ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ವಿಜಯಪುರ ಜಿಲ್ಲಾ ಸಹಕಾರಿ ಯುನಿಯನ್, ಶಿವಾಜಿ ಮಹಾರಾಜ ಕೋ-ಆಪ್. ಕ್ರೆಡಿಟ್ ಸೊಸೈಯಿಟಿ, ಸ್ಥಳೀಯ ಸಹಕಾರಿ ಸಂಘಗಳು, ಸಹಕಾರಿ ಬ್ಯಾಂಕುಗಳು ಮತ್ತು ಸಹಕಾರಿ ಇಲಾಖೆ ಸಂಯುಕ್ತಾಶ್ರಯದಲ್ಲಿ 71ನೇ ಅಖಿಲ ಭಾರತ ಸಹಕಾರ ಸಪ್ತಾಹ-2024 ಆಚರಿಸಲಾಯಿತು.ನಗರದಲ್ಲಿರುವ ಸಂಘದ ಕಚೇರಿಯ ಮೇಲೆ ಸಪ್ತವರ್ಣದ ಸಹಕಾರಿ ಧ್ವಜಾರೋಹಣವನ್ನು ಸಂಘದ ಅಧ್ಯಕ್ಷ ಡಾ.ಸದಾಶಿವ ಪವಾರ ನೆರವೇರಿಸಿ ಏಳು ದಿನಗಳ ಕಾರ್ಯಕ್ರಮಗಳಿಗೆ ಚಾಲನೆ ನೀಡಿ, ಮಾತನಾಡಿದ ಅವರು, ಪ್ರತಿ ವರ್ಷ ದೇಶಾದ್ಯಂತ ರಾಷ್ಟ್ರೀಯ ಸಹಕಾರ ಯುನಿಯನ್ ನವದೆಹಲಿ ಇವರ ಮಾರ್ಗದರ್ಶನದಲ್ಲಿ ನವೆಂಬರ್ 14 ರಿಂದ 20 ರವರೆಗೆ ಅಖಿಲ ಭಾರತ ಸಹಕಾರ ಸಪ್ತಾಹವನ್ನು ವಿವಿಧ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಮೂಲಕ ಸತತವಾಗಿ 7 ದಿನಗಳವರೆಗೆ ಆಚರಣೆ ಮಾಡಲಾಗುತ್ತಿದೆ ಎಂದರು.ಅಂದೇ ದೇಶದ ಮಾಜಿ ಪ್ರಧಾನಮಂತ್ರಿ ಜವಾಹರಲಾಲ್ ನೆಹರು ಅವರ ಹುಟ್ಟುಹಬ್ಬವಾಗಿದ್ದು ಅವರು ಸಹಕಾರ ಚಳುವಳಿ ಬೆಳವಣಿಗೆ ನೀಡಿದ ಪ್ರೋತ್ಸಾಹಕ್ಕಾಗಿ ಅವರಿಗೆ ಕೃತಜ್ಞತೆ ಅರ್ಪಿಸಲಾಗುತ್ತಿದೆ ಎಂದು ತಿಳಿಸಿದರು. ಈ ಬಾರಿಯ ಸಪ್ತಾಹದ ಧ್ಯೇಯ ವಿಕಸಿತ ಭಾರತ ನಿರ್ಮಾಣದಲ್ಲಿ ಸಹಕಾರ ಸಂಸ್ಥೆಗಳ ಪಾತ್ರ ಎಂಬುವುದಾಗಿದೆ. 2025ರ ವೇಳೆಗೆ ರಾಷ್ಟ್ರ 5 ಟ್ರೀಲಿಯನ್ ಅರ್ಥ ವ್ಯವಸ್ಥೆಯನ್ನು ಹೊಂದಬೇಕು. 