1927ರಲ್ಲಿ ಹುಬ್ಬಳ್ಳಿಯಲ್ಲಿ ಜನಿಸಿದ ಎ.ಜೆ. ಮುಧೋಳ ಬಾಲ್ಯದಿಂದಲೇ ಕಾರ್ಮಿಕರು, ಬಡವರ ಬಗ್ಗೆ ಮಾನವೀಯ ಅನುಕಂಪ ಹೊಂದಿದ್ದರು. ಹಾಗಾಗಿ ಅವರ ನ್ಯಾಯಯುತ ಹಕ್ಕುಗಳ ಬಗ್ಗೆ ಅಧಿಕಾರಸ್ಥರ ಗಮನ ಸೆಳೆಯಲು ಹೋರಾಟ ಮಾಡುತ್ತಿದ್ದರು.
ಹುಬ್ಬಳ್ಳಿ:ಕಾರ್ಮಿಕ ನಾಯಕ, ಸ್ವಾತಂತ್ರ್ಯ ಯೋಧ, ಕರ್ನಾಟಕ ಏಕೀಕರಣ, ಗೋವಾ ವಿಮೋಚನಾ ಹೋರಾಟಗಾರ ದಿವಂಗತ ಎ.ಜೆ. ಮುಧೋಳ (ಅಬ್ದುಲ್‌ರೆಹಮಾನ್ ಜಂಗ್ಲಿಸಾಬ್ ಮುಧೋಳ) ಅವರ 25ನೇ ಪುಣ್ಯಸ್ಮರಣೆ ಬುಧವಾರ ಹಳೇಹುಬ್ಬಳ್ಳಿಯ ಎ.ಜೆ.ಮುಧೋಳ ಸಭಾಭವನದಲ್ಲಿ ಜರುಗಲಿದೆ.
ವಿವಿಧ ಕಾರ್ಮಿಕ ಸಂಘಟನೆಗಳ ಸಹಯೋಗದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ರಾಜ್ಯದ ಪ್ರಮುಖ ಕಾರ್ಮಿಕ ಮುಖಂಡರು ಭಾಗವಹಿಸಿ ದಿವಂಗತ ಎ.ಜೆ.ಮುಧೋಳ ಅವರ ಆದರ್ಶ, ಹೋರಾಟದ ಹಾದಿ ಸ್ಮರಿಸಲಿದ್ದಾರೆ.ಹೀಗಿದ್ದರು ಕಾಮ್ರೇಡ್:
1927ರಲ್ಲಿ ಹುಬ್ಬಳ್ಳಿಯಲ್ಲಿ ಜನಿಸಿದ ಎ.ಜೆ. ಮುಧೋಳ ಬಾಲ್ಯದಿಂದಲೇ ಕಾರ್ಮಿಕರು, ಬಡವರ ಬಗ್ಗೆ ಮಾನವೀಯ ಅನುಕಂಪ ಹೊಂದಿದ್ದರು. ಹಾಗಾಗಿ ಅವರ ನ್ಯಾಯಯುತ ಹಕ್ಕುಗಳ ಬಗ್ಗೆ ಅಧಿಕಾರಸ್ಥರ ಗಮನ ಸೆಳೆಯಲು ಹೋರಾಟ ಮಾಡುತ್ತಿದ್ದರು. ಈ ಹೋರಾಟ ಮನೋಭಾವನೆಯೇ ಅವರನ್ನು ಭಾರತದ ಸ್ವಾತಂತ್ರ್ಯ ಸಂಗ್ರಾಮ, ಕರ್ನಾಟಕ ಏಕೀಕರಣ, ಗೋವಾ ವಿಮೋಚನೆ, ನರಗುಂದ ರೈತ ಬಂಡಾಯದಲ್ಲಿ ಭಾಗವಹಿಸುವಂತೆ ಮಾಡಿತ್ತು ಎನ್ನುವುದು ಗಮನೀಯ.ಕರ್ನಾಟಕ ಏಕೀಕರಣ ಕುರಿತಂತೆ ಹುಬ್ಬಳ್ಳಿ ಟೌನ್‌ಹಾಲ್‌ನಲ್ಲಿ 1953ರ ಏ. 18ರಂದು ಸಭೆ ಸೇರಿದಾಗ 20 ಜನರಲ್ಲಿ 13 ಜನ ಕಮ್ಯುನಿಸ್ಟ್ ನಾಯಕರೇ ಇದ್ದರು. ಇವರನ್ನೆಲ್ಲಾ ಆತಂಕಕಾರಿಗಳೆಂಬ ಬಿರುದು ಪಡೆದು ಕಾಂಗ್ರೆಸ್ಸಿನವರಿಂದ ಕರ್ನಾಟಕ ಸ್ಥಾನಬದ್ಧತಾ ಕಾನೂನಿನಡಿ ಸೆರೆಮನೆಗೆ ಕಳಿಸಲಾಯಿತು. ಅವರಲ್ಲಿ ಎ.