ಸಾರಾಂಶ
ನಿಹಾರಿಕಾ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾಳೆ. ನಿಹಾರಿಕಾಳಿಗೆ ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಅವಕಾಶಗಳು ದೊರೆತು ಉನ್ನತ ಮಟ್ಟದಲ್ಲಿ ಬೆಳೆಯಲಿ ಎಂದು ಶುಭ ಹಾರೈಸಿದರು.
ಕನ್ನಡಪ್ರಭ ವಾರ್ತೆ ದಾವಣಗೆರೆ
ಬಾಲಪ್ರತಿಭೆ ಗಾನ ಕಿಶೋರಿ ನಿಹಾರಿಕಾ ರಾಥೋಡ್ ಹಾಡಿರುವ ಲಾಡೆರ್ ಬೇಟಿ (ಮುದ್ದಿನ ಮಗಳು) ಬಂಜಾರ ಹಾಡು ಟೈಟಲ್ ಮೂಲಕ ಸದ್ದು ಮಾಡಿ ಎಲ್ಲರಲ್ಲೂ ಕುತೂಹಲ ಮೂಡಿಸಿದ ಈ ಹಾಡನ್ನು ಸಿಂಗರ್ ನಿಹಾರಿಕಾ ರಾಥೋಡ್ ಯೂ ಟ್ಯೂಬ್ ಚಾನೆಲ್‌ನಲ್ಲಿ ನಗರದ ನಿಮ್ಮ ಸಿನಿಮಾ ಮಿನಿ ಥಿಯೇಟರ್‌ನಲ್ಲಿ ಬಿಡುಗಡೆ ಕಾರ್ಯಕ್ರಮ ನಡೆಯಿತು.ಸಿದ್ಧಗಂಗಾ ವಿದ್ಯಾಸಂಸ್ಥೆ ಮುಖ್ಯ ಶಿಕ್ಷಕಿ ರೇಖಾರಾಣಿ ಹಾಡು ಬಿಡುಗಡೆ ಮಾಡಿ ಮಾತನಾಡಿ ನಿಹಾರಿಕಾ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾಳೆ. ನಿಹಾರಿಕಾಳಿಗೆ ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಅವಕಾಶಗಳು ದೊರೆತು ಉನ್ನತ ಮಟ್ಟದಲ್ಲಿ ಬೆಳೆಯಲಿ ಎಂದು ಶುಭ ಹಾರೈಸಿದರು.
ಈ ಹಾಡು ನೇತ್ರಾವತಿ ಉಮ್ಮನಾಯ್ಕ ನಿರ್ಮಿಸಿ, ಬಂಜಾರ ಗಾಯಕ ಕುಬೇರ ನಾಯ್ಕ್ ಸಾಹಿತ್ಯ ಬರೆದು ಸಂಗೀತ ನಿರ್ದೇಶನ ನೀಡಿದ್ದು, ಶೀತಲ್ ಜಿ .ನಾಯ್ಕ ನಿರ್ದೇಶನ ಮಾಡಿದ್ದು, ಛಾಯಾಗ್ರಹಣ ಹಾಗೂ ಸಂಕಲನವನ್ನು ಡಿಸೈನರ್ ಅರುಣ್ ಮಾಡಿದ್ದಾರೆ.ಕಾರ್ಯಕ್ರಮದಲ್ಲಿ ಶ್ರೀ ಸಿದ್ದಗಂಗಾ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಹೇಮಂತ್, ರೈತ ಸಂಘದ ಅಧ್ಯಕ್ಷ ಶೇಖರ್ ನಾಯ್ಕ, ಗೋಪಾಲ ನಾಯ್ಕ, ವಿದ್ಯಾರ್ಥಿ ಸಂಘದ ರಾಜ್ಯಾಧ್ಯಕ್ಷ ಗಿರೀಶ್ ಜಿ ನಾಯ್ಕ್, ಅಲೋಕ ನಾಯ್ಕ, ಬಸವರಾಜ ನಾಯ್ಕ್, ಉಮ್ಮಾ ನಾಯ್ಕ, ಅಭಿ ಬಂಜಾರ, ನಿಮಿತಾ ರಾಥೋಡ್, ಕಾವ್ಯಾ, ಕಮಲಿಬಾಯಿ, ಶೃತಿ ಹಾಗೂ ಇನ್ನಿತರರಿದ್ದರು.