ಶೋಷಣೆಮುಕ್ತ ಸಮಾಜ ನಿರ್ಮಾಣಕ್ಕೆ ಕಾನೂನು ಸಹಕಾರಿ: ರವಿಬಾಬು ಪೂಜಾರ

| Published : Jul 25 2025, 12:31 AM IST

ಶೋಷಣೆಮುಕ್ತ ಸಮಾಜ ನಿರ್ಮಾಣಕ್ಕೆ ಕಾನೂನು ಸಹಕಾರಿ: ರವಿಬಾಬು ಪೂಜಾರ
Share this Article
  • FB
  • TW
  • Linkdin
  • Email

ಸಾರಾಂಶ

ರಕ್ಷಣಾ ನೀತಿ ಕೇವಲ ಕಾಗದದ ನಿಯಮವಲ್ಲ. ಅದು ಮಾನವೀಯ ಹಕ್ಕುಗಳ ಸಂರಕ್ಷಣೆಯ ಬಲವಾದ ಉಪಕರಣ. ಇದು ಅಸಹಾಯಕ ಹೆಣ್ಣುಮಕ್ಕಳು ಅಥವಾ ಯಾವುದೇ ರೀತಿ ದುರುಪಯೋಗಕ್ಕೆ ಒಳಗಾಗಿ ಅಪಾಯದಲ್ಲಿರುವ ವ್ಯಕ್ತಿಗಳನ್ನು ಹಿಂಸೆ, ಶೋಷಣೆ, ಲೈಂಗಿಕ ಶೋಷಣೆಯಿಂದ ರಕ್ಷಿಸಲು ಸಹಕಾರಿ.

ಹಾನಗಲ್ಲ: ಶೋಷಣೆ ಮುಕ್ತ ಸಮಾಜ ನಿರ್ಮಾಣಕ್ಕೆ ರಕ್ಷಣಾ ನೀತಿ ಅತ್ಯಂತ ಪ್ರಬಲ ಸಹಕಾರಿಯಾಗಿದ್ದು, ಕಾನೂನುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಮೂಲಕ ಉತ್ತಮ ಸಮಾಜ ನಿರ್ಮಾಣದ ಕನಸನ್ನು ನನಸು ಮಾಡೋಣ ಎಂದು ನ್ಯಾಯವಾದಿ ರವಿಬಾಬು ಪೂಜಾರ ತಿಳಿಸಿದರು.ತಾಲೂಕಿನ ಸಮ್ಮಸಗಿ ಗ್ರಾಮದಲ್ಲಿ ಲೋಯಲಾ ವಿಕಾಸ ಕೇಂದ್ರ ಆಯೋಜಿಸಿದ್ದ ರಕ್ಷಣಾ ನೀತಿ ಮತ್ತು ಮಾಹಿತಿ ಹಕ್ಕು ಕುರಿತ ವಿಚಾರಸಂಕಿರಣದಲ್ಲಿ ಮಾತನಾಡಿ, ರಕ್ಷಣಾ ನೀತಿ ಕೇವಲ ಕಾಗದದ ನಿಯಮವಲ್ಲ. ಅದು ಮಾನವೀಯ ಹಕ್ಕುಗಳ ಸಂರಕ್ಷಣೆಯ ಬಲವಾದ ಉಪಕರಣ. ಇದು ಅಸಹಾಯಕ ಹೆಣ್ಣುಮಕ್ಕಳು ಅಥವಾ ಯಾವುದೇ ರೀತಿ ದುರುಪಯೋಗಕ್ಕೆ ಒಳಗಾಗಿ ಅಪಾಯದಲ್ಲಿರುವ ವ್ಯಕ್ತಿಗಳನ್ನು ಹಿಂಸೆ, ಶೋಷಣೆ, ಲೈಂಗಿಕ ಶೋಷಣೆಯಿಂದ ರಕ್ಷಿಸಲು ಸಹಕಾರಿಯಾದುದು.

ಇಂತಹ ಕಾನೂನಿನ ಅರಿವು ಮೂಡಿಸುವ ಅಗತ್ಯವಿದೆ. ಇಂತಹ ಘಟನೆಗಳು ಗಮನಕ್ಕೆ ಬಂದರೆ ಕೂಡಲೇ ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತ ನೀಡುವ ಮೂಲಕ ಅಸಹಾಯಕರನ್ನು ರಕ್ಷಿಸಲು ಮುಂದಾಗಬೇಕು. ನಮ್ಮ ಹಕ್ಕುಗಳನ್ನು ಪಡೆಯಲು ಹಿಂಜರಿಯುವ ಅಗತ್ಯವಿಲ್ಲ. ಪ್ರಜಾಪ್ರಭುತ್ವದಲ್ಲಿ ಇಂತಹ ಕಾನೂನುಗಳಿಗೆ ಹೆಚ್ಚು ಮನ್ನಣೆ ಇದೆ. ಈ ವಿಷಯದಲ್ಲಿ ನಾಯಕರಾದವರು ವಿಶೇಷ ಕಾಳಜಿ ವಹಿಸಬೇಕು. ಅಲ್ಲದೆ ಸಮಾಜಮುಖಿ ಸೇವೆ ಇಂದಿನ ಅಗತ್ಯವಾಗಿದೆ. ಎಲ್ಲದರಲ್ಲೂ ಪಾರದರ್ಶಕತೆ ಬೇಕು ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಲೊಯೋಲ ವಿಕಾಸ ಕೇಂದ್ರದ ಸಹನಿರ್ದೇಶಕರಾದ ಜೆಸನ್ ಪಾಯ್ಸ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲೆ ದೌರ್ಜನ್ಯಗಳು ಹೆಚ್ಚಾಗುತ್ತಿದ್ದು, ಅವುಗಳನ್ನು ಮೆಟ್ಟಿ ನಿಲ್ಲಲು ಕಾನೂನಿನ ಅರಿವು ಮತ್ತು ಅವಶ್ಯಕತೆ ಬಹಳಷ್ಟಿದೆ. ಪ್ರತಿ ಗ್ರಾಮದಲ್ಲಿ ಕಾನೂನು ಜಾಗೃತಿ ಬೇಕಾಗಿದೆ. ಕಾನೂನು ಅರಿವಿದ್ದರೆ ಹಲವು ಸಮಸ್ಯೆಗಳಿಗೆ ಪರಿಹಾರ ಸಹಜವಾಗಿಯೇ ಇದೆ. ಇದನ್ನು ಎಲ್ಲರೂ ಅರಿಬೇಕು ಎಂಸಿದರು.

ರಮ್ಯಾ ಪೂಜಾರ ಕಾರ್ಯಕ್ರಮ ನಿರೂಪಿಸಿದರು, ಸಂಧ್ಯಾ ಗೊಲ್ಲರ ಸ್ವಾಗತಿಸಿದರು. ಉದಯಕುಮಾರ ವಂದಿಸಿದರು.