ಇನ್ನರ್ ವೀಲ್ ಸಂಸ್ಥೆಯ 50 ನೇ ಅಧ್ಯಕ್ಷೆಯಾಗಿ ಲಲಿತಾರಾಘವನ್ ಪದಗ್ರಹಣ

| Published : Jul 06 2025, 01:48 AM IST

ಇನ್ನರ್ ವೀಲ್ ಸಂಸ್ಥೆಯ 50 ನೇ ಅಧ್ಯಕ್ಷೆಯಾಗಿ ಲಲಿತಾರಾಘವನ್ ಪದಗ್ರಹಣ
Share this Article
  • FB
  • TW
  • Linkdin
  • Email

ಸಾರಾಂಶ

ನೂತನ ಅಧ್ಯಕ್ಷೆಯಾಗಿ ಲಲಿತಾರಾಘವನ್ ಮತ್ತು ಕಾರ್ಯದರ್ಶಿಯಾಗಿ ನಮಿತಾ ರೈ ಅಧಿಕಾರ ವಹಿಸಿಕೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಮಡಿಕೇರಿಯ ಇನ್ನರ್ ವೀಲ್ ಸಂಸ್ಥೆಯ 50 ನೇ ವರ್ಷದ ಸಂದರ್ಭ, ನೂತನ ಅಧ್ಯಕ್ಷೆಯಾಗಿ ಲಲಿತಾರಾಘವನ್ ಮತ್ತು ಕಾರ್ಯದರ್ಶಿಯಾಗಿ ನಮಿತಾ ರೈ ಅಧಿಕಾರ ವಹಿಸಿಕೊಂಡಿದ್ದಾರೆ.ನಗರದ ರೋಟರಿ ಸಭಾಂಗಣದಲ್ಲಿ ಆಯೋಜಿತ ಕಾರ್ಯಕ್ರಮದಲ್ಲಿ ಇನ್ನರ್ ವೀಲ್ ನಲ್ಲಿ ಸದಸ್ಯೆಯಾಗಿ 50 ವರ್ಷ ಪೂರೈಸಿರುವ ಹಿರಿಯ ಸದಸ್ಯೆ ಡಾ.ಜಯಲಕ್ಷ್ಮಿ ಪಾಟ್ಕರ್ ನೂತನ ಆಡಳಿತ ಮಂಡಳಿಗೆ ಪದಗ್ರಹಣ ನೆರವೇರಿಸಿದರು.

ಈ ಸಂದರ್ಭ ಮಾತನಾಡಿದ ನೂತನ ಅಧ್ಯಕ್ಷೆ ಲಲಿತಾ ರಾಘವನ್, ಮಹಿಳೆಯರ ಸ್ವಾವಲಂಬನೆಗೆ ಪೂರಕವಾದ ಯೋಜನೆಗಳನ್ನು ಇನ್ನರ್ ವೀಲ್ ವತಿಯಿಂದ ಮುಂದಿನ ವರ್ಷದಲ್ಲಿ ಜಾರಿಗೊಳಿಸುವುದಾಗಿ ಭರವಸೆ ನೀಡಿದರಲ್ಲದೇ, ಅರ್ಥಪೂರ್ಣ ಯೋಜನೆಗಳ ಮೂಲಕ ಸಮುದಾಯ ಸೇವೆಗೆ ಮುಂದಾಗುವುದಾಗಿ ನುಡಿದರು.

ಬೇರೆಯವರಿಗಾಗಿ ದಿನನಿತ್ಯ ಶ್ರಮಿಸುವ , ಬದುಕು ಸವೆಸುವ ಮಹಿಳೆಯರು ತನ್ನನ್ನು ತಾನು ಗಮನಿಸಿಕೊಳ್ಳುವ ದಿನಗಳು ಬಂದಿವೆ ಎಂದೂ ಲಲಿತಾ ರಾಘವನ್ ಹೇಳಿದರು.

ಕಾರ್ಯದರ್ಶಿ ನಮಿತಾ ರೈ ವಂದಿಸಿದ ಕಾರ್ಯಕ್ರಮದಲ್ಲಿ ಇನ್ನರ್ ವೀಲ್ ಜಿಲ್ಲೆಯ ಮಾಜಿ ಅಧ್ಯಕ್ಷೆ ಪೂಣಿ೯ಮ ರವಿ , ನಿಕಟಪೂರ್ವ ಅಧ್ಯಕ್ಷೆ ಅಗ್ನೇಸ್ ಮುತ್ತಣ್ಣ, ನಿಕಟಪೂರ್ವ ಕಾರ್ಯದರ್ಶಿ ರಶ್ಮಿ ಪ್ರವೀಣ್ ಹಾಜರಿದ್ದರು.

ಶಫಾಲಿ ರೈ ಸಂಪಾದಕತ್ವದಲ್ಲಿ ಪ್ರಕಟವಾದ ಗಿರಿಶೃಂಗ ವಾರ್ತಾ ಸಂಚಿಕೆಯನ್ನು ರೋಟರಿ ಮಡಿಕೇರಿಯ ಕಾರ್ಯದರ್ಶಿ ಪ್ರಿನ್ಸ್ ಪೊನ್ನಣ್ಣ ಅನಾವರಣಗೊಳಿಸಿದರು. ರೇಣುಕಾ ಸುಧಾಕರ್, ಲಕ್ಷ್ಮಿ ಈಶ್ವರ ಭಟ್, ಲತಾ ಸುಬ್ಬಯ್ಯ ಪ್ರಾರ್ಥಿಸಿದರು. ಡಾ. ಶುಭಾ ರಾಜೇಶ್, ದಿವ್ಯ ಮುತ್ತಣ್ಣ, ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ನಮಿತಾ ರೈ ವಂದಿಸಿದರು.