ಜ.೨೮ರಿಂದ ಕೆವಿಎಸ್ ಕಪ್ ಕ್ರಿಕೆಟ್ ಪ್ರೀಮಿಯರ್ ಲೀಗ್ ಪಂದ್ಯಾವಳಿ

| Published : Jan 26 2025, 01:35 AM IST

ಜ.೨೮ರಿಂದ ಕೆವಿಎಸ್ ಕಪ್ ಕ್ರಿಕೆಟ್ ಪ್ರೀಮಿಯರ್ ಲೀಗ್ ಪಂದ್ಯಾವಳಿ
Share this Article
  • FB
  • TW
  • Linkdin
  • Email

ಸಾರಾಂಶ

ಈ ಪಂದ್ಯಾವಳಿಯಲ್ಲಿ ನಟರಾದ ಲೂಸ್‌ಮಾದ ಯೋಗಿ, ಕೆಜಿಎಫ್ ಗರುಡಾರಾಮ್, ರವಿಶಂಕರ್‌ಗೌಡ, ಹರ್ಷ ಸಿ.ಎಂ.ಗೌಡ, ವಿಹಾನ್, ಸಾಗರ್ ಬಿಳಿಗೌಡ, ಅಭಿಲಾಷ್ ದಳಪತಿ, ರಂಜಿತ್‌ಕುಮಾರ್, ದಿಲೀಪ್ ಕೆಂಪೇಗೌಡ, ದರ್ಶಿತ್, ಸಂಗೀತ ನಿರ್ದೇಶಕ ಅನೂಪ್ ಸೀಳಿನ್, ಗಾಯಕ ವ್ಯಾಸರಾಜ್, ಕರಿಬಸವ ತಡಕಲ್ ಅವರು ಭಾಗವಹಿಸಲಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಪ್ರಪ್ರಥಮ ಬಾರಿಗೆ ನಿತ್ಯ ಸಚಿವ ಕೆ.ವಿ.ಶಂಕರಗೌಡರ ಸ್ಮರಣಾರ್ಥ ಕೆವಿಎಸ್ ಕಪ್ ಜನತಾ ಶಿಕ್ಷಣ ಟ್ರಸ್ಟ್ ಆಹ್ವಾನಿತ ಟಿ-೨೦ ಕ್ರಿಕೆಟ್ ಪ್ರೀಮಿಯರ್ ಲೀಗ್ ಪಂದ್ಯಾವಳಿ ಜ.೨೮ ರಿಂದ ಜ.೩೦ರವರೆಗೆ ನಡೆಯಲಿದೆ ಎಂದು ಪಿಇಟಿ ಸಂಸ್ಥೆ ನಿರ್ದೇಶಕ ಡಾ.ರಾಮಲಿಂಗಯ್ಯ ತಿಳಿಸಿದರು.

ಪಿಇಟಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯಾವಳಿ ಚಲನಚಿತ್ರ, ಕಿರುತೆರೆ ಕಲಾವಿದರು, ನಿರ್ದೇಶಕರು, ಗಾಯಕರು ಮತ್ತು ಪ್ರತಿಭಾನ್ವಿತ ಪ್ರಾದೇಶಿಕ ಕ್ರಿಕೆಟ್ ಆಟಗಾರರನ್ನೊಳಗೊಂಡ ಪ್ರತಿಭೆ ಮತ್ತು ಕ್ರೀಡಾ ಸ್ಫೂರ್ತಿಯ ಸಮ್ಮಿಲನವಾಗಿದೆ ಎಂದು ಶನಿವಾರ ಸುದ್ದಿಗೋಷ್ಠೀಯಲ್ಲಿ ಹೇಳಿದರು.

ಈ ಪಂದ್ಯಾವಳಿಯಲ್ಲಿ ನಟರಾದ ಲೂಸ್‌ಮಾದ ಯೋಗಿ, ಕೆಜಿಎಫ್ ಗರುಡಾರಾಮ್, ರವಿಶಂಕರ್‌ಗೌಡ, ಹರ್ಷ ಸಿ.ಎಂ.ಗೌಡ, ವಿಹಾನ್, ಸಾಗರ್ ಬಿಳಿಗೌಡ, ಅಭಿಲಾಷ್ ದಳಪತಿ, ರಂಜಿತ್‌ಕುಮಾರ್, ದಿಲೀಪ್ ಕೆಂಪೇಗೌಡ, ದರ್ಶಿತ್, ಸಂಗೀತ ನಿರ್ದೇಶಕ ಅನೂಪ್ ಸೀಳಿನ್, ಗಾಯಕ ವ್ಯಾಸರಾಜ್, ಕರಿಬಸವ ತಡಕಲ್ ಅವರು ಭಾಗವಹಿಸಲಿದ್ದಾರೆ ಎಂದರು.

ಪಿಇಟಿ -ರೆಡ್, ಪಿಇಟಿ-ಬ್ಲೂ, ಪಿಇಟಿ-ಯೆಲ್ಲೋ, ಪಿಇಟಿ-ಪಿಂಕ್ ಎಂಬ ನಾಲ್ಕು ತಂಡಗಳನ್ನು ರಚಿಸಿ ಪಿಇಟಿ ತಂಡದ ಆಟಗಾರರು ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವರು. ಇವರೊಂದಿಗೆ ತಾನ್ವಿ, ಕಾವ್ಯ, ಹಂಸ ಸೇರಿದಂತೆ ಒಟ್ಟು ಎಂಟು ಜನ ಕರ್ನಾಟಕ ತಂಡದ ಮಹಿಳಾ ಕ್ರಿಕೆಟ್ ಆಟಗಾರರು ಭಾಗವಹಿಸುವರು ಎಂದರು.

ಗೋಷ್ಠಿಯಲ್ಲಿ ಡಾ.ಅನಂತ ಪದ್ಮನಾಭ ಪ್ರಭು, ಕೆ.ವಿ.ನಂದಕಿಶೋರ್, ಡಾ.ಕೋದಂಡರಾಮ ಇದ್ದರು.