ದೀಪ ಜ್ಞಾನದ ಸಂಕೇತ: ಡಾ. ರಾಜೇಂದ್ರ

| Published : Nov 24 2025, 02:45 AM IST

ಸಾರಾಂಶ

ಸಾನ್ನಿಧ್ಯ ವಹಿಸಿದ್ದ ಶ್ರೀಮಠದ ಧರ್ಮದರ್ಶಿ ಮಹೇಶ್ವರ ಸ್ವಾಮಿಗಳು ಹೊಸಳ್ಳಿಮಠ ಮಾತನಾಡಿ, ಜ್ಞಾನ, ಕರುಣೆ, ಸದ್ಭಾವನೆಗಳೇ ಈ ದೀಪಗಳು. ನಾವು ನಮ್ಮೊಳಗಿನ ಕೆಟ್ಟ ವಿಚಾರಗಳು, ಅಸೂಯೆ ಮತ್ತು ಸ್ವಾರ್ಥಗಳನ್ನು ದೂರ ಮಾಡಿ, ಪ್ರೀತಿ ಮತ್ತು ಸಕಾರಾತ್ಮಕತೆಯನ್ನು ಬೆಳೆಸಿಕೊಳ್ಳೋಣ ಎಂದರು.

ಗದಗ: ದೀಪ ಜ್ಞಾನದ ಸಂಕೇತ. ಕತ್ತಲೆ ಅಜ್ಞಾನದ ಸಂಕೇತ. ಬೆಳಕು ಕತ್ತಲೆಯನ್ನು ದೂರ ಮಾಡುತ್ತ ಹೋದ ಹಾಗೆ ಜ್ಞಾನವು, ಅಜ್ಞಾನವನ್ನು ದೂರ ಮಾಡುತ್ತದೆ. ಸರ್ವೋತ್ಕೃಷ್ಟ ಜ್ಞಾನಕ್ಕೆ ಶಿರಬಾಗಿ ನಮಿಸುವ ಪ್ರತೀಕವೇ ದೀಪ ಪ್ರಜ್ವಲನೆ. ಇದು ನಮ್ಮ ಎಲ್ಲ ಆಲೋಚನೆ, ಚಟುವಟಿಕೆಗಳಿಗೆ ಸಾಕ್ಷಿ ಎಂದು ಶ್ರೀಮಠದ ಶಿವಾನುಭವ ಸಮಿತಿ ಅಧ್ಯಕ್ಷ ಡಾ. ರಾಜೇಂದ್ರ ಎಸ್. ಗಡಾದ ತಿಳಿಸಿದರು.ನಗರದ ಮುಳಗುಂದ ನಾಕಾ ಬಳಿಯ ಅಡವೀಂದ್ರಸ್ವಾಮಿ ಮಠದಲ್ಲಿ ಆರಾಧ್ಯ ದೈವ ಅನ್ನಪೂರ್ಣೇಶ್ವರಿ ದೇವಿಯ ಕಾರ್ತಿಕೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಸಾನ್ನಿಧ್ಯ ವಹಿಸಿದ್ದ ಶ್ರೀಮಠದ ಧರ್ಮದರ್ಶಿ ಮಹೇಶ್ವರ ಸ್ವಾಮಿಗಳು ಹೊಸಳ್ಳಿಮಠ ಮಾತನಾಡಿ, ಜ್ಞಾನ, ಕರುಣೆ, ಸದ್ಭಾವನೆಗಳೇ ಈ ದೀಪಗಳು. ನಾವು ನಮ್ಮೊಳಗಿನ ಕೆಟ್ಟ ವಿಚಾರಗಳು, ಅಸೂಯೆ ಮತ್ತು ಸ್ವಾರ್ಥಗಳನ್ನು ದೂರ ಮಾಡಿ, ಪ್ರೀತಿ ಮತ್ತು ಸಕಾರಾತ್ಮಕತೆಯನ್ನು ಬೆಳೆಸಿಕೊಳ್ಳೋಣ ಎಂದರು.ಈ ವೇಳೆ ಶ್ರೀಮಠದ ಜಾತ್ರಾ ಮಹೋತ್ಸವ ಮಹಿಳಾ ಸಮಿತಿ ಅಧ್ಯಕ್ಷೆ ಸುವರ್ಣಾ ಸದಾಶಿವ ಮದರಿಮಠ, ನಿವೃತ್ತ ಪ್ರಾ. ಪೊ. ಕೆ.ಎಚ್. ಬೇಲೂರ, ನಿವೃತ್ತ ತಹಸೀಲ್ದಾರ್ ಎಲ್.ಎಸ್. ನೀಲಗುಂದ, ಕೈಗಾರಿಕೋದ್ಯಮಿ ಎಸ್.ಎಸ್. ಪಾಟೀಲ ಅರಹುಣಸಿ, ನಿವೃತ್ತ ಸಹಕಾರಿ ಇಲಾಖೆ ಅಧಿಕಾರಿ ಬಿ.ಎಂ. ಬಿಳೆಎಲಿ, ಎನ್.ಎಸ್. ಬಳಿಗಾರ, ಬಿ.ಡಿ. ಕಿಲಬನವರ, ಕೃಷಿ ವಿಜ್ಞಾನಿ ಡಾ. ಎಸ್.ಕೆ. ನಾಲವತ್ತವಾಡಮಠ, ಸುಶೀಲಾ ಗಂಗಣ್ಣ ಕೋಟಿ, ಬಸವರಾಜ ಪಲ್ಲೇದ, ಜಿ.ಎಂ. ಯಾನಮಶೆಟ್ಟಿ, ಗುರಪ್ಪ ನಿಡಗುಂದಿ, ಪ್ರಮಿಳಾದೇವಿ ಬಳಿಗಾರ, ಅನ್ನಪೂರ್ಣಮ್ಮ ಹೊಸಳ್ಳಿಮಠ, ಪ್ರಕಾಶ ಬಂಡಿ, ಸಿ.ಬಿ. ಹಿರೇಮಠ, ಮಾಲತೇಶ ಪಾಟೀಲ, ವೀರಣ್ಣ ಹೂಗಾರ, ಸವಿತಾ ಹೊಸಳ್ಳಿಮಠ, ವಿಜಯಲಕ್ಷ್ಮೀ ಹೊಸಳ್ಳಿಮಠ ಸೇರಿದಂತೆ ಶ್ರೀಮಠದ ಭಕ್ತರು ಇದ್ದರು. ಪ್ರಭುಗೌಡ ಪಾಟೀಲ ಸ್ವಾಗತಿಸಿದರು. ವೀರೇಶ್ವರ ಸ್ವಾಮಿಗಳು ಹೊಸಹಳ್ಳಿಮಠ ಅವರು ವೈದಿಕ ವಿಧಿವಿಧಾನಗಳನ್ನು ನೆರವೇರಿಸಿದರು. ಪ್ರೊ. ವಿ.ಎಂ. ಕುಂದ್ರಾಳಹಿರೇಮಠ ನಿರೂಪಿಸಿದರು. ಮಾರುತಿ ಹೆಬ್ಬಾರ ವಂದಿಸಿದರು.