ಕನ್ನಡಪ್ರಭವಾರ್ತೆ ಸುಂಟಿಕೊಪ್ಪ

ಬ್ಯಾಂಕ್ ಖಾತೆಗಳನ್ನು ಹೊಂದಿರುವ ಪ್ರತಿಯೊಬ್ಬ ಗ್ರಾಹಕರು ಕೆವೈಸಿ, ಸಿಕೆವೈಸಿ ಅಕೌಂಟ್ ಹೈಜೀನ್ ಮತ್ತು ಶಿಸ್ತುಬದ್ಧತೆಯನ್ನು ಕಾಯ್ದುಕೊಳ್ಳುವುದರಿಂದ ಖಾತೆ ದುರುಪಯೋಗ ಮತ್ತು ವಂಚನೆ ತಡೆಯಲು ಸಾಧ್ಯವೆಂದು ಅವಾರ್ಡ್ ಸಂಸ್ಥೆಯ ಕುಶಾಲನಗರ ತಾಲೂಕಿನ ಕೌನ್ಸಿಲರ್ ಹರೀಶ್ ಹೇಳಿದರು.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನಡೆಸುತ್ತಿರುವ ಆರ್ಥಿಕ ಸಾಕ್ಷರತಾ ಸಪ್ತಾಹ ಅಂಗವಾಗಿ ಕೊಡಗರಹಳ್ಳಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಅಯೋಜಿಸಲಾದ ಮಾಹಿತಿ ಕಾರ್ಯಗಾರದಲ್ಲಿ ಮಾತನಾಡಿದರು. ಈ ವರ್ಷದ ಧ್ಯೇಯ ವಾಕ್ಯವಾಗಿರುವ ಕೆವೈಸಿ, ಸಿಕೆವೈಸಿ, ಅಕೌಂಟ್ ಹೈಜೀನ್ ಮತ್ತು ಶಿಸ್ತುಬದ್ಧತೆಯ ಬಗ್ಗೆ ಅವಾರ್ಡ್ ಸಂಸ್ಥೆಯ ಕುಶಾಲನಗರ ತಾಲೂಕಿನ ಕೌನ್ಸಿಲರ್ ಹರೀಶ್ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಸೈಬರ್‌ ಕ್ರೈಂ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಕೆವೈಸಿ, ಸಿಕೆವೈಸಿ ಮಾಡಿಸಿಕೊಳ್ಳುವುದರಿಂದ ವಂಚಕರು ಎಸಗುವ ವಂಚನೆಯ ಗುರುತು ವಿಳಾಸ ಮತ್ತು ಆರ್ಥಿಕ ಸ್ಥಾನಮಾನ ಪರಿಶೀಲಿಸಲು ಸಾಧ್ಯ ಎಂದರು.

ಮಾಹಿತಿ ಕಾರ್ಯಗಾರದಲ್ಲಿ ಮತ್ತೋರ್ವ ಅಧಿಕಾರಿ ವಿರಾಜಪೇಟೆ ತಾಲೂಕು ಕೌನ್ಸಿಲರಾದ ಕೃತಿ ಮಾತನಾಡಿ ಸಿ ಕೆ ವೈ ಸಿ ಮಾಡಿಸಿದ 14 ಅಂಕಿಗಳ ಕೋಡ್ ಯಾವುದೇ ಆರ್ಥಿಕ ವ್ಯವಹಾರಕ್ಕೆ ಪ್ರಮುಖ ಪಾತ್ರವಹಿಸುತ್ತದೆ. ಗ್ರಾಹಕರು ಮನಿಮ್ಯೂಲ್ ಮಾಡುವ ವ್ಯಕ್ತಿಗಳಿಂದ ದೂರ ಇರಬೇಕು. ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಬೇಕು ಎಂದರು.


ಪೊನ್ನಂಪೇಟೆ ತಾಲೂಕಿನ ಕೌನ್ಸಿಲರ್ ಅನಿಲ್, ಕೃಷಿ ಇಲಾಖೆಯ ತಾಂತ್ರಿಕ ವ್ಯವಸ್ಥಾಪಕರಾದ ಸುಪರ್ಣ ಉಪಸ್ಥಿತರಿದ್ದರು.