ಕುಶಾಲನಗರ: ಕುಶಾಲನಗರದ ನಿಸರ್ಗಧಾಮ‌ ಟೂರಿಸ್ಟ್ ಸೆಂಟರ್ ಆಶ್ರಯದಲ್ಲಿ ವಿಶ್ವ ಮಹಿಳಾ ದಿನ‌ ಮತ್ತು ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ನಡೆಯಿತು.

ಎನ್ ಟಿ ಸಿ ಆವರಣದಲ್ಲಿ ನಡೆದ ಕಾರ್ಯಕ್ರಮವನ್ನು ಡಯಟ್ ಸಂಸ್ಥೆ ಹಿರಿಯ ಉಪನ್ಯಾಸಕಿ ಬಿ.ಎನ್.ಪುಷ್ಪಾ ಉದ್ಘಾಟಿಸಿದರು.

ಮಹಿಳಾ ಸಬಲೀಕರಣ, ಮಹಿಳಾ ಸಮಾನತೆ ವಿಚಾರದ ಬಗ್ಗೆ ಹಾಗೂ‌ ಪರಿಸರ ಸಂರಕ್ಷಣೆ ಬಗ್ಗೆ ಮಾತನಾಡಿದ ಅವರು, ಕುಟುಂಬ ನಿರ್ವಹಣೆ ಹಾಗೂ ವೃತ್ತಿ ಜೀವನದಲ್ಲಿ ಮಹಿಳೆಯರ ಕರ್ತವ್ಯ, ಜವಬ್ದಾರಿ ಹೆಚ್ಚಿನದ್ದಾಗಿದೆ. ಮನೆಯಲ್ಲಿ, ಸಮಾಜದಲ್ಲಿ, ವೃತ್ತಿ ಜೀವನದಲ್ಲಿ ಗೌರವ ಗಳಿಸುವುದು, ಪ್ರತಿಯೊಬ್ಬರ ನಡವಳಿಕೆ ಹಾಗೂ ಸಾಮರ್ಥ್ಯದಲ್ಲಿ ಅಡಗಿದೆ ಎಂದರು.

ಮೀನುಗಾರಿಕೆ ಇಲಾಖೆ ಸಹಾಯಕ‌ ನಿರ್ದೇಶಕಿ ಮಿಲನಾ ಭರತ್ ಮುಖ್ಯ ಭಾಷಣಕಾರರಾಗಿ ಪಾಲ್ಗೊಂಡು, ಮಹಿಳಾ ದಿನ ಎಂದರೆ ಅಡುಗೆ ಮನೆಯನ್ನು ಬಿಟ್ಟು ಸಮಾಜದಲ್ಲಿ ನಾವು ಕಂಡುಕೊಳ್ಳುವ ಅಸ್ತಿತ್ವ ಎನ್ನುವುದನ್ನು ಮಹಿಳೆಯರು ಅರಿತುಕೊಳ್ಳಬೇಕಿದೆ ಎಂದರು.

ಕುಶಾಲನಗರ ಟೌನ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಪೊಲೀಸ್ ಠಾಣಾ ಇನ್ಸ್ ಪೆಕ್ಟರ್ ಪ್ರದೀಪ್ ಕುಮಾರ್ ಅವರು, ಮಹಿಳಾ ಸುರಕ್ಷತಾ ಕಾನೂನುಗಳ ಬಗ್ಗೆ ಮಾತನಾಡಿದರು. ಎನ್.ಟಿ.ಸಿ.ವ್ಯವಸ್ಥಾಪಕ‌ ನಿರ್ದೇಶಕಿ ಆಶಾ ಅಧ್ಯಕ್ಷತೆ ವಹಿಸಿದ್ದರು.ಕುಶಾಲನಗರ ಟೌನ್ ಪೊಲೀಸ್ ಠಾಣಾಧಿಕಾರಿಗಳಾದ ಎಚ್.ಟಿ.ಗೀತಾ, ಶಿವಣ್ಣ, ಸಂಚಾರ ಠಾಣಾಧಿಕಾರಿ ಗಣೇಶ್, ಎನ್.ಟಿ.ಸಿ ಮಾಲೀಕ ಅಬ್ದುಲ್ ಸಲಾಂ, ಸಿಬ್ಬಂದಿ ಇದ್ದರು.