ಚಿಕ್ಕಮಗಳೂರುವಿಶ್ವಮಾನವ ಸಂದೇಶವನ್ನು ಈ ಜಗತ್ತಿಗೆ ಸಾರಿದ ಮೊದಲ ದಾರ್ಶನಿಕ ಹಾಗೂ ಮನುಜ ಮತ ಮತ್ತು ವಿಶ್ವಪಥ ಪರಿಕಲ್ಪನೆ ತಂದವರು ಕುವೆಂಪು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಗುಣಸಾಗರ ವಿಜಯಕುಮಾರ್ ಹೇಳಿದರು.
- ದೇವನೂರಿನ ಲಕ್ಷ್ಮೀಶ ಪದವಿಪೂರ್ವ ಕಾಲೇಜಿನಲ್ಲಿ ಕುವೆಂಪು ಜನ್ಮದಿನೋತ್ಸವ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುವಿಶ್ವಮಾನವ ಸಂದೇಶವನ್ನು ಈ ಜಗತ್ತಿಗೆ ಸಾರಿದ ಮೊದಲ ದಾರ್ಶನಿಕ ಹಾಗೂ ಮನುಜ ಮತ ಮತ್ತು ವಿಶ್ವಪಥ ಪರಿಕಲ್ಪನೆ ತಂದವರು ಕುವೆಂಪು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಗುಣಸಾಗರ ವಿಜಯಕುಮಾರ್ ಹೇಳಿದರು.ತಾಲೂಕಿನ ದೇವನೂರು ಗ್ರಾಮದ ಶ್ರೀ ಲಕ್ಷ್ಮೀಶ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿದ್ದ ಜಗದ ಕವಿ ಕುವೆಂಪು ಜನ್ಮದಿನೋತ್ಸವ, ನಾಡಗೀತೆ ಶತಮಾನೋತ್ಸವ ಹಾಗೂ ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಕುವೆಂಪು ಅವರು ವಿಶ್ವಮಾನವ ಸಂದೇಶವನ್ನು ಜಗತ್ತಿಗೆ ಸಾರಿ ಎಲ್ಲರನ್ನೂ ಸಮನಾಗಿ ಕಂಡವರು. 12ನೇ ಶತಮಾನದ ಬಸವಣ್ಣನವರ ಪರಿಕಲ್ಪನೆ ಕುವೆಂಪು ಅವರಲ್ಲಿ ಕಾಣಬಹುದಾಗಿತ್ತು. ಸದ್ಯದಲ್ಲೇ ದೇವನೂರಿನಲ್ಲಿ ಗಮಕ ಸಾಹಿತ್ಯ ಸಮ್ಮೇಳನ ಆಯೋಜನೆ ಮಾಡಲು ತಯಾರಿ ನಡೆಸಲಾಗುತ್ತಿದೆ ಎಂದರು.ಸಾಹಿತಿ ನಾಗಶ್ರೀ ತ್ಯಾಗರಾಜ್ ವಿಶೇಷ ಉಪನ್ಯಾಸ ನೀಡಿ, ಕುವೆಂಪು ಅವರ ಶ್ರೀ ರಾಮಾಯಣ ದರ್ಶನಂ ಕೃತಿಗೆ ಜ್ಞಾನ ಪೀಠ ಪ್ರಶಸ್ತಿ ಲಭಿಸಿದೆ. ಅವರ ಹಲವು ಕೃತಿಗಳಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಕೂಡ ಲಭಿಸಿರುವುದು ಹೆಮ್ಮೆಯ ಸಂಗತಿ. ಅವರ ಕಾವ್ಯ ಮೀಮಾಂಸೆ ಹಾಗೂ ಹಲವು ಕವನಗಳಲ್ಲಿ ವೈಚಾರಿಕ ಪ್ರಜ್ಞೆಯನ್ನು ಕಾಣಬಹುದಾಗಿದೆ ಎಂದು ತಿಳಿಸಿದರು.ಕಸಾಪ ತರೀಕೆರೆ ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಸುನಿತಾ ಕಿರಣ್ ಮಾತನಾಡಿ, ಅಮ್ಮ ಪೂಜ್ಯನೀಯ ಸ್ಥಾನವನ್ನು ಪಡೆದಿದ್ದಾರೆ. ಸನಾತನ ಧರ್ಮದಿಂದ ಹಿಡಿದು ಈವರೆಗೂ ಅಮ್ಮನಿಗೆ ಸರಿಸಮಾನವಾಗಿ ಬೇರೆ ಯಾರೂ ಕೂಡ ನಿಲ್ಲಲು ಸಾಧ್ಯವಿಲ್ಲ. ಆಕೆ ದೇವತಾ ಸ್ವರೂಪಿ ಎಂದು ತಿಳಿಸಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಹಿಂದೆ ದೇವನೂರಿನ ಲಕ್ಷ್ಮೀಶ ಕವಿಯ ಆಸ್ಥಾನದಲ್ಲಿ ವಿನೂತನವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಅದೇ ರೀತಿಯಲ್ಲಿ ಮಾರ್ಚ್ ತಿಂಗಳ ಅಂತ್ಯದ ಸಂದರ್ಭದಲ್ಲಿ ರಾಜ್ಯಮಟ್ಟದ ಗಮಕ ಸಾಹಿತ್ಯ ಸಮ್ಮೇಳನ ಆಯೋಜನೆ ಮಾಡಲಾಗುವುದು ಎಂದರು.ಕಡೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಎಸ್. ಕಲ್ಲೇಶ್ ನಗರ್ಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಶ್ರೀ ಲಕ್ಷ್ಮೀಶ ವಿದ್ಯಾಸಂಸ್ಥೆ ಅಧ್ಯಕ್ಷ ಎಸ್.ಲಕ್ಷ್ಮಣ್, ಪ್ರೌಢಶಾಲಾ ವಿಭಾಗದ ಮುಖ್ಯೋಪಾಧ್ಯಾಯ ಎನ್.ಸಿ. ಗುರುಮೂರ್ತಿ, ದತ್ತಿದಾನಿಗಳಾದ ಸಖರಾಯಪಟ್ಟಣ ಕೆ.ವಿ. ಚಂದ್ರಮೌಳಿ ಮತ್ತು ಚೇತನ್, ಶಾಲಾ ಉಪಾಧ್ಯಾಯರಾದ ಪ್ರಮೀಳಾ, ಮಲ್ಲಿಕಾರ್ಜುನಸ್ವಾಮಿ ಉಪಸ್ಥಿತರಿದ್ದರು. 31 ಕೆಸಿಕೆಎಂ 2ಕಡೂರು ತಾಲೂಕಿನ ದೇವನೂರು ಗ್ರಾಮದ ಶ್ರೀ ಲಕ್ಷ್ಮೀಶ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ಧ ಕುವೆಂಪು ಅವರ ಜನ್ಮದಿನೋತ್ಸವ ಕಾರ್ಯಕ್ರಮವನ್ನು ವಿಜಯಕುಮಾರ್ ಉದ್ಘಾಟಿಸಿದರು. ಸೂರಿ ಶ್ರೀನಿವಾಸ್, ಸುನಿತಾ ಕಿರಣ್, ನಾಗಶ್ರೀ ತ್ಯಾಗರಾಜ್ ಇದ್ದರು.