾಗಿದ್ದು, 7 ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆದಿತ್ತು. 1468 ಮತದಾರರಲ್ಲಿ 1275 ಮತದಾರರು ತಮ್ಮ ಮತವನ್ನು ಚಲಾಯಿಸಿದರು. ಚುನಾವಣೆಯಲ್ಲಿ ಸಾಮಾನ್ಯ ಮತಕ್ಷೇತ್ರದಿಂದ ಬಸಪ್ಪ ಚೆನ್ನಪ್ಪ ಮುಗಳಖೋಡ (1170), ಗೋಡಚೆಪ್ಪ ಕಲ್ಲಪ್ಪ ಮುರಗೋಡ(1173), ಸುಭಾಸ ಗಂಗಪ್ಪ ಬೆಳಕೂಡ (1175), ಲಕ್ಕಪ್ಪ ಲಕ್ಷ್ಮಣ ಪೂಜೇರಿ (1163), ಬಸವರಾಜ ಬ.ಬೆಳಕೂಡ(1176), ವಿಶಾಲ ಸದಾಶಿವ ಶೀಲವಂತ(1170), ಮಾಲಾ ಮೋಹನ ಬೆಳಕೂಡ(1162) ಆಯ್ಕೆಗೊಂಡರು. ಅವಿರೋಧ ಆಯ್ಕೆ:
ಹಿಂದುಳಿದ ಅ ವರ್ಗ ಕ್ಷೇತ್ರದಿಂದ ಇಸ್ಮಾಯಿಲ್ ಎಂ.ಕಳ್ಳಿಮನಿ, ಹಿಂದುಳಿದ ಬ ವರ್ಗ ಕ್ಷೇತ್ರದಿಂದ ಶಾಂತವ್ವ ಬಾ.ಬೋರಗಲ, ಮಹಿಳಾ ಕ್ಷೇತ್ರದಿಂದ ಉಮಾ ಬೆಳಕೂಡ, ರುಕ್ಮವ್ವ ಪೂಜೇರಿ, ಪ.ಜಾ ಕ್ಷೇತ್ರದಿಂದ ಶಾಲನ್ ಕೊಡತೆ, ಪ.ಪಂ ಕ್ಷೇತ್ರದಿಂದ ರಾಮಪ್ಪ ಬಳೆಗಾರ ಅವಿರೋಧವಾಗಿ ಆಯ್ಕೆಗೊಂಡಿರುವರು.