ಉಡುಪಿ ಎಲ್‌ವಿಟಿಲ್ಲಿ ಕೊನೆಯ ವಸಂತೋತ್ಸವ ಸಂಪನ್ನ

| Published : Jun 08 2024, 12:33 AM IST

ಉಡುಪಿ ಎಲ್‌ವಿಟಿಲ್ಲಿ ಕೊನೆಯ ವಸಂತೋತ್ಸವ ಸಂಪನ್ನ
Share this Article
  • FB
  • TW
  • Linkdin
  • Email

ಸಾರಾಂಶ

ಶ್ರೀ ದೇವಳದ ಪ್ರಧಾನ ಅರ್ಚಕ ದಯಾಘನ್ ಭಟ್ ಅವರು ಶ್ರೀ ದೇವರಿಗೆ ವಿಶೇಷ ಅಲಂಕಾರ ಮಾಡಿ ಮಂಗಳಾರತಿ ಬೆಳಗಿಸಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಇಲ್ಲಿನ ತೆಂಕುಪೇಟೆಯ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ವಸಂತ ಮಾಸದ ಪ್ರಯುಕ್ತ ಜಿ.ಎಸ್.ಬಿ ಯುವಕ ಮಂಡಳಿಯ ಸದಸ್ಯರು ಮತ್ತು ಸ್ವಯಂಸೇವರ ವತಿಯಿಂದ ಈ ಸಾಲಿನ ಕೊನೆಯ ವಸಂತೋತ್ಸವವು ಜೂ.6ರಂದು ರಾತ್ರಿ ವಿಜೃಂಭಣೆಯಿಂದ ನಡೆಯಿತು.

ಶ್ರೀ ದೇವಳದ ಪ್ರಧಾನ ಅರ್ಚಕ ದಯಾಘನ್ ಭಟ್ ಅವರು ಶ್ರೀ ದೇವರಿಗೆ ವಿಶೇಷ ಅಲಂಕಾರ ಮಾಡಿ ಮಂಗಳಾರತಿ ಬೆಳಗಿಸಿದರು. ನಂತರ ಶ್ರೀ ದೇವರಿಗೆ ವೇದ ಘೋಷ, ಭಜನೆ, ವಿವಿಧ ಮಂಗಳವಾದ್ಯ ಸೇವೆಯೊಂದಿಗೆ ಸ್ವರ್ಣ ಪಲ್ಲಕ್ಕಿ ಉತ್ಸವ, ಲಾಲ್ಕಿ ಉತ್ಸವ ನಡೆಯಿತು. ಬಳಿಕ ಅಷ್ಟಾವಧಾನ ಸೇವೆ, ಮಹಾಪೂಜೆಯ ನಂತರ ಪ್ರಸಾದ ವಿತರಣೆ ನಡೆಯಿತು.

ಈ ಸಮಾರಂಭದಲ್ಲಿ ದೇವಳದ ಆಡಳಿತ ಮೊಕ್ತೇಸರ ಪಿ.ವಿ. ಶೆಣೈ, ಗಣೇಶ್ ಕಿಣಿ, ಭಜನಾ ಸಮಿತಿಯ ರೂವಾರಿ ಸತೀಶ್ ಕಿಣಿ, ಚೇ೦ಪಿ ರಾಮಚಂದ್ರ ಭಟ್, ವಿಶಾಲ್ ಶೆಣೈ, ಸತೀಶ್ ಕಾಮತ್, ದೀಪಕ್ ಭಟ್, ಗಿರೀಶ ಭಟ್, ನರಹರಿ ಪೈ, ಪ್ರದೀಪ್ ರಾವ್, ಯುವಕ ಮಂಡಲದ ಅಧ್ಯಕ್ಷ ನಿತೇಶ ಶೆಣೈ, ಆಡಳಿತ ಮಂಡಳಿಯ ಸದಸ್ಯರು, ಶ್ರೀ ಲಕ್ಷ್ಮೀ ವೆಂಕಟೇಶ್ ಭಗನಿ ವೃಂದ ಹಾಗು ಜಿ.ಸ್.ಬಿ. ಯುವಕ ಮಂಡಳಿ, ಮಹಿಳಾ ಮಂಡಳಿ ಸದಸ್ಯರು ಹಾಗೂ ನೂರಾರು ಸಮಾಜಭಾಂದವರು ಉಪಸ್ಥಿತರಿದ್ದರು.