ಕುಶಾಲನಗರ: ಶ್ರೀ ಶತಚಂಡಿಕಾಯಾಗ ಸಂಪನ್ನ

| Published : May 23 2024, 01:00 AM IST

ಸಾರಾಂಶ

ಕುಶಾಲನಗರ ವಾಸವಿ ಕನ್ನಿಕಾ ಪರಮೇಶ್ವರಿ ದೇವಾಲಯದಲ್ಲಿ ಶ್ರೀ ಶತಚಂಡಿಕಾಯಾಗ ವಿಶೇಷ ಪೂಜಾ ಕಾರ್ಯಕ್ರಮ ನಡೆಯಿತು. ಪ್ರಧಾನ ಅರ್ಚಕ ವೇದಬ್ರಹ್ಮ ಗಿರೀಶ್ ಭಟ್ ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮಗಳು ಜರುಗಿದವು. ಸುಮಾರು 25ಕ್ಕೂ ಅಧಿಕ ಮಂದಿ ಋತ್ವಿಕರು ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಕನ್ನಡಪ್ರಭ ವಾರ್ತೆ ಕುಶಾಲನಗರ

ಕುಶಾಲನಗರ ವಾಸವಿ ಕನ್ನಿಕಾ ಪರಮೇಶ್ವರಿ ದೇವಾಲಯದಲ್ಲಿ ಶ್ರೀ ಶತಚಂಡಿಕಾಯಾಗ ವಿಶೇಷ ಪೂಜಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಬುಧವಾರ ಬೆಳಗ್ಗೆ ದೇವತಾ ಪ್ರಾರ್ಥನೆ, ಮಹಾಗಣಪತಿ ಪೂಜೆ, ಗೋ ಪೂಜೆ, ಧ್ವಜ ಪೂಜೆ, ಅಶ್ವಪೂಜೆ, ನಂತರ ಚಂಡಿಕಾ ಪಾರಾಯಣ ಪೂಜಾ ಕಾರ್ಯಕ್ರಮಗಳು ನಡೆದವು.

ಪ್ರಧಾನ ಅರ್ಚಕ ವೇದಬ್ರಹ್ಮ ಗಿರೀಶ್ ಭಟ್ ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮಗಳು ಜರುಗಿದವು. ಸುಮಾರು 25ಕ್ಕೂ ಅಧಿಕ ಮಂದಿ ಋತ್ವಿಕರು ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.

ಸಂಜೆ ವಾಸವಿ ಬಾಲಕಿಯರ ಸಂಘದ ವತಿಯಿಂದ ದೀಪ ಮೆರವಣಿಗೆ ನಂತರ ಶ್ರೀ ಕನ್ನಿಕಾ ಪರಮೇಶ್ವರಿ ದೇವಾಲಯದಿಂದ ಶ್ರೀ ಗಣಪತಿ ದೇವಾಲಯದ ತನಕ ಮೆರವಣಿಗೆ ತೆರಳಿ ಯಾಗ ಶಾಲೆಗೆ ಪ್ರವೇಶ ಮಾಡಲಾಯಿತು.

ಆರ್ಯವೈಶ್ಯ ಮಂಡಳಿ ಅಧ್ಯಕ್ಷ ಬಿ.ಎಲ್. ಉದಯಕುಮಾರ್, ಮಹಿಳಾ ಮಂಡಳಿ ಅಧ್ಯಕ್ಷ ಲಕ್ಷ್ಮೀ ಶ್ರೀನಿವಾಸ್ ,ವಾಸವಿ ಯುವಜನ ಸಂಘದ ಅಧ್ಯಕ್ಷ ಪ್ರವೀಣ್, ಯುವತಿಯರ ಸಂಘದ ಅಧ್ಯಕ್ಷ ಕವಿತಾ ಪ್ರವೀಣ್ ಮತ್ತಿತರರು ಇದ್ದರು.

ಮಹಾದೇವ ಈಶ್ವರ ದೇವಾಲಯ 8ನೇ ವಾರ್ಷಿಕೋತ್ಸವ:

ಕೆದಕಲ್ ನೇಗದಾಳು ಗ್ರಾಮದ ಸಾವಿರಾರು ವರ್ಷಗಳ ಇತಿಹಾಸವಿರುವ ಮಹಾದೇವ ಈಶ್ವರ ದೇವಾಲಯದ 8ನೇ ವಾರ್ಷಿಕೋತ್ಸವವು ನೂರಾರು ಭಕ್ತರ ಸಮ್ಮುಖದಲ್ಲಿ ಮಂಗಳವಾರ ಶ್ರದ್ಧಾಭಕ್ತಿಯಿಂದ ನೇರವೇರಿತು.ಬೆಳಗ್ಗೆ ದೇವಾಲಯದ ಪ್ರಧಾನ ಅರ್ಚಕ ಅವಿನಾಶ್ ಆರಾಧ್ಯ ನೇತೃತ್ವದಲ್ಕಿ ಗರ್ಭಗುಡಿಯ ಶುದ್ದಪೂಜೆಯ ನಡೆದು ನಂತರ ಕೆರೆಯಿಂದ ಗಂಗಾಜಲ ತಂದು ಕುಂಭಪೂಜೆ ಮಾಡಲಾಯಿತು.

ನಂತರ ಗಣಪತಿ ಹೋಮ, ರುದ್ರಾಭಿಷೇಕ, ಹೂವಿನ ಪೂಜೆ, ನೈವೇದ್ಯ ಪೂಜೆಗಳು ನಡೆದವು.ಮದ್ಯಾಹ್ನ 12 ಗಂಟೆಗೆ ಮಹಾಪೂಜೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನೆರವೇರಿತು. ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ಕೆದಕಲ್, ಸುಂಟಿಕೊಪ್ಪ, ಬಾಳೆಕಾಡು, ಗದ್ದೆಹಳ್ಳ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಭಕ್ತರು ಪೂಜಾ ಕೈಂಕರ್ಯಗಳಲ್ಲಿ ಭಾಗವಹಿಸಿದ್ದರು.