2047ರ ಸ್ವಾತಂತ್ರ್ಯ ಶಮಾತನೋತ್ಸವದ ವೇಳೆಗೆ 30 ಟ್ರೀಲಿಯನ್ ಡಾಲರ್ ಅರ್ಥ ವ್ಯವಸ್ಥೆ ಹೊಂದಬೇಕೆಂಬ ಮಹತ್ತರವಾದ ಆಕಾಂಕ್ಷೆಯನ್ನು ಕೇಂದ್ರ ಸರ್ಕಾರ ಹೊಂದಿದೆ ಎಂದು ತಿಳಿಸಿದರು.ಸಹಕಾರ ಸಂಘಗಳ ನಿವೃತ್ತ ಸಹಾಯಕ ನಿಬಂಧಕ ಎ.ಎಸ್.ಚಂದಾವಾಲೆ ಮಾತನಾಡಿ, ಸಹಕಾರ ಸಚಿವಾಲಯದ ನೂತನ ಪ್ರಯತ್ನಗಳ ಮೂಲಕ ಸಹಕಾರ ಚಳುವಳಿಯನ್ನು ಬಲಪಡಿಸುವ ವಿಷಯದ ಕುರಿತು ಸವಿಸ್ತಾರವಾಗಿ ಉಪನ್ಯಾಸ ನೀಡಿದರು.ಶ್ರೀ ಶಿವಾಜಿ ಮಹಾರಾಜ್ ಕೋ-ಆಪ್. ಕ್ರೆಡಿಟ್ ಸೊಸಾಯಿಟಿಯ ಸನ್ 2023-24ನೇ ಸಾಲಿನ ನಿವ್ವಳ ಲಾಭದಿಂದ ತೆಗೆದಿರಿಸಿದ್ದ ಸಹಕಾರ ಶಿಕ್ಷಣ ನಿಧಿ ₹1,55,430 ಗಳ ಚೆಕ್ಕನ್ನು ಜಿಲ್ಲಾ ಸಹಕಾರಿ ಯುನಿಯನ್ ಮೂಲಕ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು ಇವರಿಗೆ ನೀಡಲಾಯಿತು.
ಜಿಲ್ಲಾ ಯುನಿಯನ್ ಉಪಾಧ್ಯಕ್ಷ ಎಸ್.ಎಸ್.ತಳೇವಾಡ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಹಕಾರಿ ಯುನಿಯನ್ ನಿರ್ದೇಶಕರುಗಳಾದ ಕೆ.ಬಿ.ಪಾಟೀಲ, ಎಂ.ಸಿ.ಮುಲ್ಲಾ, ಆರ್.ಎಂ.ತೋಟದ, ಸಹಕಾರ ಸಂಘಗಳ ಉಪನಿಬಂಧಕಿ ಎಸ್.ಕೆ.ಭಾಗ್ಯಶ್ರೀ, ಸಹಕಾರ ಅಭಿವೃದ್ಧಿ ಅಧಿಕಾರಿ ಎಸ್.ಡಿ.ಮನಗೂಳಿ, ಸಂಘದ ಉಪಾಧ್ಯಕ್ಷ ಶಂಕರ ಕನಸೆ, ನಿರ್ದೇಶಕರುಗಳಾದ ಸಂಜಯ ಜಂಬೂರೆ, ಮಹಾದೇವ ಪವಾರ, ಸರೋಜನಿ ನಿಕ್ಕಂ, ಅಂಬುತಾಯಿ ಜಾಧವ, ಪ್ರಧಾನ ವ್ಯವಸ್ಥಾಪಕ ಸಂಜಯ ಜಾಧವ, ಸಹಾಯಕ ವ್ಯವಸ್ಥಾಪಕ ಅಂಬಾದಾಸ ಚವ್ಹಾಣ, ವಿಜಯಪುರ ಜಿಲ್ಲಾ ಸಹಕಾರಿ ಯುನಿಯನ್ ಸಿಬ್ಬಂದಿ, ಸಂಘದ ಸದಸ್ಯರು, ಸಿಬ್ಬಂದಿ ಹಾಗೂ ಪಿಗ್ಮಿ ಏಜೆಂಟರು ಉಪಸ್ಥಿತರಿದ್ದರು.