ಸಾರಾಂಶ
ಮದ್ದೂರು ತಾಲೂಕು ಕುರುಬರ ಸಂಘದ ಕಚೇರಿಯಲ್ಲಿ ನಡದ ಚುನಾವಣೆಯಲ್ಲಿ ಅಶ್ವಿನ್ 12 ಮತ ಪಡೆದು ಗೆಲುವು ಸಾಧಿಸಿದ್ದಾರೆ. ಪ್ರತಿಸ್ಪರ್ಧಿ ಛತ್ರದ ಹೂಸಹಳ್ಳಿಯ ಬೀರೇಶ್ 9 ಮತ ಪಡೆದು ಪರಾಭವಗೂಂಡರು.
ಕನ್ನಡಪ್ರಭ ವಾರ್ತೆ ಮದ್ದೂರು
ತಾಲೂಕು ಕುರುಬರ ಸಂಘದ ನೂತನ ಅಧ್ಯಕ್ಷರಾಗಿ ಎಲ್.ಆರ್.ಅಶ್ವಿನ್ ಶನಿವಾರ ಚುನಾಯಿತರಾದರು.ತಾಲೂಕು ಕುರುಬರ ಸಂಘದ ಕಚೇರಿಯಲ್ಲಿ ನಡದ ಚುನಾವಣೆಯಲ್ಲಿ ಅಶ್ವಿನ್ 12 ಮತ ಪಡೆದು ಗೆಲುವು ಸಾಧಿಸಿದ್ದಾರೆ. ಪ್ರತಿಸ್ಪರ್ಧಿ ಛತ್ರದ ಹೂಸಹಳ್ಳಿಯ ಬೀರೇಶ್ 9 ಮತ ಪಡೆದು ಪರಾಭವಗೂಂಡರು.
ಗೌರವಾದ್ಯಕ್ಷರಾಗಿ ಸಂಘದ ಮಾಜಿ ಅಧ್ಯಕ್ಷ ಮರಿಹೆಗ್ಗಡೆ, ಉಪಾಧ್ಯಕ್ಷರಾಗಿ ಪ್ರಪುಲ್ಲಚಂದ್ರ, ಕಾರ್ಯದರ್ಶಿ ಎಚ್.ರಾಜು, ಸಹ ಕಾರ್ಯದರ್ಶಿ ಚನ್ನೇಶ್, ಖಜಾಂಚಿಯಾಗಿ ಜವರ ಹೆಗ್ಗಡೆ, ಸಂಘಟನಾ ಕಾರ್ಯಕ್ರಮ ಡಿ.ಕುಮಾರ್ ಹಾಗೂ ಲೆಕ್ಕ ಪರಿಶೋಧಕರಾಗಿ ರೇಣುಕಾಸ್ವಾಮಿ ಚುನಾಯಿತರಾಗಿದ್ದರೆ. ಸಂಘಕ್ಕೆ ಆಯ್ಕೆಯಾದ ಅಧ್ಯಕ್ಷರು ಮತ್ತು ಪದಾದಿಕಾರಿಗಳನ್ನು ಜಿಪಂ ಮಾಜಿ ಸದಸ್ಯ ಮರಿಹೆಗ್ಗಡೆ, ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆ ಸಮಿತಿ ಮಾಜಿ ನಿರ್ದೇಶಕ ಲಿಂಗನದೂಡ್ಡಿ ರಾಮಕೃಷ್ಣ, ಜಿಲ್ಲಾ ಕುರುಬರ ಸಂಘದ ನಿರ್ದೇಶಕ ಮೆಳ್ಳಹಳ್ಳಿ ಮಹೇಶ್, ನವಿಲೇಶ್, ಅರುಣಾ ಹೆಚ್ ಸೇರಿದಂತೆ ಸಂಘದ ಪದಾಧಿಕಾರಿಗಳನ್ನು ಅಭಿನಂದಿಸಿದರು.ಮಂಜುನಾಥ್ ನಾಮನಿರ್ದೇಶಿತ ಸದಸ್ಯರಾಗಿ ನೇಮಕ
ನಾಗಮಂಗಲ:ಪಟ್ಟಣದ ಪೌರಕಾರ್ಮಿಕರ ಕಾಲೋನಿ ವಾಸಿ ಸುಬ್ರಹ್ಮಣ್ಯ ಪುತ್ರ ಎನ್.ಎಸ್.ಮಂಜುನಾಥ್ ಅವರು ಮ್ಯಾನ್ಯುಯಲ್ ಸ್ಟಾವೆಂಜರ್‌ಗಳ ಜೀವನಮಟ್ಟ ಸುಧಾರಣೆ, ಸಮಾಜದ ಮುಖ್ಯವಾಹಿನಿಗೆ ತರುವ, ಪುನರ್ ವಸತಿ ಕಲ್ಪಿಸುವ ಹಾಗೂ ಶೈಕ್ಷಣಿಕ ಉತ್ತೇಜನ ಕಾರ್ಯಕ್ರಮಗಳನ್ನು ಪರಿಶೀಲಿಸುವ ಜಿಲ್ಲಾ ಮಟ್ಟದ ಉಸ್ತುವಾರಿ ಸಮಿತಿ ನಾಮನಿರ್ದೇಶಿತ ಸದಸ್ಯರಾಗಿ ನೇಮಕಗೊಂಡಿದ್ದಾರೆ. ಜಿಲ್ಲಾಧಿಕಾರಿ ಡಾ.ಕುಮಾರ ಅವರು ಮಂಜುನಾಥ್‌ಗೆ ನೇಮಕಾತಿ ಆದೇಶ ಪ್ರತಿ ನೀಡಿ ಶುಭಕೋರಿದರು. ಜಿಲ್ಲಾ ಮಟ್ಟದ ಉಸ್ತುವಾರಿ ಸಮಿತಿ ನಾಮನಿರ್ದೇಶಿತ ಸದಸ್ಯನನ್ನಾಗಿ ಆಯ್ಕೆ ಮಾಡಿರುವ ಜಿಲ್ಲೆಯ ಜಿಲ್ಲಾಧಿಕಾರಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಆಯುಕ್ತರಿಗೆ ಮಂಜುನಾಥ್ ಅಭಿನಂದಿಸಿದ್ದಾರೆ.