ಸಾರಾಂಶ
ಕನ್ನಡಪ್ರಭ ವಾರ್ತೆ ಮಸ್ಕಿದೇಶಕ್ಕೆ ರೈತ ಬೆನ್ನೆಲುಬು ಹಾಗೆಯೇ ನಮ್ಮ ನ್ಯಾಯಾಂಗಕ್ಕೆ ವಕೀಲರೇ ಬೆನ್ನೆಲುಬು ಆದ್ದರಿಂದ ಕಿರಿಯ ವಕೀಲರು ಬಹಳ ಷ್ಟು ಕಲಿಯಬೇಕು ಮುಂದೆ ನಿಮಗೂ ಅವಕಾಶ ಬರಬಹುದು ಎಂದು ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರಾದ ಅಚ್ಚಪ್ಪ ದೊಡ್ಡ ಬಸವರಾಜ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಎಪಿಎಂಸಿ ಆವರಣದಲ್ಲಿರುವ ಜೆಎಂಎಫ್‌ಸಿ ನ್ಯಾಯಾಲಯದ ಆವರಣದಲ್ಲಿ ತಾಲೂಕು ವಕೀಲರ ಸಂಘದಿಂದ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿ, ಮಸ್ಕಿಯಲ್ಲಿ ಇದೀಗ ನೂತನವಾಗಿ ನ್ಯಾಯಾಲಯ ಆರಂಭವಾಗಿದ್ದು, ಆದ್ದರಿಂದ ಇಂದಿನ ಕಿರಿಯ ವಕೀಲರೇ ಮುಂದೆ ಸೀನಿಯರ್ ವಕೀಲರಾಗಿ ಕಾರ್ಯ ನಿರ್ವಹಿಸುವ ಅವಕಾಶಗಳು ಬರುತ್ತವೆ.ಆದ್ದರಿಂದ ಈಗಿನಿಂದಲೇ ಪ್ರತಿ ಪ್ರಕರಣಗಳಲ್ಲಿ ಎಲ್ಲಾ ರೀತಿಯ ಹೆಚ್ಚೆಚ್ಚು ಜ್ಞಾನ ಪಡೆದುಕೊಂಡು ಸಿದ್ಧತೆಗಳಿಂದ ಇರಬೇಕು. ದೇಶಕ್ಕೆ ರೈತ ಹೇಗೆ ಬೆನ್ನೆಲುಬು ಹಾಗೆಯೇ ನ್ಯಾಯಾಂಗ ವ್ಯವಸ್ಥೆಗೆ ವಕೀಲರು ಬೆನ್ನೆಲುಬಾಗಿದ್ದಾರೆ. ಈಗ ಸುಪ್ರೀಂ ಕೋರ್ಟ್ ಜಡ್ಜ್‌ಮೆಂಟ್ ಪ್ರಕಾರ ವಕೀಲರು ಕಡ್ಡಾಯವಾಗಿ ಮೂರು ವರ್ಷ ಅನುಭವ ಹೊಂದಿರಬೇಕೆಂದು ಹೇಳಿದ್ದಾರೆ. ಆದ್ದರಿಂದ ಎಲ್ಲರೂ ವಕೀಲ ವೃತ್ತಿಯಲ್ಲಿ ಅನುಭವ ಪಡೆದುಕೊಳ್ಳಬೇಕು. ಅಲ್ಲದೆ ಹಿರಿಯ ವಕೀಲರೊಂದಿಗೆ ಪ್ರತಿಯೊಂದು ಪ್ರಕರಣದ ಬಗ್ಗೆ ಚರ್ಚಿಸಿ ಎಂದು ಸಲಹೆ ನೀಡಿದರು.ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ರಾಮಣ್ಣ ನಾಯಕ್, ವಕೀಲರಾದ ಈಶಪ್ಪ ದೇಸಾಯಿ, ಅಮರೇಗೌಡ ತಿಮ್ಮಾಪುರ, ಆನಂದ ರಾಠೋಡ್, ನಿರುಪಾದೆಪ್ಪ ವಕೀಲರು, ಎಸ್ ಎಸ್ ಕುಲಕರ್ಣಿ, ವೇಕೊಂಬ ದೆಸಾಯಿ, ಚೆನ್ನಪ್ಪ ಅರಸೂರು, ಕೆ. ಅಮರೇಗೌಡ, ದುರ್ಗೇಶ್ ಕ್ಯಾತ್ನಟ್ಟಿ, ಮಲ್ಲಪ್ಪ ನಾಗರಬೆಂಚಿ, ಸೇರಿದಂತೆ ಇನ್ನಿತರ ವಕೀಲರು ಇದ್ದರು.--- 22- ಎಂ ಎಸ್ ಕೆ -01: ಮಸ್ಕಿಯ ಜೆಎಂಎಫ್‌ಸಿ ನ್ಯಾಯಾಧೀಶರಾದ ಅಚ್ಚಪ್ಪ ದೊಡ್ಡಬಸವರಾಜ ಮಾತನಾಡಿದರು.