ಸಾರಾಂಶ
ಕನ್ನಡಪ್ರಭ ವಾರ್ತೆ ಬೀಳಗಿ
ಕೃಷ್ಭಾ ಮೇಲ್ದಂಡೆ ಯೋಜನೆಯ ೩ನೇ ಹಂತದ ಸಲುವಾಗಿ ಭೂಸ್ವಾಧೀನ ಪಡಿಸಿಕೊಳ್ಳಲು ಸರ್ಕಾರ ಈಗಾಗಲೇ ಒಣಬೆಸಾಯ ಪ್ರತಿ ಎಕರೆ ಜಮೀನಿಗೆ ₹೩೦ ಲಕ್ಷ , ನೀರಾವರಿ ಪ್ರತಿ ಎಕರೆ ಜಮೀನಿಗೆ ₹೪೦ ಲಕ್ಷ ನೀಡಲು ತೀರ್ಮಾನಿಸಿದ್ದು ಸ್ವಾಗತಾರ್ಹ. ಜೊತೆಗೆ ಪ್ರತಿ ವರ್ಷ ಶೇ.೧೦ರಷ್ಟು (ಎಕ್ಸಗ್ರೇಷಿಯಾ ) ಸೇರಿಸಿ ಭೂ ಪರಿಹಾರ ನೀಡಬೇಕು ಎಂದು ಸರ್ಕಾರಕ್ಕೆ ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ ಆಗ್ರಹಿಸಿದ್ದಾರೆ.ಇಲ್ಲಿನ ಬಿಜೆಪಿ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಎಲ್ಲ ವಿಷಯಗಳ ಕುರಿತಾಗಿ ಡಿಸಿಎಂ ಅವರು ಕರೆದು ಸಭೆಯಲ್ಲಿ ತಿಳಿಸಿದ್ದೇನೆ. ಮೂರು ಆರ್ಥಿಕ ವರ್ಷಗಳಲ್ಲಿ ಯೋಜನೆ ಮುಕ್ತಾಯ ಮಾಡುವ ಘೋಷಣೆ ಮಾಡಲಾಗಿದೆ. ಈ ಕುರಿತಾಗಿ ಭೂಸ್ವಾಧೀನ ಪ್ರಕ್ರಿಯೆ ಆರಂಭದ ಆದೇಶ ಮಾಡುವಾಗ ಸರ್ಕಾರ ಈಗಾಗಲೇ ನ್ಯಾಯಾಲಯ ಹಾಗೂ ಇಲಾಖೆಯಿಂದ ರೈತರ ಪರವಾಗಿ ಆದೇಶಗಳಾಗಿದ್ದು, ಸುಮಾರು ₹೩೭೦೦ ಕೋಟಿ ಲೆಕ್ಕದಲ್ಲಿ ಆದೇಶವಾಗಿದೆ. ಈ ಪರಿಹಾರವನ್ನು ಸರ್ಕಾರ ಮಂಜೂರು ಮಾಡುವ ಕುರಿತು ಎಲ್ಲಿಯೂ ತಿಳಿಸಿಲ್ಲ. ತ್ವರಿತವಾಗಿ ಈ ಪರಿಹಾರ ಕೊಡಬೇಕು ಮತ್ತು ಈ ಯೋಜನೆಯಲ್ಲಿ ಬಾಗಲಕೋಟೆ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದ ೨೦ ಗ್ರಾಮಗಳ ಸ್ಥಳಾಂತರ ಮಾಡುವುದು, ಮುಳುಗಡೆ ವ್ಯಾಪ್ತಿಗೆ ಬರುವ ಕಟ್ಟಡಗಳು ದರ ನಿಗದಿ ಮಾಡುವುದರ ಜೊತೆಗೆ ಪುನರ್ವಸತಿ ಕೇಂದ್ರದ ನಿರ್ಮಾಣಕ್ಕಾಗಿ ಭೂಸ್ವಾಧೀನ ಮಾಡುವ ಬಗ್ಗೆ ತಿಳಿಸಿಲ್ಲ. ಆದರೂ ಈಗಾಗಲೇ ಸರ್ಕಾರ ಕೈಗೊಂಡ ಎಲ್ಲ ವಿವರಗಳೊಂದಿಗೆ ಒಟ್ಟಾರೆ ಯೋಜನೆಯ ಸಮಗ್ರ ವಿಷಯಗಳನ್ನು ಒಳಗೊಂಡ ಆದೇಶವಾದರೆ ಸಂತ್ರಸ್ತರಿಗೆ ಸರ್ಕಾರ ಮಾಡುವ ಕ್ರಮಗಳ ಬಗ್ಗೆ ತಿಳಿಯಲಿದೆ ಎಂದ ಅವರು, ಕೂಡಲೇ ಇವುಗಳ ಕುರಿತಾಗಿ ಚರ್ಚೆ ಮಾಡಿ ಶೀಘ್ರಗತಿಯಲ್ಲಿ ಯೋಜನೆ ಮುಕ್ತಾಯ ಮಾಡಬೇಕು ಒತ್ತಾಯಿಸಿದರು.
ವಿಜೃಂಭಣೆಯಿಂದ ನ್ಯಾಯ ಸಿಗಲ್ಲ: ಸರ್ಕಾರ ಯುಕೆಪಿ ಯೋಜನೆಯ ಕುರಿತಾಗಿ ಚರ್ಚೆ ಮಾಡಿ ಭೂಸ್ವಾಧೀನ ಪ್ರಕ್ರಿಯೆ ಬಗ್ಗೆ ತಿಳಿಸಿದೆ. ಸಂತ್ರಸ್ತರಿಗೆ ತಮ್ಮ ಆಸ್ತಿ ತ್ಯಾಗ ಮಾಡಿ ಹೊಸ ಬದುಕು ಕಟ್ಟಿಕೊಂಡು ಜೀವನ ಸಾಗಿಸಲು ಹಲವಾರು ಸಮಸ್ಯೆ ಇವೆ. ಆದರೂ ಒಂದು ಘೋಷಣೆಗೆ ಸಂಭ್ರಮಾಚರಣೆ ಮಾಡಿದರೆ, ಸಂತ್ರಸ್ತರಾದವರಿಗೆ ಭೂಸ್ವಾಧೀನ ಒಂದೇ ಆದರೆ ಸಾಕು ಎಂದು ತೋರಿಸಿಕೊಟ್ಟಂತೆ ಆಗುತ್ತೆ, ಸರ್ಕಾರ ತಿಳಿಸಿದ ನಿಗದಿತ ಅವಧಿಯಲ್ಲಿ ಎಲ್ಲ ಸಮಸ್ಯೆಗಳಿಗೆ ಸ್ಪಂದಿಸಿದರೆ ಸಂತ್ರಸ್ತರೂ, ಹೋರಾಟಗಾರರು ಸೇರಿಕೊಂಡು ಅದ್ಧೂರಿ ಸಮಾರಂಭ ಆಯೋಜಿಸಿ ಮುಖ್ಯಮಂತ್ರಿಗಳು, ಡಿಸಿಎಂ ಅವರು ಸೇರಿದಂತೆ ಎಲ್ಲರನ್ನೂ ಸನ್ಮಾನಿಸಿ ಗೌರವಿಸೋಣ ಎಂದು ಹೇಳಿದರು.;Resize=(128,128))
;Resize=(128,128))
;Resize=(128,128))
;Resize=(128,128))