ಬಹಳ ದಿನಗಳ ನಂತರ ಉಡುಪಿಗೆ ಬಂದ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಶನಿವಾರ ಬೆಳಿಗ್ಗೆ ಜಿಲ್ಲೆಯಲ್ಲಿ ತಮ್ಮೆಲ್ಲ ಕಾರ್ಯಕ್ರಮಗಳಿಗೆ ಮೊದಲು ಬನ್ನಂಜೆ ಶ್ರೀ ಶನೀಶ್ವರ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.

ಉಡುಪಿ: ಬಹಳ ದಿನಗಳ ನಂತರ ಉಡುಪಿಗೆ ಬಂದ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಶನಿವಾರ ಬೆಳಿಗ್ಗೆ ಜಿಲ್ಲೆಯಲ್ಲಿ ತಮ್ಮೆಲ್ಲ ಕಾರ್ಯಕ್ರಮಗಳಿಗೆ ಮೊದಲು ಬನ್ನಂಜೆ ಶ್ರೀ ಶನೀಶ್ವರ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಶನಿವಾರ ವೈಖಾಖ ಅಮಾವಾಸ್ಯೆ, ಶನಿ ಜಯಂತಿ ಪ್ರಯುಕ್ತ ನಾಡಿನಲ್ಲಿಯೇ ಅಪರೂಪದ ಈ 23 ಅಡಿ ಎತ್ತರದ ಶನಿ ದೇವರ ಮೂರ್ತಿಗೆ ಮೆಟ್ಟಲು ಹತ್ತಿ ಎಳ್ಳೆಣ್ಣೆ ಅಭಿಷೇಕ ನಡೆಸಿದ ಸಚಿವೆ, ಭಕ್ತರ ಕಷ್ಟಗಳನ್ನು ನಿವಾರಿಸಿ ನ್ಯಾಯದ ಮಾರ್ಗದಲ್ಲಿ ನಡೆಯಲು ಪ್ರೇರೇಪಿಸುವಂತೆ ಮತ್ತು ಶ್ರೀ ಶನಿದೇವರ ಆಶೀರ್ವಾದವು ನಾಡಿನ ಪ್ರತಿಯೊಂದು ಮನೆ ಮನೆಗೂ ಲಭಿಸಲಿ. ರಾಜ್ಯದಲ್ಲಿ ಸುಖ, ಶಾಂತಿ, ಸಮೃದ್ಧಿ ಸದಾ ನೆಲೆಸಲಿ ಎಂದು ಪ್ರಾರ್ಥಿಸಿರುವುದಾಗಿ ತಿಳಿಸಿದರು.ರಾಜ್ಯದಲ್ಲಿ ರಾಜಕೀಯದ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸಚಿವೆ ಅವರ ಈ ಶನಿ ದೇವರ ಪೂಜೆ ಗಮನ ಸೆಳೆಯಿತು.