ಬುಕುಡಿಬೈಲು- ನೆಮ್ಮಾರು ರಸ್ತೆಯಲ್ಲಿ ಭೂಕುಸಿತ

| Published : Aug 03 2024, 12:32 AM IST

ಸಾರಾಂಶ

ಶೃಂಗೇರಿ: ಕಳೆದ ಕೆಲದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದ ತಾಲೂಕಿನ ನೆಮ್ಮಾರು ಪಂಚಾಯಿತಿ ವ್ಯಾಪ್ತಿಯ ಬುಕುಡಿಬೈಲು-ನೆಮ್ಮಾರು ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಲ್ಲಿ ಭೂಕುಸಿತ ಉಂಟಾಗುತ್ತಿದ್ದು ರಸ್ತೆ ಸಂಪರ್ಕ ಕಡಿತಗೊಳ್ಳುವ ಭೀತಿ ಎದುರಾಗಿದೆ.

ರಸ್ತೆ ಅರ್ಧಭಾಗದಷ್ಟು ಕುಸಿದಿದ್ದು ಈ ರಸ್ತೆಯಲ್ಲಿ ಸುಮಾರು 50 ಅಡಿಗೂ ಹೆಚ್ಚು ಆಳದ ಪ್ರಪಾತವಿದೆ. ಮೇಲ್ಬಾಗದಲ್ಲಿ ಗುಡ್ಡವಿದ್ದು, ರಸ್ತೆ ಹಂತ ಹಂತವಾಗಿ ಕುಸಿಯುತ್ತಿರುವ ಜತೆಗೆ ಗುಡ್ಡದ ನೀರು ಹರಿಯುತ್ತಿದೆ. ನಿರಂತರ ಮಳೆಗೆ ಮಣ್ಣು ಭೂಕುಸಿತ ವುಂಟಾಗುತ್ತಿರುವುದರಿಂದ ಸಂಚರಿಸುವ ಜನರಲ್ಲಿ ಜೀವಭಯ ಮೂಡಿಸುತ್ತಿದೆ.

ಹರೂರು ಮಕ್ಕಿ. ತಲಗಾರು, ವಳಲೆ, ಮಾವಿನಕಾಡು,ಕಕ್ಕರ್ಣೆ,ಕರಿಮನೆ,ಹೆಮ್ಮಿಗೆ,ಮಲ್ನಾಡ್ ಹಂಚಿನ ಕೊಡಿಗೆ,ಮಂಡಗಾರು ಸೇರಿದಂತೆ ಸುತ್ತಮುತ್ತಸ ಹತ್ತಾರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಇದಾಗಿದೆ. ಈ ಭಾಗದ ವಾಹನ ಸಂಚಾರ,ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗುತ್ತಿದೆ. ಸಂಪರ್ಕ ಬಂದ್ ಜನರಿಗೆ ಓಡಾಡಲು ಪರ್ಯಾಯ ರಸ್ತೆಯೇ ಇಲ್ಲವಾಗಿದೆ.

ಸಂಬಂಧಪಟ್ಚ ಇಲಾಖೆ, ಸರ್ಕಾರ, ಜನಪ್ರತಿನಿಧಿಗಳು ಕೂಡಲೇ ಈ ಭಾಗದ ಸಮಸ್ಯೆಯನ್ನು ಗಂಬೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರಾದ ಅಶೋಕ್, ಮೃತ್ಯುಂಜಯ, ಶಿವಪ್ರಕಾಶ್, ರಮೇಶ್, ಸಂಪತ್,ಪ್ರದೀಪ್ ಮತ್ತಿತರರು ಒತ್ತಾಯಿಸಿದ್ದಾರೆ.

2 ಶ್ರೀ ಚಿತ್ರ 2-ಶೃಂಗೇರಿ ತಾಲೂಕಿನ ಬುಕುಡಿ ಬೈಲು ನೆಮ್ಮಾರು ರಸ್ತೆಯಲ್ಲಿ ಭೂಕುಸಿತ ಉಂಟಾಗುತ್ತಿರುವುದು.