ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ಜಿ ರಾಮ್‌ಜಿ ಯೋಜನೆ ಹೆಸರು ವಿರೋಧಿಸಿ ನೂರಾರು ಮಂದಿ ಕೂಲಿಕಾರರು ತಾಲೂಕಿನ ಕೊಡಮಡಗು ಗ್ರಾಪಂ ವ್ಯಾಪ್ತಿಯ ಕಡಮಲಕುಂಟೆಯಲ್ಲಿ ಬೃಹತ್‌ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಪಾವಗಡ

ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ಜಿ ರಾಮ್‌ಜಿ ಯೋಜನೆ ಹೆಸರು ವಿರೋಧಿಸಿ ನೂರಾರು ಮಂದಿ ಕೂಲಿಕಾರರು ತಾಲೂಕಿನ ಕೊಡಮಡಗು ಗ್ರಾಪಂ ವ್ಯಾಪ್ತಿಯ ಕಡಮಲಕುಂಟೆಯಲ್ಲಿ ಬೃಹತ್‌ ಪ್ರತಿಭಟನೆ ನಡೆಸಿದರು.

ಈ ವೇಳೆ ಸಹಿ ಸಂಗ್ರಹದ ಪತ್ರ ಚಳುವಳಿ ನಡೆಸಿ ಅದನ್ನು ಪ್ರಧಾನಿಗೆ ಕಳುಹಿಸಲಾಯಿತು. ಈ ವೇಳೆ ಮಾತನಾಡಿದ ಮುಖಂಡರು, ನರೇಗಾ ಎಂದು ಜನಪ್ರಿಯವಾಗಿರುವ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಳೆದ ಎರಡು ದಶಗಳಿಂದ ಇಡೀ ದೇಶದ ಗ್ರಾಮೀಣ ಕೂಲಿಕಾರ್ಮಿಕರು ಹಾಗೂ ಸಣ್ಣ ರೈತರ ಜೀವನಕ್ಕೆ ಬಲವಾದ ಆಧಾರವಾಗಿತ್ತು. ಉದ್ಯೋಗವನ್ನು ಕೇಳಿ ಪಡೆಯುವ ಹಕ್ಕನ್ನು ನೀಡಿತ್ತು. ಆದರೆ, ಕೇಂದ್ರ ಸರ್ಕಾರ ಈ ಜನರ ಹಿತ ಕಾನೂನು ಕಿತ್ತೊಗೆದು ಹೊಸಕಾಯ್ದೆ ರೂಪಿಸಿ ಜಿರಾಮ್‌ಜಿ ಯೋಜನೆ ಜಾರಿಗೆ ತರಲು ಸಿದ್ದತೆ ನಡೆಸುತ್ತಿದೆ. ರಾಷ್ಟ್ರಪಿತ ಮಹಾತ್ಮ ಗಾಂಧಿ ಹೆಸರನ್ನು ಕೈಬಿಡುವ ಕ್ರಮದ ಜತೆಗೆ ನರೇಗಾದ ಮೂಲ ಅಶಯವನ್ನೆ ಬುಡಮೇಲು ಮಾಡುವ ಹುನ್ನಾರವಾಗಿದೆ ಎಂದು ಆರೋಪಿಸಿದರು.

ನಗರ ಪ್ರದೇಶಗಳಲ್ಲಿ ಇದ್ದ ವಲಸೆಯಿಂದ ಮರಳಿದವರು ಕೂಡ ನರೇಗಾದಲ್ಲಿ ತಮ್ಮ ಗ್ರಾಪಂ ವ್ತಾಪ್ತಿಯಲ್ಲಿ ಕೆಲಸ ಪಡೆಯಬಹುದಾಗಿತ್ತು. ತಮ್ಮಿಚ್ಚೆಯಂತೆ ನೋಟಕ್ಕೆ ಜಾರಿತರಲು ಸಿದ್ದತೆ ನಡೆಸುತ್ತಿದ್ದು ಇದರಿಂದ ಗ್ರಾಮೀಣ ಕೂಲಿಕಾರರಿಗೆ ಯಾವುದೇ ಪ್ರಯೋಜವಾಗುದಿಲ್ಲ. ಬಜೆಟ್ ಗಳಲ್ಲಿ ಮಾತ್ರ ಜಾರಿಯಲಿರುತ್ತದೆ. ದೇಶದ ಕೂಲಿಕಾರರಿಗೆ ಎಲ್ಲ ಕಡೆಯು ಉದ್ಯೋಗ ಖಾತ್ರಿಯೆ ಇರುವುದಿಲ್ಲ. ನರೇಗಾದಲ್ಲಿ ಗ್ರಾಮೀಣ ಭಾಗದಲ್ಲಿ ಎಷ್ಟು ಜನ ಅರ್ಜಿ ಸಲ್ಲಿಸಿದ್ದರೂ 15ದಿನಗಳೊಳಗೆ ಕೆಲಸ ನೀಡುವ ನಿಯಮವಿತ್ತು. ಕೂಲಿ ಹಣ ಪಾವತಿಸುವ ಸಂಪೂರ್ಣ ಹೊಣೆ ಕೇಂದ್ರ ಸರ್ಕಾರದಾಗಿತ್ತು. ಈಗ ಬದಲಾಯಿಸಿ ಕೆಲ ಮಾರ್ಪಾಡುಗಳ ಮೂಲಕ ಜಿ,ರಾಮ್‌ಜಿ ಹೆಸರಿನಲ್ಲಿ ಯೋಜನೆ ಜಾರಿಗೆ ತರಲು ಹೊರಟಿರುವ ಕೇಂದ್ರದ ಧೋರಣೆ ಸರಿಯಿಲ್ಲ, ಇದರಿಂದ ಬಡ ಕೂಲಿಕಾರರಿಗೆ ಅನ್ಯಾಯವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಈ ವೇಳೆ ನರಸಿಂಹಮೂರ್ತಿ, ಕಡಮಲಕುಂಟೆ ಪೂಜಾರಪ್ಪ, ಮಹಿಳಾ ಸಂಘಟನೆಯ ಅಶ್ವಿನಿ, ನರಸಿಂಹಪ್ಪ, ಬಾಲಾಜಿ, ದಾಸಪ್ಪ, ಜಯರಾಮಪ್ಪ, ಜೈ.ಲಕ್ಷ್ಮಮ್ಮ, ಶಾಂತಮ್ಮ, ಧರ್ಮಪಾಲ, ಶೇಷಪ್ಪ, ವೆಂಕಟಲಕ್ಷ್ಮಿ, ವರಲಕ್ಷ್ಮಿ, ಮಂಜುಳಾ ಮಮತ, ಅನಂತಕುಮಾರ್, ಕೆ.ಎ.ನಾಗರಾಜ್, ಅನಂತಮ್ಮ, ಗಂಗಮ್ಮ ದೇವರಾಜ್, ಹನುಮಂತರಾಯ, ಈಶ್ವರಮ್ಮ, ತಿಮ್ಮರಾಜಪ್ಪ, ನಾಗಮ್ಮ ಪದ್ಮಾವತಿ ಇತರರಿದ್ದರು.