ಕುರಿಗಾಹಿಗಳ ರಕ್ಷಣೆಗೆ ಕಾನೂನು ಜಾರಿ: ಟಿ.ಬಿ.ಜಯಚಂದ್ರ

| Published : Sep 05 2025, 01:00 AM IST

ಕುರಿಗಾಹಿಗಳ ರಕ್ಷಣೆಗೆ ಕಾನೂನು ಜಾರಿ: ಟಿ.ಬಿ.ಜಯಚಂದ್ರ
Share this Article
  • FB
  • TW
  • Linkdin
  • Email

ಸಾರಾಂಶ

ಜಗತ್ತಿನಲ್ಲಿ ಅಧರ್ಮ ಹೆಚ್ಚಾದಾಗ ಧರ್ಮ ಸಂಸ್ಥಾಪನೆಗಾಗಿ ವಿಷ್ಣುವು ಭೂಮಿಯಲ್ಲಿ ಕೃಷ್ಣನಾಗಿ ಅವತರಿಸಿದ ದಿನವೇ ನಮಗೆ ಹಬ್ಬವಾಗಿದೆ ಎಂದ ಶಾಸಕ ಟಿ.ಬಿ.ಜಯಚಂದ್ರ ಹೇಳಿದರು.

ಕನ್ನಡಪ್ರಭ ವಾರ್ತೆ ಶಿರಾ ಶ್ರೀಕೃಷ್ಣ ಪರಮಾತ್ಮ, ಜಗತ್ತಿನಲ್ಲಿ ಅಧರ್ಮ ಹೆಚ್ಚಾದಾಗ ಧರ್ಮ ಸಂಸ್ಥಾಪನೆಗಾಗಿ ವಿಷ್ಣುವು ಭೂಮಿಯಲ್ಲಿ ಕೃಷ್ಣನಾಗಿ ಅವತರಿಸಿದ ದಿನವೇ ನಮಗೆ ಹಬ್ಬವಾಗಿದೆ ಎಂದ ಶಾಸಕ ಟಿ.ಬಿ.ಜಯಚಂದ್ರ ಹೇಳಿದರು.

ಅವರು ತಾಲೂಕಿನ ಗೌಡಗೆರೆ ಹೋಬಳಿಯ ಬೇವಿನಹಳ್ಳಿ ಗ್ರಾಮದ ಪುಣ್ಯಕೋಟಿ ವೇದಿಕೆಯಲ್ಲಿ ಆಯೋಜಿಸಿದ್ದ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಶ್ರೀ ಕೃಷ್ಣ ಪರಮಾತ್ಮ ಯದುಕುಲ ವಂಶಕ್ಕೆ ಸೇರಿದವನು, ವಿಷ್ಣುವಿನ ೮ನೇ ಅವತಾರ, ಶ್ರೀ ಕೃಷ್ಣ ಹುಟ್ಟಿದ ಊರು ಮಥುರ ಆಗಿದೆ.ನಗರದ ಕಾರಾಗೃಹದಲ್ಲಿ, ದೇವಕಿ ಮತ್ತು ವಸುದೇವ ದಂಪತಿಗಳಿಗೆ ಜನಿಸಿದನು ಎಂದು ಪುರಾಣಗಳು ಉಲ್ಲೇಖಿಸುತ್ತವೆ. ಕಾಡುಗೊಲ್ಲ ಸಮುದಾಯದ ಮೂಲ ಕಸುಬು ಕುರಿ ಕಾಯುವ ಕಾಯಕ, ದೂರದ ಊರುಗಳಿಗೆ ಕುರಿಕಾಯುವ ಸಲುವಾಗಿ ವಲಸೆ ಹೋಗುವುದು ವಾಡಿಕೆ, ಇತ್ತೀಚಿನ ದಿನಗಳಲ್ಲಿ ಕುರಿಗಾಹಿಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆದ ಪ್ರಕರಣಗಳು ದಾಖಲಾಗುತ್ತಿದ್ದು ಕುರಿಗಾಗಿಗಳ ರಕ್ಷಣೆಗೆ ವಿಧಾನ ಮಂಡಲ ಅಧಿವೇಶನದಲ್ಲಿ ಸರಕಾರ ವಿಶೇಷ ಕಾನೂನು ಜಾರಿಗೊಳಿಸಿದೆ ಇದು ದೇಶದಲ್ಲೇ ಮೊದಲು ಎಂದರು.ವಧಾಗಾರ ಶೀಘ್ರ ಉದ್ಘಾಟನೆ: ಶಿರಾ ತಾಲೂಕಿನ ತಾವರೆಕೆರೆ ಸಮೀಪದ ಚೀಲನಹಳ್ಳಿಯಲ್ಲಿ ೨೦ ಎಕರೆ ಜಾಗದಲ್ಲಿ ಅತ್ಯಾಧುನಿಕ ವಧಾಗಾರ ನಿರ್ಮಾಣವಾಗಿದ್ದು ಶೀಘ್ರದಲ್ಲೇ ಉದ್ಘಾಟನೆಯಾಗಲಿದೆ. ಕುರಿ ಮತ್ತು ಮೇಕೆ ಮಾಂಸ ರಫ್ತನ್ನು ಈ ವಧಾಗಾರ ಉತ್ತೇಜಿಸಲಿದ್ದು, ಸ್ಥಳೀಯರಿಗೆ ಉದ್ಯೋಗ ಅವಕಾಶ ನೀಡುವ ಸಾಧ್ಯತೆ ಇದೆ., ಖಾಸಗಿ ಸಂಸ್ಥೆಯವರು ವಧಾಗಾರ ನಡೆಸಲು ಮುಂದೆ ಬಾರದೇ ಇದ್ದಲ್ಲಿ, ವಧಾಗಾರವನ್ನು ಗೊಲ್ಲ ಸಮುದಾಯಕ್ಕೆ ಸಂಸ್ಥೆಯೊಂದನ್ನು ಸ್ಥಾಪಿಸಿ ವ್ಯವಹರಿಸಲು ಅನುಕೂಲ ಮಾಡಿಕೊಡಲಾಗುವುದು ಎಂದರು. ಹಿರಿಯೂರು ಕ್ಷೇತ್ರದ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಮಾತನಾಡಿ ಶ್ರೀ ಕೃಷ್ಣ ಜನ್ಮಾಷ್ಠಮಿ ಹಬ್ಬವನ್ನು ಒಂದು ಸಮುದಾಯಕ್ಕೆ ಸೀಮಿತವಾಗಿ ಆಚರಿಸುವಂತಹದಲ್ಲ, ಇಡೀ ಮನುಕುಲಕ್ಕೆ ಭಗವದ್ಗೀತೆ ಸಾರುವ ಮೂಲಕ ಮನುಷ್ಯ ಹೇಗೆ ತನ್ನ ಬದುಕನ್ನ ನಡೆಸಬೇಕು, ಹುಟ್ಟುಸಾವಿನ ಮಧ್ಯೆ ಹೇಗೆ ನಡೆದುಕೊಳ್ಳಬೇಕು ಎನ್ನುವ ಸಾರಾಂಶವನ್ನು ಶ್ರೀ ಕೃಷ್ಣ ಪರಮಾತ್ಮ ಸಾರಿಹೋಗಿದ್ದಾನೆ ಎಂದರು.

