ದುಷ್ಕರ್ಮಿಗಳ ಬಂಧನಕ್ಕೆ ಆಗ್ರಹಿಸಿ ವಕೀಲರಿಂದ ಮನವಿ ಸಲ್ಲಿಕೆ

| Published : Sep 10 2025, 01:03 AM IST

ದುಷ್ಕರ್ಮಿಗಳ ಬಂಧನಕ್ಕೆ ಆಗ್ರಹಿಸಿ ವಕೀಲರಿಂದ ಮನವಿ ಸಲ್ಲಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಮಂಡ್ಯ ರಾಜ್ಯದಲ್ಲೇ ಸಹಬಾಳ್ವೆಗೆ ಹೆಸರು ವಾಸಿಯಾಗಿರುವ ಜಿಲ್ಲೆ. ಈ ಹಿಂದೆ ಯಾವುತ್ತೂ ಆಗದ ಗಲಾಟೆಗಳು ಒಂದು ನಿರ್ದಿಷ್ಟ ಕೋಮಿನ ಯುವಕರಿಂದ ಏಕೆ ಆಗುತ್ತಿವೆ?, ಇದರ ಹಿಂದೆ ಯಾರಿದ್ದಾರೆ. ಹಿಂದೂಗಳ ಪವಿತ್ರ ಗಣೇಶನ ಹಬ್ಬವನ್ನು ಮಾಡಬಾರದೆ. ಗಲಭೆಕೋರರಿಗೆ ಜಾಮೀನು ಸಿಗದಂತೆ ಮೊಕದ್ದಮೆ ದಾಖಲಿಸಬೇಕು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಹಿಂದುಗಳ ಹಬ್ಬಗಳ ವೇಳೆ ಅನ್ಯಕೋಮಿನ ಸಮುದಾಯದ ಯುವಕರು ಹಿಂದೂ ವಿರೋಧಿ ಕೆಲಸ ಮಾಡುತ್ತಿದ್ದಾರೆ. ದುಷ್ಕರ್ಮಿಗಳನ್ನು ಕೂಡಲೇ ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಳಪಡಿಸಬೇಕು ಎಂದು ತಾಲೂಕು ವಕೀಲರ ಸಂಘ ಪಟ್ಟಣದಲ್ಲಿ ತಹಸೀಲ್ದಾರ್ ಎಸ್.ಯು.ಅಶೋಕ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.

ರಾಜ್ಯದಲ್ಲಿ ಗಣೇಶಮೂರ್ತಿ ಮೆರವಣಿಗೆ ಸಮಯದಲ್ಲಿ ಕಿಡಿಗೇಡಿಗಳು ಉಗುಳುವುದು, ಕಲ್ಲು ಹೊಡೆಯವುದು ಸೇರಿದಂತೆ ಅನೇಕ ಅಹಿತಕರ ಘಟನೆಗಳು ನಡೆಯುವಂತೆ ಮಾಡುತ್ತಿದ್ದಾರೆ. ಸರ್ಕಾರ ಕೈ ಕಟ್ಟಿಕುಳಿತುಕೊಳ್ಳಬಾರದು. ಕೋಮು ಗಲಭೆ ಸೃಷ್ಟಿಸುವವರು ಯಾರೆ ಆಗಲಿ. ಅವರಿಗೆ ಕಠಿಣ ಶಿಕ್ಷೆ ವಿಧಿಸುವಂತಹ ಕಾನೂನಿನಡಿ ಮೊಕದ್ದಮೆ ದಾಖಲಿಸಬೇಕು ಎಂದು ಆಗ್ರಹಿಸಿದರು.

ಮಂಡ್ಯ ರಾಜ್ಯದಲ್ಲೇ ಸಹಬಾಳ್ವೆಗೆ ಹೆಸರು ವಾಸಿಯಾಗಿರುವ ಜಿಲ್ಲೆ. ಈ ಹಿಂದೆ ಯಾವುತ್ತೂ ಆಗದ ಗಲಾಟೆಗಳು ಒಂದು ನಿರ್ದಿಷ್ಟ ಕೋಮಿನ ಯುವಕರಿಂದ ಏಕೆ ಆಗುತ್ತಿವೆ?, ಇದರ ಹಿಂದೆ ಯಾರಿದ್ದಾರೆ. ಹಿಂದೂಗಳ ಪವಿತ್ರ ಗಣೇಶನ ಹಬ್ಬವನ್ನು ಮಾಡಬಾರದೆ. ಗಲಭೆಕೋರರಿಗೆ ಜಾಮೀನು ಸಿಗದಂತೆ ಮೊಕದ್ದಮೆ ದಾಖಲಿಸಬೇಕು ಎಂದು ವಕೀಲರು ಆಗ್ರಹಿಸಿದರು.

