ಉತ್ತಮ ಸಂಘಟಕರಾಗಿದ್ದ ಲಕ್ಷ್ಮಿನಾರಾಯಮ ನಾಗವಾರ: ರವಿಚಂದ್ರ

| Published : Jan 03 2025, 12:31 AM IST

ಉತ್ತಮ ಸಂಘಟಕರಾಗಿದ್ದ ಲಕ್ಷ್ಮಿನಾರಾಯಮ ನಾಗವಾರ: ರವಿಚಂದ್ರ
Share this Article
  • FB
  • TW
  • Linkdin
  • Email

ಸಾರಾಂಶ

ಶ್ರೀರಂಗಪಟ್ಟಣದ ಮೈಸೂರು-ಬೆಂಗಳೂರು ಹೆದ್ದಾರಿಯ ಕುವೆಂಪು ವೃತ್ತದಲ್ಲಿ ದಸಂಸ ರಾಜ್ಯ ಸಂಚಾಲಕ ಲಕ್ಷ್ಮಿನಾರಾಯಣ ನಾಗವಾರ ಅವರಿಗೆ ಶ್ರದ್ಧಾಂಜಲಿ ಸಲ್ಲಿಕೆ. ರಾಜ್ಯದ ದಲಿತ ಸಂಘರ್ಷ ಸಮಿತಿಗಳನ್ನು ಒಂದುಗೂಡಿಸಿ ಒಂದೇ ವೇದಿಕೆಗೆ ತರುವ ಕಾರ್ಯದಲ್ಲಿ ಮುಂದಾಗಿದ್ದರು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಬೆಂಗಳೂರಿನ ಲಕ್ಷ್ಮಿನಾರಾಯಣ ನಾಗವಾರ ಸಂಘಟಕರಾಗಿ ಉತ್ತಮ ಕೆಲಸ ಮಾಡಿದ್ದರು ಎಂದು ದಲಿತ ಸಮಿತಿ ಜಿಲ್ಲಾ ಸಂಚಾಲಕ ರವಿಚಂದ್ರ ಹೇಳಿದರು.

ಪಟ್ಟಣದ ಮೈಸೂರು-ಬೆಂಗಳೂರು ಹೆದ್ದಾರಿಯ ಕುವೆಂಪು ವೃತ್ತದಲ್ಲಿ ಲಕ್ಷ್ಮಿನಾರಾಯಣ ನಾಗವಾರ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿ, ಉತ್ತಮ ವಾಗ್ಮಿಯಾಗಿ ಲಕ್ಷ್ಮಿನಾರಾಯಣ ಅವರು ಮಾತಿನ ಚತುರತೆಯಿಂದ ಎಲ್ಲರ ಗಮನ ಸೆಳೆಯುತ್ತಿದ್ದರು ಎಂದರು.

ರಾಜ್ಯದ ದಲಿತ ಸಂಘರ್ಷ ಸಮಿತಿಗಳನ್ನು ಒಂದುಗೂಡಿಸಿ ಒಂದೇ ವೇದಿಕೆಗೆ ತರುವ ಕಾರ್ಯದಲ್ಲಿ ಮುಂದಾಗಿದ್ದರು. ಅವರ ಅಕಾಲಿಕ ಮರಣದಿಂದ ಸಂಘಟನೆಗೆ ನಷ್ಟವಾಗಿದೆ. ಅವರು ಹಾಕಿರುವ ಮಾರ್ಗದರ್ಶನಗಳ ಮುಂದುವರೆಸಿ ಸಂಘಟನೆಯನ್ನು ಉತ್ತಮ ದಾರಿಗೆ ಕೊಂಡೊಯ್ಯುವ ಕೆಲಸ ಮಾಡಬೇಕು ಎಂದರು.

ಈ ವೇಳೆ ರೈತ ಸಂಘದ ಪಾಂಡು, ಗ್ರಾ.ಪಂ ಸದಸ್ಯ ಅಪ್ಪಾಜಿ, ಶಿವಯ್ಯ, ಹೊನ್ನಯ್ಯ, ಮಹೇಶ್, ಚಂದ್ರಶೇಖರ್ ಪ್ರಜ್ಞಾವಂತರ ವೇದಿಕೆ ಸಂಚಾಲಕ ಸಿ.ಎಸ್ ವೆಂಕಟೇಶ್ ಇತರರು ಲಕ್ಷ್ಮಿನಾರಾಯಣ ನಾಗವಾರ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ್ದರು.

ಜ.3 ರಿಂದ 5ರವರೆಗೆ ಉದ್ಯಮಿ ಒಕ್ಕಲಿಗ-ಎಫ್‌ಸಿ ಎಕ್ಸ್‌ಪೋ

ಮಂಡ್ಯ:

ಬೆಂಗಳೂರಿನಲ್ಲಿ ಜ.3ರಿಂದ 5ರವರೆಗೆ ಉದ್ಯಮಿ ಒಕ್ಕಲಿಗ-ಎಫ್‌ಸಿ ಎಕ್ಸ್‌ಪೋ 2025 ಅನ್ನು ಹಮ್ಮಿಕೊಳ್ಳಲಾಗಿದೆ.