ಶ್ರೀ ಕ್ಷೇತ್ರ ಗೊಲ್ಲಗಿರಿ ಚಿತ್ರದುರ್ಗ ಮಠದ ಶ್ರೀ ಕೃಷ್ಣಯಾದವನಂದಾ ಸ್ವಾಮಿ ಮಾತನಾಡಿ ಪರಮಾತ್ಮ ಬಡವರ ಪರವಾಗಿ ಇರತಕ್ಕಂತ ದೇವರು, ಕೇವಲ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಆಚರಣೆ ಮಾಡಿದರಷ್ಟೇ ಸಾಲದು ಅವರ ತತ್ವ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಕೆಪಿಸಿಸಿ ರಾಜ್ಯ ಒಬಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ತಾ. ಪಂ. ಮಾಜಿ ಸದಸ್ಯ ಬೇವಿನಹಳ್ಳಿ ಸುದರ್ಶನ್, ಮುಖಂಡ ಡಿ ಎಂ ಪಿ ಕರಿಯಣ್ಣ, ಸಿರಾ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶಿವು ಚಂಗಾವರ, ಕೆಪಿಸಿಸಿ ರಾಜ್ಯ ಒಬಿಸಿ ಉಪಾಧ್ಯಕ್ಷ ಹಾರೋಗೆರೆ ಮಹೇಶ್, ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಹರೀಶ್ ,ಮುಖಂಡ ಹನುಮಂತರಾಯ, ರೂಪೇಶ್ ಕೃಷ್ಣಯ್ಯ, ಗ್ರಾಮಾಂತರ ಸಿಪಿಐ ಶ್ರೀನಿವಾಸ್, ಪಿ. ಎಸ್. ಐ. ಚಂದ್ರಶೇಖರ್, ಬೇವಿನಹಳ್ಳಿ ಗ್ರಾ. ಪಂ. ಅಧ್ಯಕ್ಷೆ ಶಾರದಮ್ಮ, ಉಪಾಧ್ಯಕ್ಷೆ ಮಹಾಲಕ್ಷ್ಮಿ , ಮುಖಂಡರಾದ ರಂಗನಾಥ್, ನಾಗರಾಜು ಹಲವಾರು ಮುಖಂಡರು ಗ್ರಾಮಸ್ಥರು ಹಾಜರಿದ್ದರು.