ಅಂತರಗಂಗೆ ಬೆಟ್ಟದಲ್ಲಿ ಬಲಿಜರ ಭವನಕ್ಕೆ ಜಾಗ

| Published : Mar 15 2025, 01:03 AM IST

ಸಾರಾಂಶ

ಕೋಲಾರ ನಗರದ ಸುತ್ತಮುತ್ತಲು ಯಾವುದೇ ಸರ್ಕಾರಿ ಸ್ಥಳ ಇಲ್ಲದೆ ಇರುವುದರಿಂದ ಬಲಿಜ ಸಮುದಾಯದ ಭವನ ನಿರ್ಮಾಣ ಮಾಡಲು ಅಂತರಗಂಗೆ ಬೆಟ್ಟದಲ್ಲಿ ಸರ್ಕಾರದ ಜಾಗ ನೀಡಲಾಗುವುದು. ಕೈವಾರ ತಾತಯ್ಯ ಸಮಾಜ ಸುಧಾರಕರಾಗಿದ್ದು, ಅವರ ತತ್ವ, ತೋರಿದ ಮಾರ್ಗದರ್ಶನ ಪಾಲಿಸಿದರೆ ಎಲ್ಲೆಡೆ ಶಾಂತಿ ನೆಲೆಸುವುದರಲ್ಲಿ ಸಂಶಯವಿಲ್ಲ

ಕನ್ನಡಪ್ರಭ ವಾರ್ತೆ ಕೋಲಾರಅಂತರಗಂಗೆ ಬೆಟ್ಟದ ಮೇಲೆ ಬಲಿಜ ಸಮುದಾಯದ ಭವನಕ್ಕೆ ಸ್ಥಳಾವಕಾಶ ಮಾಡಿಕೊಡಲಾಗುವುದು, ಸಮುದಾಯದ ಏಳಿಗೆಗೆ ಅಗತ್ಯ ಸಹಕಾರ ನೀಡಲಾಗುವುದು ಎಂದು ಶಾಸಕ ಕೊತ್ತೂರು ಜಿ.ಮಂಜುನಾಥ್ ತಿಳಿಸಿದರು. ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸತಿ ಇಲಾಖೆ, ಜಿಲ್ಲಾ ಬಲಿಜ ಸಂಘ, ಬಲಿಜ ನೌಕರರ ಸೇವಾ ಟ್ರಸ್ಟ್, ಶ್ರೀ ಯೋಗಿನಾರೇಯಣ ಚಾರಿಟಬಲ್ ಟ್ರಸ್ಟ್ ಮತ್ತು ಸಮುದಾಯದಿಂದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ನಗರದ ಸುತ್ತಮುತ್ತ ಜಾಗ ಇಲ್ಲ

ಕೋಲಾರ ನಗರದ ಸುತ್ತಮುತ್ತಲು ಯಾವುದೇ ಸರ್ಕಾರಿ ಸ್ಥಳ ಇಲ್ಲದೆ ಇರುವುದರಿಂದ ಬಲಿಜ ಸಮುದಾಯದ ಭವನ ನಿರ್ಮಾಣ ಮಾಡಲು ಅಂತರಗಂಗೆ ಬೆಟ್ಟದಲ್ಲಿ ಸರ್ಕಾರದ ಜಾಗ ನೀಡಲಾಗುವುದು. ಕೈವಾರ ತಾತಯ್ಯ ಸಮಾಜ ಸುಧಾರಕರಾಗಿದ್ದು, ಅವರ ತತ್ವ, ತೋರಿದ ಮಾರ್ಗದರ್ಶನ ಪಾಲಿಸಿದರೆ ಎಲ್ಲೆಡೆ ಶಾಂತಿ ನೆಲೆಸುವುದರಲ್ಲಿ ಸಂಶಯವಿಲ್ಲ ಎಂದರು.

ಎಂಎಲ್ಸಿ ಎಂ.ಎಲ್.ಅನಿಲ್ ಕುಮಾರ್ ಮಾತನಾಡಿ, ಕೇವಲ ಶಿಕ್ಷಣ ಕ್ಷೇತ್ರದಲ್ಲಿ ಮಾತ್ರ ೨ಎ ಮೀಸಲಾತಿ ಎಲ್ಲಾ ಕ್ಷೇತ್ರಗಳಿಗೆ ವಿಸ್ತರಿಸುವಂತೆ ಸರ್ಕಾರಕ್ಕೆ ಪ್ರಯತ್ನ ಮಾಡುವುದಾಗಿ ತಿಳಿಸಿ ಈ ಸಮುದಾಯಕ್ಕೆ ಅಭಿವೃದ್ಧಿ ಮಂಡಳಿ ಮತ್ತು ಅಧ್ಯಯನ ಪೀಠ ಸ್ಥಾಪನೆ ಮಾಡಲಾಗುವುದು. ಮುಂದಿನ ದಿನಗಳಲ್ಲಿ ಸಮುದಾಯದ ಮುಖಂಡರಿಗೆ ರಾಜಕೀಯವಾಗಿ ಪ್ರತಿನಿಧ್ಯ ನೀಡುವುದಾಗಿ ತಿಳಿಸಿದರು.

ತಾತಯ್ಯರ ತತ್ವಪದ ಗಾಯನ

ಕಾರ್ಯಕ್ರಮದ ನಂತರ ಕೈವಾರ ನಾದ ವಿದ್ವಾನ್ ಮತ್ತು ತಂಡದಿಂದ ತಾತಯ್ಯರ ತತ್ವಪದ ಗಾಯನ ನಡೆಯಿತು. ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಲಕ್ಷ್ಮೀದೇವಮ್ಮ ರಮೇಶ್, ಎಡಿಸಿ ಮಂಗಳ, ತಹಸೀಲ್ದಾರ್ ನಯನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ವಿಜಯಲಕ್ಷ್ಮೀ, ಮುಖಂಡರಾದ ರಾಮಕ್ಕ, ಅಶ್ವತ್ಥ್, ರಘು ಚಿಟ್ಟಿ, ಸಿ.ಎಂ.ಆರ್.ಶ್ರೀನಾಥ್, ಕೆ.ಎನ್.ರವೀಂದ್ರಕುಮಾರ್, ಎಂ.ವಿ.ರಘು, ಕೆ.ವಿ.ಸುರೇಶ್ ಕುಮಾರ್, ವೆಂಕಟಸ್ವಾಮಿ, ಎಸ್.ಎಸ್.ಶ್ರೀಧರ್, ಬಾಲಕೃ? ಭಾಗವತ್, ಲಕ್ಷ್ಮಯ್ಯ, ಸುರೇಶ್, ಮುನಿಕೃ?ಪ್ಪ, ಅರುಣಮ್ಮ, ಬೆಂಗಳೂರು ಉತ್ತರ ವಿ.ವಿ ಸಿಂಡಿಕೇಟ್ ಸದಸ್ಯ ಮುರಂಡಲ್ಲಿ ಗೋಪಾಲ್, ವಕೀಲ ರವಿಶಂಕರಪ್ಪ, ಮಾಜಿ ನಗರಸಭಾ ಸದಸ್ಯ ರವೀಂದ್ರ ಇದ್ದರು.