ಒಕ್ಕಲಿಗ ಉದ್ಯಮಿಗಳ ಬೆಳವಣಿಗೆ ಮತ್ತು ಯಶಸ್ಸಿಗಾಗಿ ಬೆಂಗಳೂರಿನ ಅರಮನೆ ಮೈದಾನದ ಗಾಯತ್ರಿ ಗ್ರಾಂಡ್ ಮತ್ತು ಗಾಯತ್ರಿ ವೃಕ್ಷದಲ್ಲಿ ಬೃಹತ್ ಕಾರ್ಯಕ್ರಮವು ಒಕ್ಕಲಿಗ ಸಮುದಾಯದ ಉದ್ಯಮಶೀಲತೆಗೆ ವೇದಿಕೆ ಒದಗಿಸುವ ಜೊತೆಗೆ ಇನ್ನೊವೇಶನ್, ನೆಟ್‌ವರ್ಕಿಂಗ್‌ಹಾಗೂ ಸಹಭಾಗಿತ್ವ ನೆರವಾಗಲಿದೆ.

ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಸಕ್ತಿಯುಳ್ಳವರು ಆ್ಯಪ್ ಮೂಲಕ ನೊಂದಣಿ ಮಾಡಿಕೊಳ್ಳಬಹುದು. ಅಪ್ಲಿಕೇಶನ್ ಡೌನ್‌ಲೋಡ್ ಮಾಡುವವರಿಗೆ ಉಚಿತ ಪ್ರವೇಶ ಸಿಗಲಿದೆ. ಎಕ್ಸ್‌ಪೋದಲ್ಲಿ ಉತ್ಪನ್ನಗಳು ಮತ್ತು ವ್ಯಾಪಾರದ 200 ಮಳಿಗೆಗಳು ಇದ್ದು, ಇದರಲ್ಲಿ ಜಿಲ್ಲೆಯ ಪ್ರತಿನಿಧಿಗಳು ತಮ್ಮ ಸ್ಥಳೀಯ ವ್ಯವಹಾರಗಳ ಬಗ್ಗೆ ಚರ್ಚಿಸಲು ಸಮಯ ನಿಗದಿ ಪಡಿಸಲಾಗಿದೆ.

ಮಹಿಳಾ ಉದ್ಯಮಿಗಳು ಸೇರಿದಂತೆ ಎಲ್ಲರಿಗೂ ಇದೊಂದು ಉತ್ತಮ ವೇದಿಕೆಯಾಗಿದೆ. ಇದರಲ್ಲಿ ಭಾಗವಹಿಸುವ ಎಲ್ಲರಿಗೂ ಅನುಕೂಲವಾಗಲಿದೆ. ಆರೋಗ್ಯ, ಶಿಕ್ಷಣ, ಎಂಎಸ್‌ಎಂಇ, ಆಹಾರ ಮತ್ತು ಆತಿಥ್ಯ ಸೇರಿದಂತೆ ಇನ್ನೂ ಹಲವು ವಲಯಗಳು ಒಂದೇ ಸೂರಿನಡಿ ಸಿಗಲಿವೆ.

ಹಿಂದಿನ ಎಕ್ಸ್‌ಪೋನಲ್ಲಿ ಬೆಂಗಳೂರು ನಗರಕ್ಕೆ ಹೆಚ್ಚಿನ ಒತ್ತು ನೀಡಲಾಗಿತ್ತು. ಈ ಬಾರಿ 123 ತಾಲೂಕುಗಳಿಗೆ ವಿಸ್ತರಿಸಲಾಗಿದೆ. ಈ ಪ್ರದೇಶದ ಉದ್ಯಮಿಗಳು ಮತ್ತು ಗ್ರಾಹಕರು ಎಕ್ಸ್‌ಪೋ ದಲ್ಲಿ ಭಾಗವಹಿಸಲಿದ್ದಾರೆ. ಒಕ್ಕಲಿಗರು ಉದ್ಯಮಿಗಳಾಗಿ ಹೊರಹೊಮ್ಮಲು ಉತ್ತಮ ವೇದಿಕೆಯಾಗಿದ್ದು, ಕೃಷಿಗೆ ವಿಶೇಷ ಆದ್ಯತೆ ನೀಡಲಾಗಿದೆ ಎಂದು ಫಸ್ಟ್ ಸರ್ಕಲ್ ನ ರಾಜ್ಯಾಧ್ಯಕ್ಷ ನಂದೀಶ್ ರಾಜೇಗೌಡ,

ಮಂಜುಳಾ ಪ್ರಕಾಶ್, ಅಮರೇಶ, ಚಂದ್ರಪ್ಪ, ಭುವನ ಸುರೇಶ್‌ ಮಾಹಿತಿ ನೀಡಿದ್ದಾರೆ.