ವಕೀಲರ ನಿಯೋಗದಲ್ಲಿ ಅಧ್ಯಕ್ಷ ಎಂ.ಆರ್. ನಾಗೇಗೌಡ, ಪ್ರಧಾನ ಕಾರ್ಯದರ್ಶಿ ಎಸ್.ಜೆ. ಮಂಜೇಗೌಡ, ಮಾಜಿ ಅಧ್ಯಕ್ಷ ಎಂ.ಆರ್.ಪ್ರಸನ್ನಕುಮಾರ್, ಉಪಾಧ್ಯಕ್ಷ ಎಸ್.ಎಸ್.ಪುರುಷೋತ್ತಮ್, ಖಜಾಂಚಿ ಪ್ರಸ್ನನಕುಮಾರ್.ಬಿ, ಜಂಟಿ ಕಾರ್ಯದರ್ಶಿ ದೊಡ್ಡಯ್ಯ, ನಿರ್ದೇಶಕರಾದ ಡಿ.ಎನ್.ಗಿರಿಜಾ, ಎಚ್.ಎಸ್.ಶಿವಕುಮಾರ್, ಎಂ.ಎ.ಅವಿನಾಶ್, ಬಿ.ಜೆ.ಪ್ರವೀಣ್, ಎಸ್.ಪ್ರತಾಪ್, ಜನಾರ್ಧನ್ ಜೆ.ಎಂ. ಇದ್ದರು.

ಪಿತೂರಿ ನಡೆಸಿದವರನ್ನು ಶಿಕ್ಷಿಸಲು ಸಿಪಿಐ(ಎಂ) ಆಗ್ರಹ

ಕನ್ನಡಪ್ರಭ ವಾರ್ತೆ ಮಂಡ್ಯ

ಗಣೇಶನ ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆಸಲು ಪಿತೂರಿ ನಡೆಸಿದವರನ್ನು ಪತ್ತೆ ಹಚ್ಚಿ ಶಿಕ್ಷಿಸುವಂತೆ ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಟಿ.ಎಲ್.ಕೃಷ್ಣೇಗೌಡ ಒತ್ತಾಯಿಸಿದರು.

ಕಲ್ಲುತೂರಾಟ ಘಟನೆಯಿಂದ ಉಂಟಾಗಿರುವ ಉದ್ವಿಗ್ನತೆಯಿಂದ ಸೌಹಾರ್ದತೆಗೆ ಧಕ್ಕೆ ಉಂಟಾಗಿದೆ. ಶಾಂತಿ ಮರುಸ್ಥಾಪನೆಗೆ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಮುಂದಾಗಬೇಕು. ಮುಂದೆ ಯಾವುದೇ ಗಲಭೆಯಾಗದಂತೆ ಕ್ರಮ ವಹಿಸಬೇಕಿದೆ. ಸಣ್ಣ ನಿರ್ಲಕ್ಷ್ಯವನ್ನೂ ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುವ ಶಕ್ತಿಗಳ ವಿರುದ್ಧ ಎಚ್ಚರಿಕೆ ವಹಿಸಬೇಕು. ನಿರ್ಲಕ್ಷ್ಯ ತಾಳಿದ ಅಧಿಕಾರಿಗಳನ್ನು ಘಟನೆಗೆ ಹೊಣೆ ಮಾಡುವಂತೆ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಪಡಿಸಿದರು.

ಇಂತಹ ಉದ್ವಿಗ್ನ ಸ್ಥಿತಿಯನ್ನು ರಾಜಕೀಯಕ್ಕೆ ಬಳಸಿಕೊಳ್ಳುವ ಬಿಜೆಪಿಯ ಹುನ್ನಾರಗಳನ್ನು ಜಿಲ್ಲೆಯ ಜನತೆ ಅರ್ಥ ಮಾಡಿಕೊಂಡು ಶಾಂತಿ-ಸೌಹಾರ್ದತೆ ಕಾಪಾಡಿಕೊಳ್ಳುವಂತೆ ಸಾರ್ವಜನಿಕರಲ್ಲಿ ಸಿಪಿಐ(ಎಂ) ಮನವಿ ಮಾಡಿದೆ.

ಗೋಷ್ಠಿಯಲ್ಲಿ ಸಿ.ಕುಮಾರಿ, ಬಿ.ಹನುಮೇಶ್, ಸುಶೀಲಾ, ಚಂದ್ರು ಇತರರಿದ್ದರು.