ಕೋಲಾರ ಜಿಲ್ಲೆಯ ಕೆಜಿಎಫ್ ತಾಲ್ಲೂಕಿನ ಚಿನ್ನನಾಗಹಳ್ಳಿಯ ನಿವಾಸಿಯಾಗಿರುವ ಕುಸುಮಾ ಸದ್ಯ ಬೆಂಗಳೂರಿನ ವೈಟ್ ಫೀಲ್ಡ್ ಬಳಿ ಇರುವ ಹಾಸ್ಟರ್ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಸ್ಟ್ರೆಚರ್‌ನಲ್ಲಿಯೇ ಮಲಗಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿನಿಗೆ ೩೭೪ ಅಂಕ
ಕನ್ನಡಪ್ರಭ ವಾರ್ತೆ ಕೋಲಾರಆ್ಯಂಬುಲೆನ್ಸ್ ಮೂಲಕ ಬಂದು ಸ್ಟ್ರೆಚರ್‌ನಲ್ಲಿಯೇ ಮಲಗಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿನಿ ಕುಸುಮಾ ಫಸ್ಟ್ ಕ್ಲಾಸ್‌ನಲ್ಲಿ ಪಾಸ್ ಆಗಿದ್ದಾಳೆ.ಅಪಘಾತವಾಗಿ ಗಾಯಗೊಂಡ ವಿದ್ಯಾರ್ಥಿನಿ ಛಲ ಬಿಡದೆ ಸ್ಟ್ರೆಚರ್‌ನಲ್ಲಿ ಬಂದು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದಳು. ಶಿಕ್ಷಣ ಇಲಾಖೆ ಹಾಗೂ ತಾಯಿಯ ನೆರವಿನೊಂದಿಗೆ ಪರೀಕ್ಷಾ ಕೇಂದ್ರಕ್ಕೆ ಆ್ಯಂಬುಲೆನ್ಸ್‌ನಲ್ಲಿ ಬಂದು ಪರೀಕ್ಷೆ ಬರೆದಿದ್ದ ವಿದ್ಯಾರ್ಥಿನಿ ಕುಸುಮಾ ಫಸ್ಟ್ ಕ್ಲಾಸ್‌ನಲ್ಲಿ ಪಾಸ್ ಆಗಿದ್ದಾಳೆ. ಕೋಲಾರ ಜಿಲ್ಲೆಯ ಕೆಜಿಎಫ್ ತಾಲ್ಲೂಕಿನ ಚಿನ್ನನಾಗಹಳ್ಳಿಯ ನಿವಾಸಿಯಾಗಿರುವ ಕುಸುಮಾ ಸದ್ಯ ಬೆಂಗಳೂರಿನ ವೈಟ್ ಫೀಲ್ಡ್ ಬಳಿ ಇರುವ ಹಾಸ್ಟರ್ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಕಳೆದ ಒಂದು ವಾರದಿಂದ ಆಸ್ಪತ್ರೆಯಲ್ಲಿ ಸರ್ಜರಿ ಮಾಡಿಸಿಕೊಳ್ಳುತ್ತಿರುವ ಕುಸುಮಾ ೩೭೪ ಅಂಕ ಪಡೆದು ಮಾದರಿ ವಿದ್ಯಾರ್ಥಿ ಎನಿಸಿದ್ದಾಳೆ. ಕನ್ನಡದಲ್ಲಿ ೬೨, ಇಂಗ್ಲೀಷ್‌ನಲ್ಲಿ ೭೨, ಹಿಂದಿ-೬೩, ಗಣಿತ-೬೭, ವಿಜ್ಞಾನ-೫೪, ಸಮಾಜ-೫೬ ಅಂಕ ಪಡೆದಿದ್ದಾಳೆ.ಇನ್ನೂ ಕುಸುಮಾಗೆ ಕೋಲಾರದ ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ ಸೇರಿ ಸಾಕಷ್ಟು ಜನರು ನೆರವಾಗಿದ್ದರು. ಅಲ್ಲದೆ ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸಹ ಮನೆಗೆ ಭೇಟಿ ನೀಡಿ ನೆರವಾಗಿ ಧೈರ್ಯ ತುಂಬಿದ್ದರು. ಸದ್ಯ ಆಸ್ಪತ್ರೆಯ ಚಿಕಿತ್ಸೆಗೆ ಸಹಕರಿಸಿರುವ ಮಾಜಿ ಸಚಿವ ಸುರೇಶ್ ಕುಮಾರ್ ಸಿಎಂ ಪರಿಹಾರ ನಿಧಿಯಿಂದ ಹಣ ಕೊಡಿಸಿದ್ದಾರೆ.