ಜೆ. ಮುಧೋಳ ಕೂಡ ಒಬ್ಬರು. ಆಗ ತಾನೇ ಮುಧೋಳರು ಮುದುವೆ ಆಗಿದ್ದು, ಅವತ್ತೆ ರಾತ್ರಿ ಪೋಲಿಸರು ಮನೆಗೆ ಬಂದು ಬಂಧಿಸಿ ಪೋಲಿಸ್ ವಾಹನದಲ್ಲಿ ಕರೆದುಕೊಂಡು ಬೆಳಗಾವಿ ಹಿಂಡಲಗಾ ಜೈಲಿಗೆ ಹೋಗುತ್ತಾರೆ. 1981ರಲ್ಲಿ ನರಗುಂದ ರೈತ ಬಂಡಾಯ ಜಾಥಾ ನಿಮಿತ್ತ ನರಗುಂದದಿಂದ ಬೆಂಗಳೂರು ವಿಧಾನಸೌಧದ ವರೆಗೂ ಸಹಸ್ರ ಸಂಖ್ಯೆಯ ಜನರೊಂದಿಗೆ ಬೆರೆತು ಮುಂದಾಳತ್ವ ವಹಿಸಿದ ಎ. ಜೆ. ಮುಧೋಳರು ಪಾದಯಾತ್ರೆಯ ಮೂಲಕ ಪ್ರಯಾಣಿಸಿ ರೈತರಿಗೆ ನ್ಯಾಯ ಒದಗಿಸಲು ಒಂದು ಐತಿಹಾಸಿಕ ಜಾಥಾ ನಡೆಸಿದ್ದರು. ಅಸಂಘಟಿತ ಕಾರ್ಮಿಕರಾದ ಬೀಡಿ, ಹಮಾಲರು, ಹೊಟೇಲ್, ಟಾಂಗಾ, ಆಟೋರಿಕ್ಷಾ, ಯೂನಿಯನ್ ಒಡನಾಟ ಇವರ ಸಂಘಟನೆಗಳು ಇಲ್ಲಿ ಉಳಿದಿದ್ದರೆ ಅದು ಮುಧೋಳರು ಹಾಕಿದ ಬೀಜವಾಗಿದೆ. 1946ರಲ್ಲಿ ಹುಬ್ಬಳ್ಳಿಯಲ್ಲಿ ಮೊದಲ ಬಾರಿಗೆ ಬೀಡಿ ಕಾರ್ಮಿಕರು ನಡೆಸಿದ ಹೋರಾಟದ ಫಲವಾಗಿ 8 ಆಣೆ ಕೂಲಿ 10 ಆಣೆ ಆಗಿದ್ದು ಬೀಡಿ ಕಾರ್ಮಿಕರು ಮರೆಯುವುದಿಲ್ಲ. ಹುಬ್ಬಳ್ಳಿಯಲ್ಲಿ ಕೆಎಸ್‌ಆರ್‌ಟಿಸಿ, ಎ.ಕೆ. ಇಂಡಸ್ಟ್ರೀಜ್, ಬಿಡಿಕೆ, ಕಿರ್ಲೋಸ್ಕರ್, ಮಹಾದೇವ ಜವಳಿ ಗಿರಣಿ, ಸುಂದತ್ತಾ ಮಿಲ್ಲ, ಜಿನ್ನಿಂಗ್ ಮತ್ತು ಪ್ರೆಸ್ಸಿಂಗ್ ಫ್ಯಾಕ್ಟರಿ, ನರಗುಂದದ ನಂದಿ ಮಿಲ್, ರೈಲ್ವೆ ವಲಯ ಹುಬ್ಬಳ್ಳಿಯಲ್ಲಿ ಸ್ಥಾಪನೆಯಾಗಬೇಕೆಂದು ಪಾಟೀಲ ಪುಟ್ಟಪ್ಪ ಜತೆಗೆ ನಿರಂತನವಾಗಿ ಹೋರಾಟ ಮಾಡಿ ಯಶಸ್ವಿಯಾದರು.
ಪೋಟೋ-ಎ.ಜೆ.ಮುಧೋಳ